Select Your Language

Notifications

webdunia
webdunia
webdunia
webdunia

ರಾಜಕೀಯ ಪಕ್ಷಗಳು, ಅಧಿಕಾರಶಾಹಿಗಳು ನಮ್ಮನ್ನು ಹಿಡಿತದಲ್ಲಿ ಇಟ್ಟುಕೊಂಡಿವೆ : ಸಿಬಿಐ

ರಾಜಕೀಯ ಪಕ್ಷಗಳು, ಅಧಿಕಾರಶಾಹಿಗಳು ನಮ್ಮನ್ನು ಹಿಡಿತದಲ್ಲಿ ಇಟ್ಟುಕೊಂಡಿವೆ : ಸಿಬಿಐ
ನವದೆಹಲಿ , ಬುಧವಾರ, 30 ಅಕ್ಟೋಬರ್ 2013 (15:26 IST)
PTI
PTI
ಸಿಬಿಐ ಸ್ವತಂತ್ರವಾಗಿ ಕೆಲಸ ಮಾಡಲು ಬಿಡುತ್ತಿಲ್ಲ. ರಾಜಕೀಯ ಪಕ್ಷಗಳು, ಅಧಿಕಾರಶಾಹಿ ವ್ಯಕ್ತಿಗಳು, ಪ್ರಭಾವಿ ನಾಯಕರುಗಳನ್ನು ನಮ್ಮನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ಹವಣಿಸುತ್ತಿವೆ. ಈಗಾಗಲೇ ಅಧಿಕಾರಶಾಹಿಗಳಿಂದ ಸಿಬಿಐ ನಲುಗಿದೆ ಎಂದು ನ್ಯಾಯಾಧೀಶರು ನ್ಯಾಯಾಲಯಕ್ಕೆ ತಿಳಿಸಿದರು. ಹೀಗಾಗಿ ಇದೀಗ ಸುಪ್ರೀಂ ಕೋರ್ಟ್‌ ಸಿಬಿಐಗೆ ಬೆಂಬಲವಾಗಿ ನಿಂತಿದೆ.

ಸಿಬಿಐ ಸಶಕ್ತವಾಗಿ ಕಾರ್ಯ ನಿರ್ವಹಿಸಬೇಕು. ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬೇಕು. ಈ ವಿಷಯದಲ್ಲಿ ಯಾವ ರಾಜಕೀಯ ಪಕ್ಷಗಳು ಮತ್ತು ಅಧಿಕಾರಶಾಹಿ ಧುರೀಣರು ಸಿಬಿಐ ಮೇಲೆ ಒತ್ತಡ ಹೇರಬಾರದು ಎಂದು ಗುಡುಗಿದೆ.

" ಸಿಬಿಐ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಅಧಿಕಾರ ಶಾಹಿಗಳು ಮತ್ತು ರಾಜಕೀಯ ಪಕ್ಷಗಳು ಸಿಬಿಐ ಅನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ಹವಣಿಸುತ್ತಿವೆ. ಇದರಿಂದ ಸಿಬಿಐ ಸ್ವಾಯುತ್ತತೆಗೆ ಧಕ್ಕೆಯುಂಟಾಗುತ್ತಿದೆ ಎಂದು ಹಿರಿಯ ಅಡ್ವೋಕೇಟ್‌ ಅಮರೇಂದ್ರ ಶರಣ್ ನ್ಯಾಯಾಲಯಕ್ಕೆ ತಿಳಿಸಿದ್ರು.

ಹಿರಿಯ ವಕೀಲರ ಮಾತಿಗೆ ಪ್ರತಿಕ್ರಿಯಿಸಿದ ಆರ್‌ ಎಂ ಲೋಧಾ ಅವರ ನೇತೃತ್ವದ ನ್ಯಾಯಾಲಯ "ಎಲ್ಲಾ ಪಕ್ಷಗಳೂ ಸಿಬಿಐ ಮೇಲೆ ಒತ್ತಡ ಹೇರುತ್ತಿವೆಯೇ ಎಂದು ಪ್ರೆಶ್ನಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಅಡ್ವೋಕೇಟ್‌ ಶರಣ್‌ " ಹೌದು.. ಎಲ್ಲಾ ಪಕ್ಷಗಳೂ ಸಿಬಿಐ ಅನ್ನು ತಮ್ಮ ಅಧೀನದಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತಿವೆ" ಎಂದು ಸ್ಪಷ್ಟಪಡಿಸಿದ್ರು. ಅಷ್ಟೆ ಅಲ್ಲ, ಕಲ್ಲಿದ್ದಲು ಹಗರಣದ ಸಮಯದಲ್ಲಿ ಪಕ್ಷದ ಒತ್ತಡಗಳು, ಮತ್ತು ರಾಜಕೀಯ ಧುರೀಣರ ಒತ್ತಡದಿಂದಾಗಿ ಕಡತಗಳಲ್ಲಿ ಬದಲಾವಣೆಗಳಾಗಿವೆ. ಇದು ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಮಾಡಿರುವ ಹುನ್ನಾರವಾಗಿದೆ. ಇದೆಲ್ಲವನ್ನು ನೋಡಿದರೆ, ಸಿಬಿಐ ಅಧಿಕಾರಶಾಹಿಗಳ ಅಧೀನವಾಗಿದೆ ಎಂದು ಮೇಲ್ನೋಟಕ್ಕೆ ತಿಳಿದುಬರುತ್ತದೆ ಎಂದು ಅವರು ಹೇಳಿದ್ರು.

Share this Story:

Follow Webdunia kannada