Select Your Language

Notifications

webdunia
webdunia
webdunia
webdunia

ಮೃದು ಧೋರಣೆ ತಳೆದ ಅಮೇರಿಕಾ, ಮೋದಿಯನ್ನು ಭೇಟಿಯಾಗಲಿದ್ದಾರೆ ಅಮೇರಿಕನ್ ರಾಯಭಾರಿ

ಮೃದು ಧೋರಣೆ ತಳೆದ ಅಮೇರಿಕಾ, ಮೋದಿಯನ್ನು ಭೇಟಿಯಾಗಲಿದ್ದಾರೆ ಅಮೇರಿಕನ್ ರಾಯಭಾರಿ
, ಮಂಗಳವಾರ, 11 ಫೆಬ್ರವರಿ 2014 (11:17 IST)
PR
ವಾಶಿಂಗ್ಟನ್: ಬಿ ಜೆ ಪಿ ಯ ಪ್ರಧಾನಿ ಅಭ್ಯರ್ಥಿ ಮೋದಿಯವರ ಅಲೆ ಮತ್ತು ಜನಪ್ರಿಯತೆಯಿಂದ ಅಮೇರಿಕಾ ಪ್ರಭಾವಿತವಾಗಿದೆ ಎನ್ನಿಸುತ್ತಿದೆ. ಮೋದಿ ವಿಷಯದಲ್ಲಿ ಅಮೇರಿಕಾ ಮೃದು ಧೋರಣೆ ತಳೆಯುತ್ತಿದೆ ಎಂಬ ಸಂಕೇತಗಳು ದೊರೆಯುತ್ತಿವೆ. ಇದಕ್ಕೆ ಪುಷ್ಠಿ ನೀಡುವಂತೆ ಅಮೇರಿಕನ್ ರಾಯಭಾರಿ ನ್ಯಾನ್ಸಿ ಪೊವೆಲ್ ಮೋದಿಯನ್ನು ಭೇಟಿಯಾಗಲಿದ್ದಾರೆ . ಇದು 2002 ರ ಗುಜರಾತ್ ದಂಗೆ ಗೆ ಸಂಬಂಧಿಸಿದಂತೆ ಅಮೇರಿಕಾ ತಳೆದಿದ್ದ ನಿಲುವಿನಲ್ಲಿ ಬದಲಾವಣೆಯಾಗುತ್ತಿರುವುದರ ಸೂಚನೆ ಕೊಡುತ್ತಿದೆ.

ಫೆಬ್ರವರಿ 14 ಅಥವಾ 15 ರಂದು ಗುಜರಾತ್ ನ ಗಾಂಧಿಭವನದಲ್ಲಿ ಅವರಿಬ್ಬರು ಭೇಟಿಯಾಗುವ ನಿರೀಕ್ಷೆ ಇದೆ.

2002 ರ ಗುಜರಾತ್ ದಂಗೆಯನ್ನು ಗಮನಲ್ಲಿಟ್ಟುಕೊಂಡು ಅಮೇರಿಕಾದ ವಿದೇಶಿಮಂತ್ರಾಲಯ, 2005 ರಲ್ಲಿ ಮೋದಿಯ ವೀಸಾವನ್ನು ರದ್ದುಗೊಳಿಸಿತ್ತು. 'ಪ್ರಸ್ತುತ ಮೋದಿ ಭಾರತದ ಜನಪ್ರಿಯ ನಾಯಕರಲ್ಲಿ ಮುಂಚೂಣಿಯಲ್ಲಿದ್ದಾರೆ. ಭಾರತದ ಎಲ್ಲಾ ನ್ಯಾಯಾಲಯಗಳು ಮೋದಿಗೆ ಕ್ಲೀನ್ ಚಿಟ ನೀಡಿದ್ದು, ಮೋದಿ ಜತೆ ಸಂಬಂಧವನ್ನು ಇಟ್ಟುಕೊಳ್ಳದೇ ಇರುವುದು ಸಮಂಜಸವಲ್ಲ' ಎಂದು ಅಮೇರಿಕಾ ತಿಳಿಸಿದೆ.

Share this Story:

Follow Webdunia kannada