Webdunia - Bharat's app for daily news and videos

Install App

ರಾಜೀವ್ ಗಾಂಧಿ ಪ್ರತಿಮೆ ತೊಳೆಯುವ ಮೂಲಕ ಚುನಾವಣಾ ಪ್ರಚಾರ ಆರಂಭಿಸಿದ ಆಪ್ ಪಕ್ಷದ ಕುಮಾರ್ ವಿಶ್ವಾಸ್

Webdunia
ಶುಕ್ರವಾರ, 14 ಮಾರ್ಚ್ 2014 (14:30 IST)
PTI
ಗಾಂಧಿ ಕುಟುಂಬದ ನಿಷ್ಠಾವಂತ ಪ್ರದೇಶ ಎಂದು ಕರೆಯಲಾಗುವ ಉತ್ತರ ಪ್ರದೇಶದ ಭಾಗದಲ್ಲಿ, ಆಮ್ ಆದ್ಮಿ ಪಕ್ಷದ ಕುಮಾರ್ ವಿಶ್ವಾಸ್ ರಾಜೀವ್ ಗಾಂಧಿ ಪ್ರತಿಮೆ ತೊಳೆಯುವ ಮೂಲಕ ರಾಹುಲ್ ಗಾಂಧಿ ವಿರುದ್ಧ ಚುನಾವಣಾ ಪ್ರಚಾರ ಆರಂಭಿಸಿದರು. ರಾಹುಲ್ ತನ್ನ ಪರಂಪರೆಯನ್ನು ನಿರ್ಲಕ್ಷ್ಯಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

" ಅವರ ಮಗ ಅವರ ಕನಸುಗಳನ್ನು ಈಡೇರಿಸಿಲ್ಲ. ಹಾಗಾಗಿ ಅವನ ಕನಸುಗಳನ್ನು ಚೂರು ಮಾಡುವಂತೆ ರಾಜೀವ್ ಜಿ ಸಹ ಇಂದು ನನಗೆ ಆಶೀರ್ವಾದ ಮಾಡಿದ್ದಾರೆ " ಎಂದು ಹೇಳುವುದರ ಮೂಲಕ ವಿಶ್ವಾಸ್ ಅಮೇಥಿಯಲ್ಲಿ ತಮ್ಮ ರಾಷ್ಟ್ರೀಯ ಚುನಾವಣಾ ಅಭಿಯಾನವನ್ನು ಆರಂಭಿಸಿದರು.

" ತನ್ನ ಪಕ್ಷಕ್ಕೆ ಹಣ ಒಂದು ಸಮಸ್ಯೆಯಾಗಿದೆ. ಹಣಕ್ಕಾಗಿ ನಾವು ದೇಣಿಗೆಯನ್ನು ಅವಲಂಬಿಸಿದ್ದೇವೆ ಮತ್ತು ಕಾರ್ಪೊರೇಟ್ ಹಣವನ್ನು ಬಲವಾಗಿ ವಿರೋಧಿಸುತ್ತೇವೆ " ಎಂದು ಎಂದು ವಿಶ್ವಾಸ್ ಹೇಳಿಕೊಂಡಿದ್ದಾರೆ. ನಾಳೆ ಅಮೇಥಿ ಕ್ಷೇತ್ರದಲ್ಲಿ 42 ದಿನಗಳ ಪಾದಯಾತ್ರೆ ಗೆ ಹೊರಟಿರುವ ಅವರು ತಾವು ಭೇಟಿ ನೀಡಲಿರುವ 1,200 ಹಳ್ಳಿಗಳಿಂದ 2,014 ರೂ ದೇಣಿಗೆ ಸಂಗ್ರಹಿಸುವ ನಿಲುವು ತೆಗೆದುಕೊಂಡಿದ್ದಾರೆ.

" ನಾನು ಮನೆ ಮನೆ ಗೆ ಭೇಟಿ ನೀಡುತ್ತೇನೆ ಮತ್ತು ಹಳ್ಳಿಗಳಲ್ಲಿ ಮಲಗುತ್ತೇನೆ" ಎಂದು ರಾಜಕಾರಣಿಯಾಗಿ ಬದಲಾಗಿರುವ ವಿಡಂಬನಕಾರ ತಿಳಿಸಿದ್ದಾರೆ. ಕಾಂಗ್ರೆಸ್ ನಾಯಕ ಟಿವಿ ಕ್ಯಾಮೆರಾಗಳ ಪ್ರಯೋಜನ ಪಡೆಯಲು ದಲಿತರ ಮನೆಗಳಲ್ಲಿ ತಿನ್ನುವ ನಿದ್ರಿಸುವ ನಾಟಕವನ್ನು ಮಾಡುತ್ತಾರೆ ಎಂದು ಒಮ್ಮೆ ಅವರು ರಾಹುಲ್ ವಿರುದ್ಧ ಟೀಕಿಸಿದ್ದರು.

" ನಾನು ಲೆಕ್ಕ ಹಾಕಿದ್ದೇನೆ. ನಾವು ಹಣದ ಸಹಾಯದಿಂದ ಅಮೇಥಿಯಲ್ಲಿ ಗೆಲುವು ಸಾಧಿಸಲು ಸಾಧ್ಯವಿಲ್ಲ. ನಾನು ಗೆಲ್ಲಲು 1 ಕೋಟಿ ಖರ್ಚು ಮಾಡಿದರೆ, 100 ಕೋಟಿ ಗಳಿಸಲು ಒತ್ತಡ ಪ್ರಾರಂಭವಾಗುತ್ತದೆ. ಭ್ರಷ್ಟಾಚಾರ ಹುಟ್ಟುವುದೇ ಹೀಗೆ. ನಾನದನ್ನು ಮಾಡಲಾರೆ" ಎಂದು ಅವರು ಹೇಳಿದ್ದಾರೆ.

ಲಕ್ನೋ ದಿಂದ ಸುಮಾರು 150 ಕೀ ಮಿ ದೂರವಿರುವ ಅಮೇಥಿ ಬಹುತೇಕ ಗ್ರಾಮೀಣ ಕ್ಷೇತ್ರವಾಗಿದ್ದು 2004 ಮತ್ತು 2009 ರಲ್ಲಿ ರಾಹುಲ್ ಗಾಂಧಿ ಇಲ್ಲಿಂದ ಆಯ್ಕೆಯಾಗಿದ್ದಾರೆ. ಈ ಹಿಂದೆ ರಾಹುಲ್ ತಾಯಿ( ಕಾಂಗ್ರೆಸ್ ಅಧ್ಯಕ್ಷೆ )ಸೋನಿಯಾ ಗಾಂಧಿ, ತಂದೆ ರಾಜೀವ್ ಮತ್ತು ಚಿಕ್ಕಪ್ಪ ಸಂಜಯ್ ಗಾಂಧಿ ಕೂಡ ಇಲ್ಲಿನ ಮತದಾರರ ಕೃಪೆಗೆ ಪಾತ್ರರಾಗಿದ್ದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments