Webdunia - Bharat's app for daily news and videos

Install App

ಮೋದಿಗೆ ಸೇನಾ ಕಮಾಂಡರ್ ಅರ್ಹತೆಯಿದೆ: ಮೇಜರ್ ಜನರಲ್

Webdunia
ಮಂಗಳವಾರ, 15 ಮಾರ್ಚ್ 2011 (08:47 IST)
ಒಬ್ಬ ಯಶಸ್ವಿ ಸೇನಾ ಕಮಾಂಡರ್‌ಗೆ ಇರಬೇಕಾದ ಎಲ್ಲಾ ಯೋಗ್ಯತೆಗಳು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಲ್ಲಿದೆ ಎಂದು ಗೋಲ್ಡನ್ ಕತಾರ್ ವಿಭಾಗದ ಜನರಲ್ ಆಫೀಸರ್ ಕಮಾಂಡಿಂಗ್ (ಜಿಒಸಿ) ಮೇಜರ್ ಜನರಲ್ ಐ.ಎಸ್. ಸಿಂಘ ಸೋಮವಾರ ಶ್ಲಾಘಿಸಿದರು.

ಅಹಮದಾಬಾದ್‌ನಲ್ಲಿ ಸೇನೆಯ ಗೋಲ್ಡನ್ ಕತಾರ್ ವಿಭಾಗವು ಆಯೋಜಿಸಿರುವ ' Know your Army' ಎಂಬ ಮೂರು ದಿನಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದ ಸಿಂಘ, ಮಾತಿನುದ್ದಕ್ಕೂ ಗುಜರಾತ್ ಪ್ರಗತಿ ಮತ್ತು ಮೋದಿಯವರನ್ನು ಹೊಗಳಿದರು.

ಒಬ್ಬ ಯಶಸ್ವಿ ಮಿಲಿಟರಿ ಕಮಾಂಡರ್‌ಗೆ ಇರಬೇಕಾದ ಎಲ್ಲಾ ಅರ್ಹತೆಗಳು ಮುಖ್ಯಮಂತ್ರಿ ನರೇಂದ್ರ ಮೋದಿ ಅವರಲ್ಲಿವೆ. ಅವರ ಯೋಜನೆಗಳು ರಾಜ್ಯ ಮತ್ತು ರಾಷ್ಟ್ರದ ಅಭಿವೃದ್ಧಿಯ ಗುರಿಯನ್ನು ಹೊಂದಿವೆ. ಸೇನೆಯಲ್ಲಿ ಇದ್ದಂತೆ ಅವರು (ಮೋದಿ) ಕೂಡ ಕಾಮಗಾರಿಗಳ ಮುಕ್ತಾಯಕ್ಕಾಗಿ ಗಡುವು ಅನುಸರಿಸುತ್ತಾರೆ. ನಿರ್ದಿಷ್ಟ ಸಮಯದಲ್ಲಿ ಕಾರ್ಯವೊಂದನ್ನು ಸಾಧಿಸುವ ಗುರಿಯನ್ನು ಖಚಿತಪಡಿಸುತ್ತಾರೆ ಎಂದರು.

ಗುಜರಾತ್ ರಾಜ್ಯದ ಪ್ರಗತಿ ಮತ್ತು ಸರಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮೇಜರ್ ಜನರಲ್ ಸಿಂಘ, ಮಾಜಿ ಸೈನಿಕರ ವಸತಿ ಯೋಜನೆಗಾಗಿ ಜಮೀನು ಕೊಡುವಂತೆ ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಯವರನ್ನು ಕೇಳಿಕೊಂಡರು.

ಪಾಕ್ 'ವೈರಿ'- ನಾವು ಎಚ್ಚರವಾಗಿರಬೇಕು: ಮೋದಿ
ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಪಾಕಿಸ್ತಾನದಂತಹ ಹಗೆತನ ಸಾಧಿಸುವ ರಾಷ್ಟ್ರದ ಜತೆ ಕರಾವಳಿ ರಾಜ್ಯಗಳನ್ನು ಹೊಂದಿರುವ ನಾವು ಆದಷ್ಟು ಎಚ್ಚರದಿಂದ ಇರಬೇಕು ಮತ್ತು ನಮ್ಮ ಪಡೆಗಳನ್ನು ಸದಾ ಸಿದ್ಧವಾಗಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.

ಗುಜರಾತ್ ಒಂದು ಗಡಿ ರಾಜ್ಯ. ನಮ್ಮ ರಾಜ್ಯವು ಪಾಕಿಸ್ತಾನದ ಜತೆ ಭೂ ಮತ್ತು ಜಲ ಗಡಿಯನ್ನು ಹೊಂದಿದೆ. ನೆರೆ ರಾಷ್ಟ್ರವು ವೈರತ್ವದ ನೀತಿಯನ್ನು ನಮ್ಮ ಜತೆ ತೋರಿಸುವ ಈ ಸಂದರ್ಭದಲ್ಲಿ ನಮ್ಮ ಭದ್ರತಾ ಪಡೆಗಳು ಇನ್ನಷ್ಟು ಜಾಗೃತವಾಗಿರಬೇಕಾದ ಅಗತ್ಯವಿದೆ ಎಂದರು.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut Price: ಅಡಿಕೆ, ಕಾಳುಮೆಣಸು ಇಂದಿನ ಮಾರುಕಟ್ಟೆ ದರ ಹೇಗಿದೆ

Gold Price: ದಾಖಲೆ ಬರೆದ ಬೆಳ್ಳಿ ಬೆಲೆ, ಚಿನ್ನದ ಬೆಲೆ ಎಷ್ಟಾಗಿದೆ ನೋಡಿ

ಜಿಎಸ್ ಟಿ ನೋಟಿಸ್ ಕೊಡ್ತಿರೋದು ಕೇಂದ್ರವಲ್ಲ ರಾಜ್ಯ ಸರ್ಕಾರ: ಪ್ರಲ್ಹಾದ್ ಜೋಶಿ

ಜೀವನಾಂಶವಾಗಿ ಕೋಟಿ ಹಣ, ಕಾರು, ಮನೆ ಕೇಳಿದ ಪತ್ನಿ: ನೀವೇ ದುಡಿಯಕ್ಕಾಗಲ್ವಾ ಎಂದ ಕೋರ್ಟ್

ಹೆಚ್ಚು ಸಮಯ ಬದಕಲು ಏನು ಮಾಡಬೇಕು: ಡಾ ಸಿಎನ್ ಮಂಜುನಾಥ್ ಸಲಹೆ ತಪ್ಪದೇ ನೋಡಿ

Show comments