Webdunia - Bharat's app for daily news and videos

Install App

ರಾಹುಲ್‌ಗೆ ಪ್ರಧಾನಿ ಗದ್ದುಗೆ, ಮನಮೋಹನ್‌ಗೆ ರಾಷ್ಟ್ರಪತಿ ಪಟ್ಟ?

Webdunia
ಭಾನುವಾರ, 23 ಅಕ್ಟೋಬರ್ 2011 (13:45 IST)
ಮುಂಬರುವ ಸಾರ್ವತ್ರಿಕ ಚುನಾವಣೆಗೆ ಬಿಜೆಪಿ ನರೇಂದ್ರ ಮೋದಿಯನ್ನ ಪ್ರಧಾನಿ ಹುದ್ದೆಗೆ ಬಿಂಬಿಸುವ ಕಸರತ್ತು ನಡೆಸುತ್ತಿದ್ದರೆ ಮತ್ತೊಂದೆಡೆ ವಂಶರಾಜಕಾರಣ ಮುಂದುವರಿಸಿರುವ ಕಾಂಗ್ರೆಸ್ ರಾಹುಲ್ ಗಾಂಧಿಯನ್ನ ಪ್ರಧಾನಿ ಗದ್ದುಗೆಗೆ ಕೂರಿಸಲು ಸೋನಿಯಾ ಗಾಂಧಿ ಎಲ್ಲ ಸಿದ್ದತೆ ಮಾಡುತ್ತಿರುವುದಾಗಿ ದೈನಿಕ್ ಭಾಸ್ಕರ್ ವಿಶೇಷ ವರದಿ ತಿಳಿಸಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಆ ನಿಟ್ಟಿನಲ್ಲಿ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ಸೋನಿಯಾ ಗಾಂಧಿ ಅವರು ಪುತ್ರ ರಾಹುಲ್ ಗಾಂಧಿಯನ್ನು ಮುಂದಿನ ಎಐಸಿಸಿ ಕಾರ್ಯಕಾರಿ ಅಧ್ಯಕ್ಷ ಪಟ್ಟದಲ್ಲಿ ಕೂರಿಸುವ ಚಿಂತನೆ ನಡೆಸಿದ್ದಾರೆ ಎಂದು ಮೂಲವೊಂದು ತಿಳಿಸಿದೆ.

ಅಲ್ಲದೇ ಸೋನಿಯಾ ಗಾಂಧಿ, ರಾಹುಲ್ ಹಾಗೂ ಪ್ರಿಯಾಂಕಾ ವಾದ್ರಾ ಸೇರಿದಂತೆ ಮೂವರ ಒಟ್ಟು ಅಭಿಪ್ರಾಯ ಈ ಬಗ್ಗೆ ಕಲೆ ಹಾಕಲಾಗಿದ್ದು, ಸೋನಿಯಾ ಮತ್ತು ಪ್ರಿಯಾಂಕಾ ಅವರು ರಾಹುಲ್ ಗಾಂಧಿಯೇ ಪ್ರಧಾನಿ ಪಟ್ಟಕ್ಕೆ ಏರಬೇಕೆಂಬ ನಿರ್ಧಾರಕ್ಕೆ ಬಂದಿದ್ದಾರೆನ್ನಲಾಗಿದೆ.

ಅದೇ ರೀತಿ ಸೋನಿಯಾಗಾಂಧಿ ಅವರು 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದರೆ, ಕೌಟುಂಬಿಕ ಕ್ಷೇತ್ರವಾದ ರಾಯ್ ಬರೇಲಿಯಿಂದ ಪುತ್ರಿ ಚುನಾವಣಾ ಅಖಾಡಕ್ಕಿಳಿಯುವ ಬಗ್ಗೆಯೂ ಮಾತುಕತೆ ನಡೆದಿದೆ ಎಂದು ಕಾಂಗ್ರೆಸ್ ಮೂಲ ತಿಳಿಸಿದೆ.

ಅಷ್ಟೇ ಅಲ್ಲ 2014ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿ ಗೆಲುವನ್ನು ತಂದುಕೊಡಬೇಕಾಗಿದೆ. ಹಾಗಾಗಿ 2014ರವರೆಗೆ ಮನಮೋಹನ್ ಸಿಂಗ್ ಅವರೇ ಪ್ರಧಾನಿ ಗದ್ದುಗೆಯಲ್ಲಿ ಮುಂದುವರಿಯಲಿದ್ದಾರೆ.

ಏತನ್ಮಧ್ಯೆ ಉತ್ತರ ಪ್ರದೇಶದ ಚುನಾವಣೆ ಎದುರಿಸಿದ ನಂತರ ಕಾಂಗ್ರೆಸ್ ಯುವರಾಜನ ಪಟ್ಟಾಭಿಷೇಕ ನಡೆಸಲು ಸೋನಿಯಾ ಸಜ್ಜಾಗಿದ್ದು, ಅದಕ್ಕಾಗಿ ಪಕ್ಷದ ಹಿರಿಯ ಮುಖಂಡರಾದ ಪ್ರಣಬ್ ಮುಖರ್ಜಿ, ಎಕೆ ಆಂಟನಿ ಅವರಂಥ ಘಟಾನುಘಟಿಗಳನ್ನು ರಾಹುಲ್ ಮಾರ್ಗದರ್ಶನಕ್ಕೆ ಬಿಡಲಾಗಿದೆ.

ಮನಮೋಹನ್ ಸಿಂಗ್‌ಗೆ ರಾಷ್ಟ್ರಪತಿ ಪಟ್ಟ?
2014 ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಹುಲ್ ಗಿಮಿಕ್ ಕೆಲಸ ಮಾಡಿ ಕಾಂಗ್ರೆಸ್ ಬಹುಮತ (ಯುಪಿಎ) ಪಡೆದಲ್ಲಿ ರಾಹುಲ್ ಗಾಂಧಿ ಪ್ರಧಾನಿ ಪಟ್ಟಕ್ಕೆ ಏರುವುದು ಖಚಿತ. ಅಲ್ಲದೇ ಹಾಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಅಧಿಕಾರವಧಿ ಮುಗಿದ ನಂತರ ಸ್ಥಾನಕ್ಕೆ ಡಾ.ಮನಮೋಹನ್ ಸಿಂಗ್ ಅವರನ್ನು ತಂದು ಕೂರಿಸುವ ಚಿಂತನೆ ಪಕ್ಷದೊಳಗೆ ನಡೆದಿದೆ.

2014 ರವರೆಗೆ ಮನಮೋಹನ್ ಸಿಂಗ್ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ. ಕುತೂಹಲಕರ ವಿಷಯ ಏನಪ್ಪಾ ಅಂದ್ರೆ ರಾಜ್ಯಸಭಾ ಸದಸ್ಯರಾಗಿರುವ ಸಿಂಗ್ ಅವರ ಅವಧಿ 2013ರ ಜೂನ್ ತಿಂಗಳಿಗೆ ಮುಕ್ತಾಯವಾಗಲಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments