Select Your Language

Notifications

webdunia
webdunia
webdunia
webdunia

ಮೋದಿಗೆ ಸ್ತ್ರೀ ದೋಷ..!

ಮೋದಿಗೆ ಸ್ತ್ರೀ ದೋಷ..!
ನವದೆಹಲಿ , ಮಂಗಳವಾರ, 15 ಅಕ್ಟೋಬರ್ 2013 (19:52 IST)
PTI
PTI
ಶೇಖರ್ ಪೂಜಾರಿ

ಗುಜರಾತ್‌ ಮುಖ್ಯಮಂತ್ರಿ ಮತ್ತು ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿಯಾಗಿರುವ ನರೇಂದ್ರ ಮೋದಿಗೆ ಸ್ತ್ರೀದೋಷ ಎದುರಾಗಿದೆ ಎಂದು ಹೇಳಲಾಗುತ್ತಿದೆ. ಜ್ಯೋತಿಷ್ಯ ಶಾಸ್ತ್ರಗಳ ಪ್ರಕಾರ ಮೋದಿಯವರಿಗೆ ಸ್ತ್ರೀದೋಷ ಕಾಡಲಿದ್ದು ಮುಂದಿನ 8 ತಿಂಗಳವರೆಗೆ ಮೋದಿಯವರಿಗೆ ಸ್ತ್ರೀದೋಷ ಅಡ್ಡಿಪಡಿಸಲಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಹಲವಾರು ರಾಜಕೀಯ ವಿದ್ಯುಮಾನಗಳು ನಡೆಯುತ್ತಿವೆ. ಈ ಲೇಖನ ಓದಿ ನಿಮಗೆ ಗೊತ್ತಾಗುತ್ತೆ.

ಗುಜರಾತ್‌ ಮುಖ್ಯಮಂತ್ರಿಯವರಿಗೆ ಸ್ತ್ರೀ ದೋಷ ಇದೆ ಎಂಬುದಾಗಿ ಜ್ಯೋತಿಷಿಗಳು ಹೇಳುತ್ತಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ರಾಹುಲ್‌ ಗಾಂಧಿಯ ಬದಲಿಗೆ ಪ್ರಿಯಾಂಕ ವಾದ್ರಾ 2014ರ ಚುನಾವಣೆಯ ಪ್ರಚಾರದ ಸಾರಥ್ಯವನ್ನು ವಹಿಸಲಿದ್ದಾಳೆ ಎಂಬುದಾಗಿ ಹೇಳಲಾಗುತ್ತಿದೆ.

ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಬಿಜೆಪಿ ಪಕ್ಷ ತನ್ನ ಪ್ರಚಾರದ ಭರಾಟೆಯನ್ನು ಮುಂದುವರಿಸುತ್ತಿದೆ. ಆದ್ರೆ ಇದುವರೆಗೂ ರಾಹುಲ್‌ ಗಾಂಧಿ ಕಾಂಗ್ರೆಸ್‌ ಸಾರಥ್ಯವನ್ನು ವಹಿಸಲಿದ್ದಾರೆ ಎಂಬುದಾಗಿ ಕೇಳಿ ಬರುತ್ತಿತ್ತು. ಅದ್ರೆ ಇದೀಗ ಮೋದಿಗೆ ಸಡ್ಡು ಹೊಡೆಯುವಂತೆ ಪ್ರಿಯಾಂಕ ವಾದ್ರಾ ಗಾಂಧಿ ಕಾಂಗ್ರೆಸ್‌ ಸಾರಥ್ಯವನ್ನು ವಹಿಸಿಕೊಳ್ಳುವ ಸಾಧ್ಯತೆಗಳಿವೆ.

ರಾಹುಲ್‌ ಗಾಂಧಿ ಬದಲಿಗೆ ಪ್ರಿಯಾಂಕ ವಾದ್ರಾ ಯಾಕೆ? ಇನ್ನಷ್ಟು ಮಾಹಿತಿ ಮುಂದಿನ ಪುಟದಲ್ಲಿ...

webdunia
PTI
PTI
ರಾಹುಲ್‌ ಗಾಂಧಿ ಬದಲಿಗೆ ಪ್ರಿಯಾಂಕ ವಾದ್ರಾ ಯಾಕೆ?

ಇದುವರೆಗೂ ರಾಹುಲ್‌ ಗಾಂಧಿಯವರೇ ಕಾಂಗ್ರೆಸ್‌ ಪ್ರಚಾರ ಸಮಿತಿಯ ಉಸ್ತುವಾರಿಯನ್ನು ಹೊತ್ತಿದ್ದರು. ಆದ್ರೆ ಕೆಲ ದಿನಗಳ ಹಿಂದೆ ಭ್ರಷ್ಟರನ್ನು ರಕ್ಷಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ ಕೈಗೊಂಡಿದ್ದ ಸುಗ್ರೀವಾಜ್ಞೆಯನ್ನು "ನಾನ್‌ ಸೆನ್ಸ್" ಎಂದು ಬೈದು ಕಾಂಗ್ರೆಸ್‌ ಮುಖಂಡರಿಗೆ ಅವಮಾನ ಮಾಡಿದ್ದಾರೆ. ಇದು ಮುಂದಿನ ಚುನಾವಣೆಯ ಮೇಲೆ ಗಾಢವಾದ ಪರಿಣಾಮವನ್ನು ಬೀರುವ ಸಾಧ್ಯತೆಗಳು ಹೆಚ್ಚಾಗಿವೆ. ಹೀಗಾಗಿ ಮುಂದಿನ ಚುನಾವಣೆಯ ದೃಷ್ಟಿಯಿಂದ ರಾಹುಲ್‌ ಗಾಂಧಿಯವರನ್ನು ಸ್ವಲ್ಪ ದಿನ ಸೈಡಿಗೆ ಇಟ್ಟು ಪ್ರಿಯಾಂಕ ವಾದ್ರಾ ಗಾಂಧಿಯವರಿಗೆ ಚುನಾವಣೆಯ ಸಾರಥ್ಯವನ್ನು ನೀಡಬೇಕು ಎನ್ನುವ ಮಾತುಕತೆ ಕಾಂಗ್ರೆಸ್‌ ವಲಯದಲ್ಲಿ ನಡೆಯುತ್ತಿವೆ.

ನೆಹರೂ ಮನೆತನದ ರಾಜಕೀಯ ಪರಂಪರೆಗೆ ಪ್ರಿಯಾಂಕ ವಾದ್ರಾ ಗಾಂಧಿಯೇ ಸರಿಯಾದ ವಾರಸುದಾರಳು. ಅಲ್ಲದೇ, ಬಿಜೆಪಿಯ ನರೇಂದ್ರ ಮೋದಿಗೆ ಟಾಂಗ್‌ ಕೊಡಲು ಸಮರ್ಥಳು ಎನ್ನಲಾಗುತ್ತಿದೆ. ಆದ್ರೆ ಈ ವಿಷಯವನ್ನು ಸ್ವತಃ ಕಾಂಗ್ರೆಸ್‌ ಸರ್ಕಾರ ಅಲ್ಲಗಳೆದಿದೆ. ಇದು ಮಾಧ್ಯಮಗಳ ಸೃಷ್ಟಿ ಎಂದು ಕಾಂಗ್ರೆಸ್ ಕಿಡಿ ಕಾರಿದೆ.

Share this Story:

Follow Webdunia kannada