Webdunia - Bharat's app for daily news and videos

Install App

ಮೋದಿಗೆ ಮೆಂಟಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ಅಗತ್ಯವಿದೆ: ಶರದ್ ಪವಾರ್

Webdunia
ಸೋಮವಾರ, 31 ಮಾರ್ಚ್ 2014 (13:26 IST)
ನರೇಂದ್ರ ಮೋದಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಹುಚ್ಚು ಹುಚ್ಚಾಗಿ ಮಾತನಾಡುವ ಮೋದಿಗೆ ಮಾನಸಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.
PTI

ಎನ್‌ಸಿಪಿ ಅಭ್ಯರ್ಥಿ ವಿಜಯ್ ಬಾಂಬಲೆ ಪರ ಪ್ರಚಾರ ಮಾಡುತ್ತ ಮಾತನಾಡಿದ ಕೇಂದ್ರ ಕೃಷಿ ಸಚಿವ ಪವಾರ್ "ಮೋದಿ ಹುಚ್ಚು ಹುಚ್ಚಾಗಿ ಅನೇಕ ವಿಷಯಗಳ ಬಗ್ಗೆ ಮಾತಾಡುತ್ತಾರೆ, ಅವರಿಗೆ ಮಾನಸಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ಅಗತ್ಯವಿದೆ " ಎಂದು ಲೇವಡಿ ಮಾಡಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ನಾಯಕರು ಮಾಡಿದ ತ್ಯಾಗದ ಕುರಿತು ಮೋದಿಗೆ ತಿಳಿದಿಲ್ಲ ಎಂದು ಅವರು ದೂರಿದ್ದಾರೆ.

" ಕಾಂಗ್ರೆಸ್ ಮುಕ್ತ ಭಾರತದ ಕುರಿತು ಮೋದಿ ಮಾತನಾಡುತ್ತಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಕೊಡುಗೆ ಮತ್ತು ಅದು ಮಾಡಿದ ತ್ಯಾಗದ ಬಗ್ಗೆ ಅವರಿಗೆ ತಿಳಿದಿದೆಯೇ? ಕಾಂಗ್ರೆಸ್ 'ಸಿದ್ಧಾಂತದಿಂದಾಗಿಯೇ ನಮಗೆ ಸ್ವಾತಂತ್ರ್ಯ ಸಿಕ್ಕಿತು " ಎಂದು ಪವಾರ್ ಅಭಿಪ್ರಾಯ ಪಟ್ಟಿದ್ದಾರೆ.

"2002 ರಲ್ಲಿ ನಡೆದ ಗುಜರಾತ್ ಗಲಭೆಯ ಪ್ರದೇಶ ಅಹಮದಾಬಾದ್‌ನಿಂದ ಕೇವಲ 20 ಕೀಮೀ ದೂರದಲ್ಲಿದೆ. ಆದರೂ ದುರ್ಘಟನೆಯಲ್ಲಿ ಬಲಿಯಾದವರ ಕುಟುಂಬದವರನ್ನು ಮೋದಿ ಈವರೆಗೆ ಭೇಟಿಯಾಗಿಲ್ಲ ಮತ್ತು ಅವರ ಕುರಿತು ಪಶ್ಚಾತಾಪ, ಬೇಸರ ವ್ಯಕ್ತ ಪಡಿಸಿಲ್ಲ" ಎಂದು ಪವಾರ್ ಅಸಮಾಧಾನ ವ್ಯಕ್ತಪಡಿಸಿದರು.

" ಮೋದಿ ದೇಶಕ್ಕೆ ಅಪಾಯಕಾರಿ ಎಂದಿರುವ ಅವರು ಮಹಾರಾಷ್ಟ್ರದಲ್ಲಿ ಆಲಿಕಲ್ಲು ಮತ್ತು ಮಳೆಯಿಂದ ಬಾಧಿತರಾದ ಜನರ ಕುರಿತು ಸಹ ಮೋದಿ ಗಮನ ನೀಡಿಲ್ಲ" ಎಂದು ಕೇಂದ್ರ ಸಚಿವ ಶರದ್ ಪವಾರ್ ಆರೋಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments