Webdunia - Bharat's app for daily news and videos

Install App

ಮೋದಿ ವಿಷಾದದಿಂದ ಗುಜರಾತ್ ದಂಗೆಯ ವಾಸ್ತವತೆ ಬದಲಾಗೋಲ್ಲ: ಕಾಂಗ್ರೆಸ್

Webdunia
ಶನಿವಾರ, 28 ಡಿಸೆಂಬರ್ 2013 (13:06 IST)
PTI
ಕಳೆದ 2002ರಲ್ಲಿ ನಡೆದ ಗುಜರಾತ್ ದಂಗೆಯ ಬಗ್ಗೆ ವಿಷಾದವಿದೆ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ನೀಡಿರುವ ಹೇಳಿಕೆಯಿಂದ ವಾಸ್ತವತೆ ಬದಲಾಗುವುದಿಲ್ಲ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.

ಮುಂಬರುವ 2014ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಮುನ್ನ ತಮ್ಮ ಇಮೇಜ್ ಬದಲಾಯಿಸಿಕೊಳ್ಳುವ ವಿಫಲ ಪ್ರಯತ್ನವನ್ನು ಮೋದಿ ನಡೆಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಮನೀಷ್ ತಿವಾರಿ ಕಿಡಿಕಾರಿದ್ದಾರೆ.

ಕೇವಲ ವಿಷಾದ ಯಾಚಿಸುವುದರಿಂದ ಕ್ಷಮೆ ಕೋರುವುದರಿಂದ ಗುಜರಾತ್ ದಂಗೆಯ ವಾಸ್ತವತೆ ಬದಲಾಗುವುದಿಲ್ಲ. ದಂಗೆಯಲ್ಲಿ ಸಾವನ್ನಪ್ಪಿದ ಜನರ ಜೀವ ಮರಳಿ ಬರುವುದಿಲ್ಲ ಎಂದು ಗುಡುಗಿದ್ದಾರೆ.

2002 ರಲ್ಲಿ ನಡೆದ ದಂಗೆಯಲ್ಲಿ ನರೇಂದ್ರ ಮೋದಿ ನೇರವಾಗಿ ಜವಾಬ್ದಾರರಲ್ಲವಾಗಿರಬಹುದು. ಆದರೆ, ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಅವರು ದಂಗೆಯನ್ನು ನಿಯಂತ್ರಿಸಬಹುದಿತ್ತು ಎಂದು ಕಾಂಗ್ರೆಸ್ ಮುಖಂಡ ಮನೀಷ್ ತಿವಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments