Select Your Language

Notifications

webdunia
webdunia
webdunia
webdunia

ರೇವ್ ಪಾರ್ಟಿಯಲ್ಲಿ ಮುಕ್ತ ಕಾಮಕೇಳಿ: 27 ಯುವಜನರ ಬಂಧನ

ರೇವ್ ಪಾರ್ಟಿಯಲ್ಲಿ ಮುಕ್ತ ಕಾಮಕೇಳಿ: 27 ಯುವಜನರ ಬಂಧನ
, ಸೋಮವಾರ, 31 ಮಾರ್ಚ್ 2014 (18:58 IST)
ಭೂಪಾಲ್: ಕಿವಿಗಡಚಿಕ್ಕುವ ಸಂಗೀತ, ಅರೆಬೆತ್ತಲೆ ಉಡುಪುಗಳನ್ನು ಧರಿಸಿ ರೇವ್ ಪಾರ್ಟಿಯಲ್ಲಿ ಭಾಗವಹಿಸಿದ್ದ 27 ಯುವಕ, ಯುವತಿಯರು ಅರೆನಗ್ನ ಸ್ಥಿತಿಯಲ್ಲಿ ಭೂಪಾಲ್ ಚುನಾಭಟ್ಟಿ ಪ್ರದೇಶದಲ್ಲಿ ಸಿಕ್ಕಿಬಿದ್ದಿದ್ದಾರೆ. ಪೊಲೀಸರು ಎಲ್ಲರನ್ನೂ ವಶಪಡಿಸಿಕೊಂಡು ಅವರ ಬಳಿಯಿದ್ದ ವಸ್ತುಗಳನ್ನು ತಪಾಸಣೆ ಮಾಡಿದಾಗ ಸಿಕ್ಕಿದ್ದೇನು? 10 ಕೆಜಿ ಮಾದಕವಸ್ತುಗಳು, ಸಿರಿಂಜ್‌ಗಳು, ಕಾಂಡೋಮ್‌ಗಳು. ಅವರಲ್ಲಿ ಬಹುತೇಕ ಮಂದಿ ಮಿತಿ ಮೀರಿ ಮದ್ಯಪಾನ ಮಾಡಿದ್ದನ್ನು ಪೊಲೀಸರು ಪತ್ತೆಹಚ್ಚಿದರು. ಚುನಾಭಟ್ಟಿ ಪ್ರದೇಶದ ಹುಕ್ಕಾ ಲೋಂಗ್‌ನಲ್ಲಿ ರೇವ್ ಪಾರ್ಟಿ ಆಯೋಜಿಸಿದ್ದಾರೆಂಬ ಬಗ್ಗೆ ತಮಗೆ ಸುಳಿವು ಸಿಕ್ಕಿತು. ನಾವು 10 ಜನಅಧಿಕಾರಿಗಳ ತಂಡವನ್ನು ಸ್ಥಾಪಿಸಿ ಅಕ್ರಮ ಕ್ಲಬ್‌ಮೇಲೆ ದಾಳಿ ಮಾಡಿ 27 ಜನರನ್ನು ಬಂಧಿಸಿದೆವು.

ಅವರಲ್ಲಿ ಬಹುತೇಕ ಜನರು ಕಾಲೇಜು ವಿದ್ಯಾರ್ಥಿಗಳಾಗಿದ್ದು, 18-26 ವರ್ಷ ವಯಸ್ಸಿನವರಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರಲ್ಲಿ ಇಬ್ಬರುಅಪ್ರಾಪ್ತ ವಯಸ್ಕ ಬಾಲಕರೂ ಕೂಡ ಇದ್ದರು. ಕೆಲವು ಯುವಕ, ಯುವತಿಯರು ಮುಕ್ತ ಕಾಮಕೇಳಿಯಲ್ಲಿ ತಲ್ಲೀನರಾಗಿದ್ದು, ಈ ಕುರಿತು ತನಿಖೆ ನಡೆಸಲಾಗುತ್ತಿದೆ. ಐಪಿಸಿ ಸೆಕ್ಷನ್ ಅಡಿಯಲ್ಲಿ ಅವರ ವಿರುದ್ಧ ಕೇಸ್ ದಾಖಲಿಸಲಾಗಿದೆ.

Share this Story:

Follow Webdunia kannada