Select Your Language

Notifications

webdunia
webdunia
webdunia
webdunia

ರೇಪ್ ಯತ್ನಕ್ಕೆ ಪ್ರತಿರೋಧ: ಬಾಲಕಿಯ ಮೈಗೆ ಬೆಂಕಿ ಹಚ್ಚಿದ ದುಷ್ಕರ್ಮಿ

ರೇಪ್ ಯತ್ನಕ್ಕೆ ಪ್ರತಿರೋಧ: ಬಾಲಕಿಯ ಮೈಗೆ ಬೆಂಕಿ ಹಚ್ಚಿದ ದುಷ್ಕರ್ಮಿ
, ಮಂಗಳವಾರ, 1 ಏಪ್ರಿಲ್ 2014 (11:34 IST)
ಪಹಾಸು, ಬುಲಂದ್‌ಶಹರ್: ಉತ್ತರಪ್ರದೇಶದ ಬುಲಂದ್‌ಶಹರ್ ಜಿಲ್ಲೆಯಲ್ಲಿ 16 ವರ್ಷ ವಯಸ್ಸಿನ ಬಾಲಕಿಯೊಬ್ಬಳು ತನ್ನ ಮೇಲೆ ದುಷ್ಕರ್ಮಿಯೊಬ್ಬನ ರೇಪ್ ಯತ್ನಕ್ಕೆ ಪ್ರತಿರೋಧ ಒಡ್ಡಿದಾಗ ಅವಳ ಮೈಗೆ ಆರೋಪಿ ಬೆಂಕಿ ಹಚ್ಚಿದ ದಾರುಣ ಘಟನೆ ನಡೆದಿದೆ. 9 ತರಗತಿಯ ವಿದ್ಯಾರ್ಥಿನಿಗೆ ಇದರಿಂದಾಗಿ ಶೇ. 90ರಷ್ಟು ದೇಹ ಸುಟ್ಟುಹೋಗಿದ್ದು, ಆಲಿಗಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸಾವು, ಬದುಕಿನ ಹೋರಾಟ ನಡೆಸಿದ್ದಾಳೆ. ಪಹಾಸು ಪ್ರದೇಶದ ಸ್ಥಳೀಯನೊಬ್ಬ ಮನೆಯಲ್ಲಿ ಒಂಟಿಯಾಗಿದ್ದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದಾಗ ಬಾಲಕಿ ತೀವ್ರ ಪ್ರತಿರೋಧ ಒಡ್ಡಿದಳು.

ಇದರಿಂದ ರೊಚ್ಚಿಗೆದ್ದ ಆರೋಪಿ, ಅವಳ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದರಿಂದ ಶೇ. 90ರಷ್ಟು ಅವಳ ದೇಹ ಸುಟ್ಟುಹೋಗಿದೆ. ಆರೋಪಿ ತಪ್ಪಿಸಿಕೊಂಡಿದ್ದು, ಪೊಲೀಸರು ರೇಪ್ ಮತ್ತು ಕೊಲೆ ಯತ್ನ ಕೇಸನ್ನು ದಾಖಲಿಸಿಕೊಂಡಿದ್ದಾರೆ.

Share this Story:

Follow Webdunia kannada