Select Your Language

Notifications

webdunia
webdunia
webdunia
webdunia

ಯುವತಿ ಬಟ್ಟೆ ಬದಲಿಸುವಾಗ ಮೊಬೈಲ್ ಕ್ಯಾಮೆರಾ ಆನ್ ಮಾಡಿಡುತ್ತಿದ್ದ ಟೈಲರ್ !

ಯುವತಿ ಬಟ್ಟೆ ಬದಲಿಸುವಾಗ ಮೊಬೈಲ್ ಕ್ಯಾಮೆರಾ ಆನ್ ಮಾಡಿಡುತ್ತಿದ್ದ ಟೈಲರ್ !
, ಸೋಮವಾರ, 31 ಮಾರ್ಚ್ 2014 (16:28 IST)
ರಾಯ್ಪುರ: ಯುವತಿಯರು ಬಟ್ಟೆ ಬದಲಿಸುವಾಗ ಮೊಬೈಲ್ ಕ್ಯಾಮೆರಾ ಆನ್ ಮಾಡಿಡುತ್ತಿದ್ದ ಟೈಲರ್ ಒಬ್ಬ ಸಿಕ್ಕಿಬಿದ್ದಿದ್ದಾನೆ. ಸರಸ್ವತಿನಗರದಲ್ಲಿ ಸುನಿತಾ(ಹೆಸರು ಬದಲಾಯಿಸಲಾಗಿದೆ) ಟೈಲರ್‌ಗೆ ಹೊಲಿಯಲು ನೀಡಿದ್ದ ಬಟ್ಟೆಗಳನ್ನು ತೆಗೆದುಕೊಳ್ಳಲು ಹೋದಾಗ, ಹೊಲಿದ ವಸ್ತ್ರಗಳು ಅವಳಿಗೆ ತೀರಾ ಗಿಡ್ಡವಾಗಿತ್ತು. ಟೈಲರ್ ಅಮಿತ್‌ಗೆ ಅವಳು ಸರಿಯಾದ ಅಳತೆ ನೀಡಿದ್ದರೂ ಅವನೇಕೆ ಗಿಡ್ಡವಾಗಿ ಹೊಲಿದ ಎಂದು ಸುನಿತಾ ಮೂಗಿನ ಮೇಲೆ ಬೆರಳು ಇಟ್ಟುಕೊಂಡಳು. ಅವಳು ತನ್ನ ಅನುಮಾನ ತಿಳಿಸಿದಾಗ ಬಟ್ಟೆಗಳನ್ನು ಟ್ರಯಲ್ ರೂಂನಲ್ಲಿ ಹಾಕಿಕೊಂಡು ನೋಡುವಂತೆ ಟೈಲರ್ ತಿಳಿಸಿದ.

ಅಗತ್ಯಬಿದ್ದರೆ ಆಲ್ಟರೇಷನ್ ಮಾಡ್ತೇನೆ ಎಂದು ಹೇಳಿದ. ಅವಳಿಗೆ ಇದು ಒಂದು ರೀತಿಯ ವಿಚಿತ್ರವಾಗಿ ಕಂಡಿತು. ಆದರೆ ಸುಮ್ಮನೇ ತೊಂದರೆ ಏಕೆಂದು ಟ್ರಯಲ್ ರೂಂಗೆ ತೆರಳಿ ಬಟ್ಟೆ ಟ್ರಯಲ್ ನೋಡುತ್ತಿದ್ದಾಗ, ಅಲ್ಲಿ ಕೆಲವು ಬಟ್ಟೆಗಳನ್ನು ವಿನಾಕಾರಣ ನೇತುಹಾಕಿದ್ದು ನೋಡಿ ಅನುಮಾನ ಬಂತು. ಪರೀಕ್ಷಿಸಿದಾದ ಅಲ್ಲೊಂದು ಮೊಬೈಲ್ ಫೋನ್ ಬಚ್ಚಿಡಲಾಗಿತ್ತು. ಮೊಬೈಲ್ ಲೆನ್ಸ್ ಅವಳತ್ತ ಮುಖ ಮಾಡಿತ್ತು. ಮೊಬೈಲ್ ಕ್ಯಾಮೆರಾ ಆನ್ ಆಗಿದ್ದು ರೆಕಾರ್ಡಿಂಗ್ ಮಾಡ್ತಿತ್ತು. ಟೈಲರ್ ಹಾಕಿದ ಬಲೆಗೆ ಸಿಕ್ಕಿಬೀಳುವುದರಿಂದ ಅವಳು ಸ್ವಲ್ಪದರಲ್ಲಿ ತಪ್ಪಿಸಿಕೊಂಡಿದ್ದಳು. ಅವಳು ಕೂಡಲೇ ತಂದೆ,ತಾಯಿಗಳಿಗೆ ವಿಷಯ ಮುಟ್ಟಿಸಿದಾಗ ಅವರು ಕ್ಯಾಮೆರಾದೊಂದಿಗೆ ಪೊಲೀಸ್ ಠಾಣೆಗೆ ದೂರು ನೀಡಿದರು.

Share this Story:

Follow Webdunia kannada