Select Your Language

Notifications

webdunia
webdunia
webdunia
webdunia

ರಾಜಕೀಯ ಪ್ರಚಾರಕ್ಕಾಗಿ ಪತ್ನಿಯ ಮೇಲೆ ಗ್ಯಾಂಗ್‌ರೇಪ್ ನಡೆಸಲು ಸಹಕರಿಸಿದ ಪತಿ ಮಹಾಶಯ

ರಾಜಕೀಯ ಪ್ರಚಾರಕ್ಕಾಗಿ ಪತ್ನಿಯ ಮೇಲೆ ಗ್ಯಾಂಗ್‌ರೇಪ್ ನಡೆಸಲು ಸಹಕರಿಸಿದ ಪತಿ ಮಹಾಶಯ
ಜಂಜಗೀರ್(ಚತ್ತೀಸ್‌ಗಢ್) , ಶನಿವಾರ, 5 ಏಪ್ರಿಲ್ 2014 (15:46 IST)
ರಾಜಕೀಯ ಪ್ರಚಾರಕ್ಕಾಗಿ ತಮ್ಮ ಪತ್ನಿಯ ಮೇಲೆ ಗ್ಯಾಂಗ್‌‌ರೇಪ್ ನಡೆಸಲು ಬಿಜೆಪಿ ಕಾರ್ಯಕರ್ತ ಮತ್ತು ಇಬ್ಬರು ಆರೋಪಿಗಳಿಗೆ ಸಹಕರಿಸಿದ ಬಿಜೆವೈಎಂ ಮುಖಂಡ ವರ್ತನೆ ಆಘಾತ ಮೂಡಿಸಿದೆ.

ಲೋಕಸಭೆ ಚುನಾವಣೆಯಲ್ಲಿ ರಾಜಕೀಯವಾಗಿ ಹೆಚ್ಚಿನ ಪ್ರಚಾರ ಪಡೆಯಲು ಪತಿಯೇ ಪತ್ನಿಯ ಮೇಲೆ ಗ್ಯಾಂಗ್‌ರೇಪ್ ನಡೆಸಲು ಬಿಜೆಪಿ ಮುಖಂಡ ಮತ್ತು ಇತರ ಇಬ್ಬರು ಸಹಚರರರಿಗೆ ಬೆಂಬಲ ನೀಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬಿಜೆಪಿ ಯುವಮೋರ್ಚಾದ ಜಿಲ್ಲಾ ಕಾರ್ಯದರ್ಶಿ ಸಂಜಯ್ ಕಶ್ಯಪ್ ಮತ್ತು ಇತರ ಇಬ್ಬರು ಆರೋಪಿಗಳೊಂದಿಗೆ ನನ್ನ ಪತಿ ಶಾಮೀಲಾಗಿ ಅತ್ಯಾಚಾರವೆಸಗಲು ಸಹಕರಿಸಿದ್ದಾರೆ ಎಂದು ಪತ್ನಿ ಪೊಲೀಸರಿಗೆ ದೂರು ನೀಡಿದ್ದಾಳೆ.

ಎಲ್ಲಾ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಅತ್ಯಾಚಾರ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Share this Story:

Follow Webdunia kannada