Webdunia - Bharat's app for daily news and videos

Install App

ಮೋದಿ ಪರ ಬಹುಪರಾಕ್ ಹೇಳಿದ ಲೋಹಪುರುಷ ಅಡ್ವಾಣಿ

Webdunia
ಸೋಮವಾರ, 16 ಸೆಪ್ಟಂಬರ್ 2013 (14:22 IST)
PR
PR
ನವದೆಹಲಿ: ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿಗೆ ಪ್ರಧಾನ ಮಂತ್ರಿ ಅಭ್ಯರ್ಥಿಯ ಪಟ್ಟ ನೀಡುವುದಕ್ಕೆ ವಿರೋಧಿಸಿ ವಿವಾದ ಸೃಷ್ಟಿಸಿದ್ದ ಬಿಜೆಪಿ ವರಿಷ್ಠ ಎಲ್.ಕೆ.ಅಡ್ವಾಣಿ ಈಗ ಮನಸ್ಸು ಬದಲಾಯಿಸಿದ್ದು, ನರೇಂದ್ರ ಮೋದಿ ಅಭಿವೃದ್ಧಿ ಕಾರ್ಯಗಳನ್ನು ಶ್ಲಾಘಿಸಿದ್ದಾರೆ. ಗುಜರಾತಿನಲ್ಲಿ ನರೇಂದ್ರ ಮೋದಿ ಕಾರ್ಯವೈಖರಿಯನ್ನು ಕುರಿತು ಟೀಕಿಸಿದ್ದ ಅಡ್ವಾಣಿ ಈಗ ದಿಢೀರನೇ ಮೋದಿಯನ್ನು ಹೊಗಳುತ್ತಿರುವುದು ಆಶ್ಚರ್ಯ ಮೂಡಿಸಿದೆ. ನರೇಂದ್ರ ಮೋದಿ ಹೆಸರು ಘೋಷಣೆಗೆ ಸಂತಸವಾಗಿದೆ ಎಂದು ಛತ್ತೀಸ್‌ಗಢದ ಕೊರ್ಬಾದಲ್ಲಿ ನರೇಂದ್ರ ಮೋದಿಯನ್ನು ಅಡ್ವಾಣಿ ಶ್ಲಾಘನೆ ಮಾಡಿದ್ದಾರೆ.

ಗುಜರಾತಿನಲ್ಲಿ ನಿರಂತರ ವಿದ್ಯುತ್ ವಿತರಣೆ ಮಾಡಿದ್ದಕ್ಕೆ ಅವರು ಮೋದಿಯನ್ನು ಶ್ಲಾಘಿಸಿದರು. ಯಾವ ಗ್ರಾಮವೂ ಗುಜರಾತಿನಲ್ಲಿ ವಿದ್ಯುತ್ ಕೊರತೆ ಎದುರಿಸುತ್ತಿಲ್ಲ ಎಂದರು. ಬಿಜೆಪಿ ಅಧಿಕಾರವಿರುವ ಎಲ್ಲ ರಾಜ್ಯಗಳಲ್ಲಿ ಇಂತಹ ಅಭಿವೃದ್ಧಿಯಾಗಿದೆ ಎಂದು ಹೇಳಿದರು. ನರೇಂದ್ರ ಮೋದಿ ಅವರನ್ನು ಚುನಾವಣೆ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಮಾಡಿದಾಗ ಅಡ್ವಾಣಿ ವಿರೋಧಿಸಿ ಗೋವಾ ಸಭೆಗೆ ಹಾಜರಾಗಿರಲಿಲ್ಲ. ಸಂಸದೀಯ ಮಂಡಳಿ ಸಭೆಗೆ ಕೂಡ ಹಾಜರಾಗದೇ ಮೋದಿಯ ಪ್ರಧಾನಿ ಅಭ್ಯರ್ಥಿ ಪಟ್ಟಕ್ಕೆ ವಿರೋಧ ಸೂಚಿಸಿದ್ದರು ಮತ್ತು ಬಿಜೆಪಿ ಅಧ್ಯಕ್ಷರಾದ ರಾಜನಾಥ್ ಸಿಂಗ್ ಕಾರ್ಯವೈಖರಿಯನ್ನು ಕೂಡ ಟೀಕಿಸಿದ್ದರು. ಆದರೆ ಈಗ ಅಡ್ವಾಣಿ ದಿಢೀರನೇ ಅಡ್ವಾಣಿ ಉಲ್ಟಾ ಹೊಡೆದಿರುವ ಹಿಂದಿನ ಗುಟ್ಟೇನು ಎನ್ನುವುದು ನಿಗೂಢವಾಗಿ ಉಳಿದಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments