Select Your Language

Notifications

webdunia
webdunia
webdunia
webdunia

ರಾಹುಲ್‌ಗೆ ಸೋನಿಯಾ ಗಾಂಧಿ ಸ್ಪೂರ್ತಿಯಾಗಲಿ: ಅಬ್ದುಲ್ಲಾ

ರಾಹುಲ್‌ಗೆ ಸೋನಿಯಾ ಗಾಂಧಿ ಸ್ಪೂರ್ತಿಯಾಗಲಿ: ಅಬ್ದುಲ್ಲಾ
ಸೋನಾಮಾರ್ಗ್‌ , ಶುಕ್ರವಾರ, 5 ಅಕ್ಟೋಬರ್ 2012 (12:15 IST)
PTI
ರಾಹುಲ್‌ ಗಾಂಧಿ ಅವರು ಭಾರತದ ಪ್ರಧಾನ ಮಂತ್ರಿಯಾಗುವ ದಿನ ದೂರವಿಲ್ಲ ಎಂದ ಕೇಂದ್ರ ಸಚಿವ ಫಾರೂಕ್‌ ಅಬ್ದುಲ್ಲಾ ಅವರು ರಾಹುಲ್‌ ಗಾಂಧಿ ತನ್ನ ತಾಯಿ ಸೋನಿಯಾ ಗಾಂಧಿಯವರಿಂದ ಸ್ಫೂರ್ತಿ ಪಡೆಯಬೇಕಾಗಿದೆ ಎಂದು ಹೇಳಿದರು.

'ರಾಹುಲ್‌ ಪ್ರಧಾನಿಯಾಗುವ ದಿನಗಳು ಹತ್ತಿರದಲ್ಲೇ ಇವೆ. ಈ ಹಾದಿಯಲ್ಲಿ ಕೆಲವು ಅಡೆತಡೆಗಳಿರಬಹುದು. ಅದೇನಿದ್ದರೂ ಸೋನಿಯಾ ಅವರು ಅಡೆತಡೆಗಳನ್ನು ದೂರ ಮಾಡಿ ಕಾಂಗ್ರೆಸ್‌ ಪಕ್ಷವನ್ನು ಸಶಕ್ತಗೊಳಿಸಿದ್ದನ್ನು ನೋಡಿ ರಾಹುಲ್‌ ಸ್ಫೂರ್ತಿ ಪಡೆಯಬೇಕಾಗಿದೆ' ಎಂದು ಅಬ್ದುಲ್ಲಾ ಸಮಾರಂಭವೊಂದರಲ್ಲಿ ಹೇಳಿದರು.

ಕಾಶ್ಮೀರದ ಅಭಿವೃದ್ಧಿಗಾಗಿ ನೆಹರು ಮತ್ತು ಶೇಕ್‌ ಅಬ್ದುಲ್ಲಾ ಪರಸ್ಪರ ಸಹಾಯ ಹಸ್ತ ಚಾಚಿದರು ಎಂದ ಅಬ್ದುಲ್ಲಾ ಹೊಸ ತಲೆಮಾರಿನ ನಾಯಕರಿಗೆ ಅಡೆತಡೆಗಳು ಬಂದೇ ಬರುತ್ತವೆ. ಅವನ್ನೆಲ್ಲ ದೂರ ಮಾಡುವ ಛಲವನ್ನು ಅವರು ರೂಢಿಸಿಕೊಳ್ಳಬೇಕು ಎಂದರು. ಇದೀಗ ಹೊಸ ಸಂಕಲ್ಪದೊಂದಿಗೆ ರಾಹುಲ್‌ ಮತ್ತು ಒಮರ್‌ ಆ ಕೆಲಸವನ್ನು ಮುಂದುವರಿಸಬೇಕಾಗಿದೆ ಎಂದು ಹೇಳಿದರು.

ಭಾರತ ಮತ್ತು ಕಾಶ್ಮೀರ ಪ್ರಗತಿಪಥದಲ್ಲಿ ಮುನ್ನಡೆಯುವಂತಾಗಲು ಮತ್ತೆ ನಮ್ಮೊಂದಿಗೆ ರಾಹುಲ್‌ ಕೈಜೋಡಿಸಬೇಕು ಎಂದು ಅವರು ವಿನಂತಿಸಿದರು.

Share this Story:

Follow Webdunia kannada