Select Your Language

Notifications

webdunia
webdunia
webdunia
webdunia

ಯುಪಿಎ ತಂತ್ರ: ಜೆಪಿಸಿ ಸಭೆ ಅನಿರ್ಧಿಷ್ಠಾವದಿಗೆ ಮುಂದೂಡಿಕೆ

ಯುಪಿಎ ತಂತ್ರ: ಜೆಪಿಸಿ ಸಭೆ ಅನಿರ್ಧಿಷ್ಠಾವದಿಗೆ ಮುಂದೂಡಿಕೆ
ನವದೆಹಲಿ , ಗುರುವಾರ, 25 ಏಪ್ರಿಲ್ 2013 (12:15 IST)
PTI
2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಧಿಸಿದಂತೆ ಸಿದ್ಧಪಡಿಸಲಾದ ಕರಡು ವರದಿ ಅಂಗೀಕರಿಸುವ ಸಲುವಾಗಿ ಕರೆಯಲಾಗಿದ್ದ ಜಂಟಿ ಸಂಸದೀಯ ಸಮಿತಿ ಸಭೆಯನ್ನು ಮುಂದೂಡಲಾಗಿದೆ.

ಇದೇ ವೇಳೆ ವರದಿಯಲ್ಲಿ ಪ್ರಧಾನಿ ಮನಮೋಹನ್‌ ಸಿಂಗ್‌ ಮತ್ತು ಹಣಕಾಸು ಸಚಿವ ಪಿ. ಚಿದಂಬರಂ ಅವರಿಗೆ ಜೆಪಿಸಿ ಮುಖ್ಯಸ್ಥ ಪಿ.ಸಿ.ಚಾಕೋ ಕ್ಲೀನ್‌ಚಿಟ್‌ ನೀಡಿರುವ ಬಗ್ಗೆ ಆಕ್ಷೇಪ ಎತ್ತಿರುವ ಬಿಜೆಪಿ ನೇತೃತ್ವದ ವಿರೋಧ ಪಕ್ಷಗಳು ಸಭೆಯಲ್ಲಿ ಕೋಲಾಹಲ ಎಬ್ಬಿಸುವ ಸಾಧ್ಯತೆ ನಿಚ್ಚಳವಾಗಿದೆ. ಅಲ್ಲದೆ ಜೆಪಿಸಿಯ ಕಾಂಗ್ರೆಸ್ಸೇತರ ಸದಸ್ಯರು ವಿವಾದಿತ ಕರಡು ವರದಿಯನ್ನು ಮತಕ್ಕೆ ಹಾಕುವಂತೆ ಒತ್ತಾಯಿಸುವ ಸಾಧ್ಯತೆ ಇದೆ.

ಬಿಜೆಪಿ ಮುಖಂಡ ಯಶವಂತ್‌ ಸಿನ್ಹಾ ವರದಿಯನ್ನು ವಿರೋಧಿಸುವ ಸಲುವಾಗಿ ಸಮಾನ ಮನಸ್ಕ ಸದಸ್ಯರಾದ ಡಿಎಂಕೆ, ಬಿಜೆಡಿ ಮತ್ತು ಎಡಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತಿದ್ದು. ಸದಸ್ಯರನ್ನು ಒಂದುಗೂಡಿಸಿ ಮತದಾನದ ಮೂಲಕ ವರದಿ ತಿರಸ್ಕರಿಸಲು ಸಿನ್ಹಾ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ ಮೂಲಗಳು ತಿಳಿಸಿವೆ.

ಇದೇ ವೇಳೆ 2 ಜಿ ಸ್ಪೆಕ್ಟ್ರಂ ಹಂಚಿಕೆಯಲ್ಲಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರನ್ನು ಕೇಳಿಯೇ ಮಹತ್ವದ ನಿರ್ಧಾರ ಕೈಗೊಂಡಿರುವುದಾಗಿ ಟೆಲಿಕಾಂ ಖಾತೆ ಮಾಜಿ ಸಚಿವ ಎ. ರಾಜಾ ಜೆಪಿಸಿಗೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಪ್ರಧಾನಿ ಅವರನ್ನು ಜೆಪಿಸಿ ಮುಂದೆ ಹಾಜರಾಗುಂತೆ ಯಶವಂತ್‌ ಸಿನ್ಹಾ ಮತ್ತೂಮ್ಮೆ ಆಗ್ರಹಿಸಿದ್ದಾರೆ.

Share this Story:

Follow Webdunia kannada