Webdunia - Bharat's app for daily news and videos

Install App

ರೇಪ್‌ಗೊಳಗಾದ ಯುವತಿಗೆ 18 ವರ್ಷಗಳ ನಂತರ ಸಿಕ್ಕಿತು ನ್ಯಾಯ

Webdunia
ಶುಕ್ರವಾರ, 4 ಏಪ್ರಿಲ್ 2014 (18:09 IST)
PR
PR
ತಿರುವನಂತಪುರಂ: ಈ ಬಾಲಕಿಯನ್ನು ಅಪಹರಿಸಿ ಕೇರಳ ಮತ್ತು ತಮಿಳುನಾಡು ಮುಂತಾದ ವಿವಿಧ ಕಡೆಗಳಲ್ಲಿ ಅತ್ಯಾಚಾರ ಮಾಡಿದಾಗ ಅವಳಿಗೆ ಕೇವಲ 16 ವರ್ಷ ವಯಸ್ಸಾಗಿತ್ತು. ಹೇಯ ದೌರ್ಜನ್ಯದ ನಡೆದು 18 ವರ್ಷಗಳ ನಂತರ ಇಂದು ಶುಕ್ರವಾರ 24 ಜನರನ್ನು ರೇಪ್, ಮಹಿಳೆಯ ಶೀಲ ಕೆಣಕಿದ ಮತ್ತು ಅಪರಾಧಕ್ಕೆ ಉತ್ತೇಜನ ನೀಡಿದ ಆರೋಪದ ಮೇಲೆ ದೋಷಿಗಳನ್ನಾಗಿ ಮಾಡಲಾಯಿತು. ಈ ಅಪರಾಧದ ಸೂತ್ರಧಾರನಿಗೆ ಕೇರಳ ಹೈಕೋರ್ಟ್ ಜೀವಾವಧಿ ಶಿಕ್ಷೆಗೆ ಗುರಿಪಡಿಸಿತು.ಆ ಬಾಲಕಿಯನ್ನು ಹೊಟೆಲ್‌ಗಳು, ಮನೆಗಳು ಮತ್ತು ಕಾರುಗಳಲ್ಲಿ ಸುಮಾರು 60ಕ್ಕೂ ಹೆಚ್ಚು ಬಾರಿ ರೇಪ್ ಮಾಡಲಾಗಿತ್ತು. ಅವಳ ಮೇಲೆ ದೌರ್ಜನ್ಯ ನಡೆಸಿದವರಲ್ಲಿ ನಿವೃತ್ತ ಪ್ರೊಫೆಸರ್, ವಕೀಲರು ಮತ್ತು ಉದ್ಯಮಿಗಳು ಮುಂತಾದ ಪ್ರತಿಷ್ಠಿತ ವ್ಯಕ್ತಿಗಳೂ ಸೇರಿದ್ದರು.

2005 ರಲ್ಲಿ 35 ಆರೋಪಿಗಳ ಪೈಕಿ 34 ಜನರನ್ನು ಕೇರಳ ಹೈಕೋರ್ಟ್ ಖುಲಾಸೆಗೊಳಿಸಿದಾಗ ಮಹಿಳಾ ಹಕ್ಕು ಕಾರ್ಯಕರ್ತರನ್ನು ಆಘಾತಗೊಳಿಸಿತು. ಮಹಿಳೆ ಈ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋದಳು.ಆದರೆ ವಿಚಾರಣೆಗೆ ಅವಳು ಸುಮಾರು 8 ವರ್ಷಗಳನ್ನು ಕಾಯಬೇಕಾಯಿತು.
2013 ರ ಜನವರಿಯಲ್ಲಿ ಸುಪ್ರೀಂಕೋರ್ಟ್ ಸೂರ್ಯನೆಲ್ಲಿ ರೇಪ್ ಕೇಸ್ ಮರುವಿಚಾರಣೆಗೆ ಆದೇಶಿಸಿತು.( ಮಹಿಳೆ ಕೇರಳದ ಇಡುಕ್ಕಿ ಜಿಲ್ಲೆಯ ಸೂರ್ಯನೆಲ್ಲಿಗೆ ಸೇರಿದ್ದಾಳೆ).ಯುವತಿ ಶಾಲೆಗೆ ಹೋಗುವ ಸಂದರ್ಭದಲ್ಲಿ ಬಸ್ ನಿರ್ವಾಹಕನೊಬ್ಬ ಅಪಹರಣ ಮಾಡಿದ್ದ. 40 ವರ್ಷ ಪ್ರಾಯದ ಧರ್ಮರಾಜನ್ ಎಂಬ ವಕೀಲ ಇತರೆ ಶಂಕಿತರಿಂದ ಅವಳ ಲೈಂಗಿಕ ದುರ್ಬಳಕೆಗೆ ಪ್ರೇರೇಪಿಸಿದ್ದಕ್ಕಾಗಿ ಇಂದು ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ