Select Your Language

Notifications

webdunia
webdunia
webdunia
webdunia

ರೇಪ್‌ಗೊಳಗಾದ ಯುವತಿಗೆ 18 ವರ್ಷಗಳ ನಂತರ ಸಿಕ್ಕಿತು ನ್ಯಾಯ

ರೇಪ್‌ಗೊಳಗಾದ ಯುವತಿಗೆ 18 ವರ್ಷಗಳ ನಂತರ ಸಿಕ್ಕಿತು ನ್ಯಾಯ
, ಶುಕ್ರವಾರ, 4 ಏಪ್ರಿಲ್ 2014 (18:09 IST)
PR
PR
ತಿರುವನಂತಪುರಂ: ಈ ಬಾಲಕಿಯನ್ನು ಅಪಹರಿಸಿ ಕೇರಳ ಮತ್ತು ತಮಿಳುನಾಡು ಮುಂತಾದ ವಿವಿಧ ಕಡೆಗಳಲ್ಲಿ ಅತ್ಯಾಚಾರ ಮಾಡಿದಾಗ ಅವಳಿಗೆ ಕೇವಲ 16 ವರ್ಷ ವಯಸ್ಸಾಗಿತ್ತು. ಹೇಯ ದೌರ್ಜನ್ಯದ ನಡೆದು 18 ವರ್ಷಗಳ ನಂತರ ಇಂದು ಶುಕ್ರವಾರ 24 ಜನರನ್ನು ರೇಪ್, ಮಹಿಳೆಯ ಶೀಲ ಕೆಣಕಿದ ಮತ್ತು ಅಪರಾಧಕ್ಕೆ ಉತ್ತೇಜನ ನೀಡಿದ ಆರೋಪದ ಮೇಲೆ ದೋಷಿಗಳನ್ನಾಗಿ ಮಾಡಲಾಯಿತು. ಈ ಅಪರಾಧದ ಸೂತ್ರಧಾರನಿಗೆ ಕೇರಳ ಹೈಕೋರ್ಟ್ ಜೀವಾವಧಿ ಶಿಕ್ಷೆಗೆ ಗುರಿಪಡಿಸಿತು.ಆ ಬಾಲಕಿಯನ್ನು ಹೊಟೆಲ್‌ಗಳು, ಮನೆಗಳು ಮತ್ತು ಕಾರುಗಳಲ್ಲಿ ಸುಮಾರು 60ಕ್ಕೂ ಹೆಚ್ಚು ಬಾರಿ ರೇಪ್ ಮಾಡಲಾಗಿತ್ತು. ಅವಳ ಮೇಲೆ ದೌರ್ಜನ್ಯ ನಡೆಸಿದವರಲ್ಲಿ ನಿವೃತ್ತ ಪ್ರೊಫೆಸರ್, ವಕೀಲರು ಮತ್ತು ಉದ್ಯಮಿಗಳು ಮುಂತಾದ ಪ್ರತಿಷ್ಠಿತ ವ್ಯಕ್ತಿಗಳೂ ಸೇರಿದ್ದರು.

2005ರಲ್ಲಿ 35 ಆರೋಪಿಗಳ ಪೈಕಿ 34 ಜನರನ್ನು ಕೇರಳ ಹೈಕೋರ್ಟ್ ಖುಲಾಸೆಗೊಳಿಸಿದಾಗ ಮಹಿಳಾ ಹಕ್ಕು ಕಾರ್ಯಕರ್ತರನ್ನು ಆಘಾತಗೊಳಿಸಿತು. ಮಹಿಳೆ ಈ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋದಳು.ಆದರೆ ವಿಚಾರಣೆಗೆ ಅವಳು ಸುಮಾರು 8 ವರ್ಷಗಳನ್ನು ಕಾಯಬೇಕಾಯಿತು.
2013ರ ಜನವರಿಯಲ್ಲಿ ಸುಪ್ರೀಂಕೋರ್ಟ್ ಸೂರ್ಯನೆಲ್ಲಿ ರೇಪ್ ಕೇಸ್ ಮರುವಿಚಾರಣೆಗೆ ಆದೇಶಿಸಿತು.( ಮಹಿಳೆ ಕೇರಳದ ಇಡುಕ್ಕಿ ಜಿಲ್ಲೆಯ ಸೂರ್ಯನೆಲ್ಲಿಗೆ ಸೇರಿದ್ದಾಳೆ).ಯುವತಿ ಶಾಲೆಗೆ ಹೋಗುವ ಸಂದರ್ಭದಲ್ಲಿ ಬಸ್ ನಿರ್ವಾಹಕನೊಬ್ಬ ಅಪಹರಣ ಮಾಡಿದ್ದ. 40 ವರ್ಷ ಪ್ರಾಯದ ಧರ್ಮರಾಜನ್ ಎಂಬ ವಕೀಲ ಇತರೆ ಶಂಕಿತರಿಂದ ಅವಳ ಲೈಂಗಿಕ ದುರ್ಬಳಕೆಗೆ ಪ್ರೇರೇಪಿಸಿದ್ದಕ್ಕಾಗಿ ಇಂದು ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

Share this Story:

Follow Webdunia kannada