Select Your Language

Notifications

webdunia
webdunia
webdunia
webdunia

ಮೋದಿಗೆ ಮೆಂಟಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ಅಗತ್ಯವಿದೆ: ಶರದ್ ಪವಾರ್

ಮೋದಿಗೆ ಮೆಂಟಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ಅಗತ್ಯವಿದೆ: ಶರದ್ ಪವಾರ್
ಜಲ್ನಾ (ಮಹಾರಾಷ್ಟ್ರ) , ಸೋಮವಾರ, 31 ಮಾರ್ಚ್ 2014 (13:26 IST)
ನರೇಂದ್ರ ಮೋದಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಹುಚ್ಚು ಹುಚ್ಚಾಗಿ ಮಾತನಾಡುವ ಮೋದಿಗೆ ಮಾನಸಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.
PTI

ಎನ್‌ಸಿಪಿ ಅಭ್ಯರ್ಥಿ ವಿಜಯ್ ಬಾಂಬಲೆ ಪರ ಪ್ರಚಾರ ಮಾಡುತ್ತ ಮಾತನಾಡಿದ ಕೇಂದ್ರ ಕೃಷಿ ಸಚಿವ ಪವಾರ್ "ಮೋದಿ ಹುಚ್ಚು ಹುಚ್ಚಾಗಿ ಅನೇಕ ವಿಷಯಗಳ ಬಗ್ಗೆ ಮಾತಾಡುತ್ತಾರೆ, ಅವರಿಗೆ ಮಾನಸಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ಅಗತ್ಯವಿದೆ " ಎಂದು ಲೇವಡಿ ಮಾಡಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ನಾಯಕರು ಮಾಡಿದ ತ್ಯಾಗದ ಕುರಿತು ಮೋದಿಗೆ ತಿಳಿದಿಲ್ಲ ಎಂದು ಅವರು ದೂರಿದ್ದಾರೆ.

" ಕಾಂಗ್ರೆಸ್ ಮುಕ್ತ ಭಾರತದ ಕುರಿತು ಮೋದಿ ಮಾತನಾಡುತ್ತಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಕೊಡುಗೆ ಮತ್ತು ಅದು ಮಾಡಿದ ತ್ಯಾಗದ ಬಗ್ಗೆ ಅವರಿಗೆ ತಿಳಿದಿದೆಯೇ? ಕಾಂಗ್ರೆಸ್ 'ಸಿದ್ಧಾಂತದಿಂದಾಗಿಯೇ ನಮಗೆ ಸ್ವಾತಂತ್ರ್ಯ ಸಿಕ್ಕಿತು " ಎಂದು ಪವಾರ್ ಅಭಿಪ್ರಾಯ ಪಟ್ಟಿದ್ದಾರೆ.

"2002 ರಲ್ಲಿ ನಡೆದ ಗುಜರಾತ್ ಗಲಭೆಯ ಪ್ರದೇಶ ಅಹಮದಾಬಾದ್‌ನಿಂದ ಕೇವಲ 20 ಕೀಮೀ ದೂರದಲ್ಲಿದೆ. ಆದರೂ ದುರ್ಘಟನೆಯಲ್ಲಿ ಬಲಿಯಾದವರ ಕುಟುಂಬದವರನ್ನು ಮೋದಿ ಈವರೆಗೆ ಭೇಟಿಯಾಗಿಲ್ಲ ಮತ್ತು ಅವರ ಕುರಿತು ಪಶ್ಚಾತಾಪ, ಬೇಸರ ವ್ಯಕ್ತ ಪಡಿಸಿಲ್ಲ" ಎಂದು ಪವಾರ್ ಅಸಮಾಧಾನ ವ್ಯಕ್ತಪಡಿಸಿದರು.

"ಮೋದಿ ದೇಶಕ್ಕೆ ಅಪಾಯಕಾರಿ ಎಂದಿರುವ ಅವರು ಮಹಾರಾಷ್ಟ್ರದಲ್ಲಿ ಆಲಿಕಲ್ಲು ಮತ್ತು ಮಳೆಯಿಂದ ಬಾಧಿತರಾದ ಜನರ ಕುರಿತು ಸಹ ಮೋದಿ ಗಮನ ನೀಡಿಲ್ಲ" ಎಂದು ಕೇಂದ್ರ ಸಚಿವ ಶರದ್ ಪವಾರ್ ಆರೋಪಿಸಿದ್ದಾರೆ.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada