Select Your Language

Notifications

webdunia
webdunia
webdunia
webdunia

ರೇಪ್ ದೂರು ನೀಡಲು ಬಂದ ಬಾಲಕಿಯ ಬಟ್ಟೆ ಬಿಚ್ಚಿಸಿದ ಪೊಲೀಸ್ ಅಧಿಕಾರಿ

ರೇಪ್ ದೂರು ನೀಡಲು ಬಂದ ಬಾಲಕಿಯ ಬಟ್ಟೆ ಬಿಚ್ಚಿಸಿದ ಪೊಲೀಸ್ ಅಧಿಕಾರಿ
, ಸೋಮವಾರ, 31 ಮಾರ್ಚ್ 2014 (16:27 IST)
ಲಖನೌ: ಕುಶಿನಗರ ಪೊಲೀಸ್ ಠಾಣೆಗೆ ಅತ್ಯಾಚಾರದ ದೂರು ನೀಡಲು ಬಂದಿದ್ದ 14 ವರ್ಷ ವಯಸ್ಸಿನ ಬಾಲಕಿಯ ಬಟ್ಟೆಯನ್ನು ಬಿಚ್ಚಿಸಿ ಅವಮಾನ ಮಾಡಿದ ಕಾಮುಕ ಪೊಲೀಸ್ ಅಧಿಕಾರಿಯನ್ನು ಬಂಧಿಸಲಾಗಿದೆ. ಸ್ಥಳೀಯ ನಿವಾಸಿಯೊಬ್ಬ ಅತ್ಯಾಚಾರ ಮಾಡಿದ್ದಾನೆಂದು ಪೊಲೀಸರಿಗೆ ದೂರು ನೀಡಲು ಈ ಬಾಲಕಿ ತನ್ನ ತಂದೆ, ತಾಯಿಗಳ ಜತೆ ಠಾಣೆಗೆ ಹೋಗಿದ್ದಳು. ಪೊಲೀಸ್ ಅಧಿಕಾರಿ ಜೈಸ್ ರಾಜ್ ಯಾದವ್ ಬಾಲಕಿಯನ್ನು ಕೋಣೆಗೆ ಕರೆದೊಯ್ದು, 'ನಿನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದನ್ನು ಪರೀಕ್ಷೆ ಮಾಡ್ಬೇಕು. ನಿನ್ನ ಬಟ್ಟೆಗಳನ್ನು ಬಿಚ್ಚು' ಎಂದು ಹೆದರಿಸಿ ಬಲವಂತವಾಗಿ ಬಟ್ಟೆಗಳನ್ನು ಬಿಚ್ಚಿಸಿದರು.

ಇದಕ್ಕೆ ಬಾಲಕಿಯ ತಂದೆ, ತಾಯಿಗಳು ಪ್ರತಿಭಟಿಸಿದಾಗ ಎಫ್‌ಐಆರ್ ದಾಖಲು ಮಾಡಿಕೊಳ್ಳದೇ ಅವರನ್ನು ಪೊಲೀಸ್ ಠಾಣೆಯಿಂದ ಅಟ್ಟಿದರು.ಕುಟುಂಬ ನಂತರ ಪೊಲೀಸ್ ಅಧಿಕಾರಿಯ ವಿರುದ್ಧ ಪ್ರದೇಶದ ಸರ್ಕಲ್ ಆಫೀಸರ್‌ಗೆ ದೂರು ನೀಡಿತು. ಅವರ ಪುತ್ರಿಯ ಮೇಲಿನ ಅತ್ಯಾಚಾರದ ದೂರನ್ನು ಸ್ವೀಕರಿಸಿದ್ದಲ್ಲದೇ ಬಾಲಕಿಯನ್ನು ವಿವಸ್ತ್ರಗೊಳಿಸಿದ ಆರೋಪಿ ಪೊಲೀಸ್ ಅಧಿಕಾರಿಯನ್ನು ಬಂಧಿಲಾಯಿತು.

Share this Story:

Follow Webdunia kannada