Select Your Language

Notifications

webdunia
webdunia
webdunia
webdunia

ಮೊಬೈಲ್, ಜೀನ್ಸ್ ಖರೀದಿಗಾಗಿ ಮಗುವನ್ನೇ ಮಾರಿದ ತಾಯಿ!

ಮೊಬೈಲ್, ಜೀನ್ಸ್ ಖರೀದಿಗಾಗಿ ಮಗುವನ್ನೇ ಮಾರಿದ ತಾಯಿ!
ಜೈಪುರ್ , ಶುಕ್ರವಾರ, 5 ಅಕ್ಟೋಬರ್ 2012 (10:18 IST)
PR
ಮೊಬೈಲ್ ಫೋನ್ ಮತ್ತು ಜೀನ್ಸ್ ಪ್ಯಾಂಟ್‌ ಖರೀದಿಸಲು ಮಗುವನ್ನೇ ಮಾರಿದ ಮಹಾತಾಯಿಯನ್ನು ಪೊಲೀಸರು ಬಂಧಿಸಿ ವಶಕ್ಕೆ ತೆಗೆದುಕೊಂಡಿದ್ದಾರೆ.

ಜಿಲ್ಲೆಯ ಮುಂಡಾಮಲಾ ಗ್ರಾಮದ ರಾಖಿ ಪಾತ್ರಾ ಎನ್ನುವ ಮಹಿಳೆ ಮೊಬೈಲ್ ಮತ್ತು ಜೀನ್ಸ್ ಪ್ಯಾಂಟ್‌ಗಳ ಖರೀದಿಗಾಗಿ 17 ತಿಂಗಳ ಗಂಡುಮಗುವನ್ನೇ ಮಾರಿದ್ದಾಳೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪಕ್ ಕುಮಾರ್ ತಿಳಿಸಿದ್ದಾರೆ.

ಮಾಧ್ಯಮ ವರದಿಗಳಿಂದ ಬೆಚ್ಚೆತ್ತ ಓರಿಸ್ಸಾ ಹೈಕೋರ್ಟ್ ಕೂಡಲೇ ಮಗುವನ್ನು ವಶಪಡಿಸಿಕೊಂಡು ತಾಯಿಗೆ ಹಿಂದಿರುಗಿಸುವಂತೆ ಪೊಲೀಸ್ ಇಲಾಖೆಗೆ ಆದೇಶ ನೀಡಿದೆ.

ಜೈಲಿನಲ್ಲಿರುವ ಪತಿಯ ವೆಚ್ಚವನ್ನು ಭರಿಸಲು ಮಗುವನ್ನು ಮಾರಿದ್ದಾಗಿ ಆರೋಪಿ ನೀಡಿದ ಹೇಳಿಕೆಯನ್ನು ತಿರಸ್ಕರಿಸಿದ ಪೊಲೀಸ್ ಅಧಿಕಾರಿಗಳು, ಬಡತನಕ್ಕಾಗಿ ಮಗುವಿನ ಮಾರಾಟ ಮಾಡಲಿಲ್ಲ. ಆದರೆ, ಬದಲಿಗೆ ಮೊಬೈಲ್ ಫೋನ್ ಮತ್ತು ಜೀನ್ಸ್ ಪ್ಯಾಂಟ್‌ ಖರೀದಿಸಲು ಹಣವನ್ನು ಬಳಸಿರುವ ಸಾಕ್ಷ್ಯಗಳು ದೊರೆತಿವೆ ಎಂದು ತಿಳಿಸಿದ್ದಾರೆ.

Share this Story:

Follow Webdunia kannada