Webdunia - Bharat's app for daily news and videos

Install App

ಲಿಫ್ಟ್ ಒಳಗೆ ಏನೋ ನಡೆದಿದೆ. ಅದಕ್ಕೆ ಆಕೆ ಬಟ್ಟೆ ಸರಿಪಡಿಸಿಕೊಳ್ಳುತ್ತಾ ಹೊರಗೆ ಬಂದಳು.

Webdunia
ಸೋಮವಾರ, 31 ಮಾರ್ಚ್ 2014 (19:20 IST)
ಪಣಜಿ : ಮಹಿಳಾ ಪತ್ರಕರ್ತೆ ತನ್ನ ಬಟ್ಟೆಯನ್ನು ಸರಿಪಡಿಸಿಕೊಳ್ಳುತ್ತಿರುವುದು ಕ್ಯಾಮೆರಾದಲ್ಲಿ ಸೆರೆ ಸಿಕ್ಕಿದೆ. ಆಕೆ ಲಿಫ್ಟ್‌ ಬಾಗಿಲನ್ನು ತೆಗೆದು ಹೊರಗೆ ಬರುತ್ತಿದ್ದಳು.. ಆ ಸಮಯದಲ್ಲಿ ಆಕೆಯ ಬಟ್ಟೆ ಎತ್ತೆತ್ತಲೋ ಕದಡಿ ಹೋಗಿತ್ತು.. ಲಿಫ್ಟ್‌ ಹೊರಗೆ ಬರುವ ಸಮಯದಲ್ಲಿ ಆಕೆ ತನ್ನ ಬಟ್ಟೆಯನ್ನು ಸರಿಪಡಿಸಿಕೊಳ್ಳುತ್ತಿದ್ದಳು.. ಆಕೆ ತನ್ನ ಕದಡಿದ ಬಟ್ಟೆಯನ್ನು ಸರಿಪಡಿಸಿಕೊಳ್ಳುತ್ತಿದ್ದ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆ ಸಿಕ್ಕಿವೆ. ಈ ಸಂಬಂಧ ತೇಜ್ಪಾಲ್ ಲಿಫ್ಟ್ ಒಳಗೆ ಎನೋ ಮಾಡಿದ್ದಾನೆ ಅನ್ನೋದು ಖಚಿತವಾಗುತ್ತಿದೆ ಎಂದು ಪೋಲೀಸ್‌ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ರು.

ತೆಹೆಲ್ಕಾ ಪತ್ರಿಕೆಯ ಮಾಜಿ ಸಂಪಾದಕ ತರುಣ್ ತೇಜಪಾಲ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬುದನ್ನು ಪುಷ್ಟೀಕರಿಸುವಂತಹ ಸಿಸಿಟಿವಿ ದೃಶ್ಯಾವಳಿಗಳು ನಮಗೆ ಸಿಕ್ಕಿವೆ ಲಿಫ್ಟ್‌ ಒಳಗಿಂದ ಮಹಿಳಾ ಪತ್ರಕರ್ತೆ ತನ್ನ ಬಟ್ಟೆ ಸರಿಪಡಿಸಿಕೊಳ್ಳುತ್ತಾ ಬಂದಿರೋದನ್ನು ನೋಡಿದ್ರೆ ಲಿಫ್ಟ್‌ ಒಳಗೆ ಏನೋ ನಡೆದಿದೆ ಅಂತ ಗೊತ್ತಾಗುತ್ತೆ ಎಂದು ಪೋಲೀಸರು ಶಂಕೆ ವ್ಯಕ್ತಪಡಿಸಿದ್ರು.

ಗೋವಾದ ಹೋಟೆಲ್ ನಲ್ಲಿ ತರುಣ್ ತೇಜಪಾಲ್ ತನ್ನ ಮಹಿಳಾ ಸಹೋದ್ಯೋಗಿ ಜೊತೆ ಲಿಫ್ಟ್ ಒಳಗೆ ಹೋದ ದೃಶ್ಯಾವಳಿಗಳು ಹೊಟೆಲ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಮಹಿಳಾ ಪತ್ರಕರ್ತೇ ಲಿಫ್ಟ್‌ ಒಳಗಿನಿಂದ ಬಟ್ಟೆ ಸರಿಪಡಿಸಿಕೊಂಡು ಹೊರ ಬರುವುದು ಮತ್ತು ತೇಜ್ಪಾಲ್ ಆಕೆಯ ಕೈ ಹಿಡಿದುಕೊಂಡು ಲಿಫ್ಟ್‌ ಒಳಗೆ ಎಳೆದುಕೊಂಡು ಹೋಗುವುದು ಎಲ್ಲವೂ ಸಿಸಿಟಿವಿಯಲ್ಲಿ ಸೆರೆ ಸಿಕ್ಕಿವೆ..!

PR
ನವೆಂಬರ್ 7 ರಂದು ಹೋಟೆಲ್ ನ 7ನೇ ಬ್ಲಾಕ್ ನ ಲಿಫ್ಟ್ ಗೆ ತೇಜಪಾಲ್ ತನ್ನ ಮಹಿಳಾ ಸಹೋದ್ಯೋಗಿ ಜೊತೆ ಪ್ರವೇಶಿಸಿರುವುದು ಸಿಸಿಟಿವಿ ದೃಶ್ಯದಲ್ಲಿ ಸ್ಪಷ್ಟವಾಗಿದೆ. ರಾತ್ರಿ 9 ಗಂಟೆಯ ಸಮಯದಲ್ಲಿ ಲಿಫ್ಟ್‌ನಲ್ಲಿ ಹೋಗುತ್ತಿದ್ದ ವೇಳೆಯಲ್ಲಿ ತೇಜಪಾಲ್, ಮಹಿಳಾ ಪತ್ರಕರ್ತೆಯ ಭುಜದ ಮೇಲೆ ಕೈಹಾಕಿದ್ದರು..!

ಇದಾದ ಒಂದೂವರೆ ಗಂಟೆ ಬಳಿಕ ನೆಲಮಹಡಿಯ ಅದೇ ಲಿಫ್ಟ್ ಬಳಿ ತೇಜಪಾಲ್ ಪ್ರತ್ಯಕ್ಷರಾಗಿಬಿಡ್ತಾರೆ. ನಂತರ ಮಹಿಳಾ ಸಹೋದ್ಯೋಗಿಯನ್ನು ಹಿಡಿದು ಲಿಫ್ಟ್‌ ಒಳಗೆ ಎಳೆದುಕೊಳ್ಳುತ್ತಾರೆ. ಒಳಗೆ ಏನೇನೋ ನಡೆದಿತ್ತಂತೆ..! ನಂತರ ಎರಡು ನಿಮಿಷಗಳ ಬಳಿಕ ಲಿಫ್ಟ್ 2ನೇ ಮಹಡಿಯಲ್ಲಿ ತೆರೆದುಕೊಳ್ಳುತ್ತೆ. ಆಗ ಮಹಿಳಾ ಸಹೋದ್ಯೋಗಿ ’ತಾನು ಹಾಕಿಕೊಂಡಿದ್ದ ಬಟ್ಟೆಯನ್ನ ಸರಿಮಾಡಿಕೊಳ್ಳುತ್ತಾ ಲಿಫ್ಟ್‌‌ನಿಂದ ಹೊರಗೆ ಬರುತ್ತಾಳೆ. ಬಳಿಕ ಮೆಟ್ಟಿಲುಗಳನ್ನು ಇಳಿದು ಓಡಿ ಹೋಗುತ್ತಾಳೆ. ತೇಜಪಾಲ್ ಅವಳನ್ನೇ ಹಿಂಬಾಲಿಸಿಕೊಂಡು ಓಡಿ ಹೋಗ್ತಾನೆ. ಮುಂದೆ ಏನಾಯ್ತು ಅನ್ನೋದು ಸಿಸಿಟಿವಿಯಲ್ಲಿ ಸೆರೆಯಾಗಿಲ್ಲ.

ಈ ಎಲ್ಲಾ ದೃಶ್ಯಗಳನ್ನು ನೋಡಿದ ನಂತರ, ತೇಜ್ಪಾಲ್‌ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂಬ ಪೋಲೀಸರ ಅನುಮಾನ ಇನ್ನಷ್ಟು ಬಲವಾಗಿದೆ. ಆದರೆ ತನಿಖೆ ಬಳಿಕವೇ ನಿಜಾಂಶ ಹೊರಬರಬೇಕಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ