Select Your Language

Notifications

webdunia
webdunia
webdunia
webdunia

ಲಡಕ್‌ನಲ್ಲಿ ಭಾರತ-ಬ್ರಿಟನ್ ಸಮರಾಭ್ಯಾಸ

ಲಡಕ್‌ನಲ್ಲಿ ಭಾರತ-ಬ್ರಿಟನ್ ಸಮರಾಭ್ಯಾಸ
ನವದೆಹಲಿ , ಸೋಮವಾರ, 17 ಸೆಪ್ಟಂಬರ್ 2007 (11:47 IST)
ಭಾರತ ಮತ್ತು ಬ್ರಿಟನ್‌ನ ವಿಶೇಷ ಪಡೆಗಳು ಲಡಕ್‌ನ ಮುಂಚೂಣಿ ಪ್ರದೇಶದಲ್ಲಿ ಸೋಮವಾರದಿಂದ 24 ದಿನಗಳ ಕಾಲದ ಜಂಟಿ ಸಮರಾಭ್ಯಾಸ ನಡೆಸಲಿವೆ. "ಹಿಮಾಲಯನ್ ವಾರಿಯರ್"ಸಂಕೇತನಾಮದ ಈ ಅಭ್ಯಾಸ ಅಕ್ಬೋಬರ್ 11ರವರೆಗೆ ಮುಂದುವರಿಯಲಿದೆ.

ಈ ಸಂದರ್ಭದಲ್ಲಿ ಪರ್ವತಪ್ರದೇಶಗಳಲ್ಲಿ ಭಯೋತ್ಪಾದಕರ ಅಡಗುತಾಣಗಳನ್ನು ಗುರಿಯಾಗಿರಿಸಿದ ಅತ್ಯುಚ್ಛ ಪ್ರದೇಶದ ಅಭ್ಯಾಸಗಳನ್ನು ಅವು ಕೈಗೊಳ್ಳಲಿವೆ.

ಹಿಮಚ್ಛಾದಿತ ಹಿಮಾಲಯದ ಅತ್ಯುನ್ನತ ಶಿಖರಗಳಲ್ಲಿ 150 ಬ್ರಿಟನ್ ನೌಕಾ ಕೊಮೆಂಡೊಗಳು ಮತ್ತು ಅಷ್ಟೇ ಸಂಖ್ಯೆಯ ಭಾರತದ ವಿಶೇಷ ಪಡೆಗಳು ದೀರ್ಘಕಾಲ ಚಳಿ ಸಹಿಸಿಕೊಂಡು ಉಳಿಯುವುದು ಹೇಗೆಂಬ ಬಗ್ಗೆ ಅಭ್ಯಾಸ ನಡೆಸಲಿವೆ ಎಂದು ಸೇನಾಧಿಕಾರಿಗಳು ಭಾನುವಾರ ತಿಳಿಸಿದರು.

3,500 ಮೀಟರ್‌ಗಳಿಗಿಂತ ಎತ್ತರದ ಪ್ರದೇಶಗಳಲ್ಲಿ ಸ್ವಯಂಪೂರ್ಣ ಸಣ್ಣ ಪಡೆಗಳಿಂದ ಆಶ್ಟರ್ಯಕರ "ಹಿಟ್ ಅಂಡ್ ರನ್" ದಾಳಿ ಮುಂತಾದ ಕಮ್ಯಾಂಡೊ ಕಾರ್ಯಾಚರಣೆಗಳು ಈ ಅಭ್ಯಾಸಗಳಲ್ಲಿ ಒಳಗೊಂಡಿದೆ.

ಬ್ರಿಟನ್ ಮನವಿ ಮೇಲೆ ಜಂಟಿ ಸಮರಾಭ್ಯಾಸಕ್ಕೆ ಲಡಕ್ ಪ್ರದೇಶವನ್ನು ಆಯ್ದುಕೊಳ್ಳಲಾಗಿದೆ. ಅಮೆರಿಕ ನೇತೃತ್ವದ ಸಮ್ಮಿಶ್ರ ಪಡೆಗಳು ತಾಲಿಬಾನ್ ಉಗ್ರರ ವಿರುದ್ಧ ಹೋರಾಡುತ್ತಿರುವ ಆಘ್ಘಾನಿಸ್ತಾನದ ಕಡಿದಾದ ಪರ್ವತಪ್ರದೇಶಗಳಿಗೆ ಲಡಕ್ ಕೂಡ ಹೋಲಿಕೆಯಾಗುವುದರಿಂದ ಅದನ್ನು ಆಯ್ಕೆಮಾಡಲಾಗಿದೆ.

ಮುಂಚೂಣಿ ಪ್ರದೇಶದಲ್ಲಿ ಇದು ಎರಡನೇ ಸಮರಾಭ್ಯಾಸವಾಗಿದೆ. ಇದೇ ಪ್ರದೇಶದಲ್ಲಿ ಕಳೆದ ವರ್ಷ ಭಾರತ ಮತ್ತು ಅಮೆರಿಕದ ವಿಶೇಷ ಪಡೆಗಳು ಪರ್ವತ ಸಮಾರಾಭ್ಯಾಸಗಳನ್ನು ಹಮ್ಮಿಕೊಂಡಿದ್ದು, ಚೀನ ಹುಬ್ಬೇರಿಸುವಂತೆ ಮಾಡಿತ್ತು.

ಸಮರಾಭ್ಯಾಸವು ಹೆಲಿಕಾಪ್ಟರ್ ಕಾರ್ಯಾಚರಣೆ ಒಳಗೊಂಡಿದ್ದು, ಉನ್ನತ ಪರ್ವತಗಳಲ್ಲಿ ಪಡೆಗಳ ಸಣ್ಣ ಘಟಕಗಳನ್ನು ಇಳಿಸುವುದು ಸೇರಿದಂತೆ ದೀರ್ಘಕಾಲ ಅಲ್ಲಿ ಉಳಿದುಕೊಳ್ಳುವ ಪರೀಕ್ಷೆಗಳು ಒಳಗೊಂಡಿವೆ.

Share this Story:

Follow Webdunia kannada