Webdunia - Bharat's app for daily news and videos

Install App

ರಾಷ್ಟ್ರಪತಿ ಜನ್ಮದಿನದ ಶುಭಾಶಯ

Webdunia
ಬುಧವಾರ, 19 ಡಿಸೆಂಬರ್ 2007 (12:52 IST)
PTI
ರಾಷ್ಟ್ರಪತಿ ಪ್ರತಿಭಾಪಾಟೀಲ್ ಅವರ 73ನೇ ವರ್ಷದ ಜನ್ಮದಿನವಾದ ಬುಧವಾರ ಪ್ರಧಾನಮಂತ್ರಿ ಮನಮೋಹನ ಸಿಂಗ್ ಮತ್ತಿತರ ನಾಯಕರು ಅವರನ್ನು ಅಭಿನಂದಿಸಿದರು. ಪ್ರಧಾನಮಂತ್ರಿ ತಮ್ಮ ಪತ್ನಿ ಗುರುಶರಣ್ ಕೌರ್ ಅವರೊಂದಿಗೆ ರಾಷ್ಟ್ರಪತಿ ಅವರನ್ನು ಭೇಟಿ ಮಾಡಿ ಪುಷ್ಪಗುಚ್ಛವನ್ನು ಅರ್ಪಿಸಿ ಜನ್ಮದಿನದ ಶುಭಾಶಯ ಹೇಳಿದರು.

ಸುಮಾರು 10 ನಿಮಿಷಗಳ ಕಾಲ ಪ್ರಧಾನಿ ಜತೆಗಿದ್ದ ರಾಷ್ಟ್ರಪತಿ ಬಳಿಕ ರಾಷ್ಟ್ರಪತಿ ಭವನದ ನಕ್ಷತ್ರ ಉದ್ಯಾನವನಕ್ಕೆ ತೆರಳಿ ಜಮುನ್ ಮರದ ಸಸಿಯನ್ನು ನೆಟ್ಟರು. ತೋಟದಲ್ಲಿ ನಕ್ಷತ್ರಗಳ ಹೆಸರನ್ನು ಹೊಂದಿರುವ 27 ಮರಗಳು ಬೆಳೆದು ನಿಂತಿವೆ. 1934ರ ಡಿ.19ರಂದು ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ನಡಗಾಂವ್‌ನಲ್ಲಿ ಜನಿಸಿದ ಪ್ರತಿಭಾ ಪಾಟೀಲ್ ರಾಷ್ಟ್ರದ ಪ್ರಥಮ ಮಹಿಳಾ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮಹಾರಾಷ್ಟ್ರದ ವಿದ್ಯಾಭಾರತಿ ಕಾಲೇಜಿನ 132 ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ರಾಷ್ಟ್ರಪತಿ ಅವರನ್ನು ಭೇಟಿ ಮಾಡಿ ಅವರಿಗೆ ಶುಭಾಶಯ ಹಾರೈಸಿದರು. ಮಜ್ನು-ಕಾ-ತಿಲಾದಲ್ಲಿ ಕ್ರೈಸ್ತಸನ್ಯಾಸಿನಿಯರ ದತ್ತಿಸಂಸ್ಥೆ ನಡೆಸುವ ನಿರ್ಗತಿಕರ ಕೇಂದ್ರದಲ್ಲಿ ರಾಷ್ಟ್ರಪತಿ ಕಂಬಳಿಗಳನ್ನು ಮತ್ತು ವಸ್ತ್ರಗಳನ್ನು ಉಚಿತವಾಗಿ ಹಂಚಲಿದ್ದಾರೆ. ಬಳಿಕ ರೋಹಿಣಿಗೆ ತೆರಳಿ ಮಾನಸಿಕ ವಿಕಲ್ಪ ಮಕ್ಕಳಿರುವ ಆಶಾಕಿರಣ್‌ನಲ್ಲಿ ಟೆಲಿವಿಷನ್ ಸೆಟ್‌ಗಳನ್ನು ಹಸ್ತಾಂತರಿಸಲಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments