Select Your Language

Notifications

webdunia
webdunia
webdunia
webdunia

ಯುವತಿಯರ ಬೆತ್ತಲೆ ದೇಹಗಳನ್ನು ವಿಡಿಯೋದಲ್ಲಿ ಸೆರೆಹಿಡಿದ ವೈದ್ಯ

ಯುವತಿಯರ ಬೆತ್ತಲೆ ದೇಹಗಳನ್ನು ವಿಡಿಯೋದಲ್ಲಿ ಸೆರೆಹಿಡಿದ ವೈದ್ಯ
, ಸೋಮವಾರ, 31 ಮಾರ್ಚ್ 2014 (19:48 IST)
ಮುಂಬೈ: ಮುಂಬೈ ಆಸ್ಪತ್ರೆಯ ಪಿಜಿ ಕ್ವಾರ್ಟರ್ಸ್‌ನಲ್ಲಿ ಸ್ನಾನ ಮಾಡುತ್ತಿದ್ದ ಇಬ್ಬರು ಯುವತಿಯರ ನಗ್ನ ದೇಹಗಳನ್ನು ಮೊಬೈಲ್ ವಿಡಿಯೋದಲ್ಲಿ ಸೆರೆಹಿಡಿದ 27 ವರ್ಷ ವಯಸ್ಸಿನ ವೈದ್ಯನನ್ನು ಪೊಲೀಸರು ಬಂಧಿಸಿದ್ದಾರೆ.ಡಾ.ಯಶ್ ಶಾ ಎಂದು ವೈದ್ಯರನ್ನು ಪೊಲೀಸರು ಗುರುತಿಸಿದ್ದು, ಕೋರ್ಟ್‌ ಮುಂದೆ ಪೊಲೀಸರು ಹಾಜರುಪಡಿಸಿದಾಗ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಆರ್ಥೋಪೀಡಿಕ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದ ವೈದ್ಯನು ಯುವತಿಯರು ಆಸ್ಪತ್ರೆಯ 15ನೇ ಮಹಡಿಯಲ್ಲಿ ಡಿ.13 ಮತ್ತು 15ರಂದು ಸ್ನಾನ ಮಾಡುವಾಗ ಮೊಬೈಲ್ ವಿಡಿಯೋದಲ್ಲಿ ಅವರ ಬೆತ್ತಲೆ ದೇಹಗಳ ಚಿತ್ರಗಳನ್ನು ಸೆರೆಹಿಡಿದಿದ್ದನೆಂದು ಆರೋಪಿಸಲಾಗಿದೆ.

ಯುವತಿಯರು ಮತ್ತು ಪುರುಷರ ಸ್ನಾನದ ಕೋಣೆಯ ನಡುವಿನ ಗೋಡೆಯ ಮೇಲಿನ ಗ್ಯಾಪ್‌ನಲ್ಲಿ ಮೊಬೈಲ್ ವಿಡಿಯೋವನ್ನು ಆನ್ ಮಾಡಿ ಇರಿಸಿ ವೈದ್ಯರು ಚಿತ್ರೀಕರಿಸಿದ್ದರು. ಯುವತಿ ಸ್ನಾನ ಮಾಡುವಾಗ ಪ್ರತ್ಯೇಕಿಸುವ ಗೋಡೆಯಲ್ಲಿ ಕೆಲವು ಚಟುವಟಿಕೆ ಗಮನಿಸಿ, ಸ್ನಾನ ಮುಗಿಸಿ ಬಾಗಿಲಿನ ಹೊರಗೆ ಬಂದು ನಿಂತಿದ್ದಾಗ ಶಾ ಅಲ್ಲಿಗೆ ಬಂದ ಕೂಡಲೇ ವೈದ್ಯಯುವತಿಯ ಕೈಗೆ ಸಿಕ್ಕಿಬಿದ್ದ. ಇಬ್ಬರು ಯುವತಿಯರು ಶಾನ ಮೊಬೈಲ್ ಫೋನ್ ಕಿತ್ತುಕೊಂಡು ಕಂಪ್ಯೂಟರ್‌ಗೆ ಸಂಪರ್ಕಿಸಿ ಮೆಮರಿ ಕಾರ್ಡ್ ಸ್ಕಾನ್ ಮಾಡಿದಾಗ ತಮ್ಮ ನಗ್ನಚಿತ್ರಗಳ ವಿಡಿಯೋ ಕಾಣಿಸಿತು. ಕೂಡಲೇ ಆಸ್ಪತ್ರೆ ಅಧಿಕಾರಿಗಳನ್ನು ಸಂಪರ್ಕಿಸಿ ಪೊಲೀಸರಿಗೆ ದೂರು ನೀಡಲಾಯಿತು. ವೈದ್ಯರನ್ನು ಬಂಧಿಸಲಾಗಿದ್ದು ಮೊಬೈಲ್ ವಶಕ್ಕೆ ತೆಗೆದುಕೊಳ್ಳಲಾಗಿದೆ.

Share this Story:

Follow Webdunia kannada