Select Your Language

Notifications

webdunia
webdunia
webdunia
webdunia

ಮೂವರನ್ನು ಭಕ್ಷಿಸಿದ ನರಮಾಂಸ ಭಕ್ಷಕ ಪೊಲೀಸರಿಗೆ ಸಿಕ್ಕಿಬಿದ್ದ

ಮೂವರನ್ನು ಭಕ್ಷಿಸಿದ ನರಮಾಂಸ ಭಕ್ಷಕ ಪೊಲೀಸರಿಗೆ ಸಿಕ್ಕಿಬಿದ್ದ
, ಬುಧವಾರ, 18 ಡಿಸೆಂಬರ್ 2013 (15:56 IST)
PR
PR
ಭೂಪಾಲ್: ಕಳೆದ 10 ದಿನಗಳಲ್ಲಿ ಮೂರು ಜನರನ್ನು ಬಲಿತೆಗೆದುಕೊಂಡ ನರಮಾಂಸ ಭಕ್ಷಕ ಸರಣಿ ಹಂತಕನನ್ನು ಮಧ್ಯಪ್ರದೇಶ ಮತ್ತು ರಾಜಸ್ತಾನ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. 38 ವರ್ಷ ವಯಸ್ಸಿನ ಕರಣ್‌ಸಿಂಗ್ ಗುಣಾ ಜಿಲ್ಲೆಯ ನಿವಾಸಿಯಾಗಿದ್ದು, ಬಲಿಪಶುಗಳ ದೇಹದಿಂದ ಬಸಿಯುವ ರಕ್ತವನ್ನು ಕುಡಿದು ಕೇಕೆ ಹಾಕುತ್ತಿದ್ದ, ತುಂಡುಮಾಡಿದ ದೇಹದ ಚೂರುಗಳನ್ನು ಕೂಡ ತಿನ್ನುತ್ತಿದ್ದ.

ಈ ಹಂತಕ ಇನ್ನಷ್ಟು ಕೊಲೆಗಳನ್ನು ಮಾಡಿರಬಹುದೆಂದು ಪೊಲೀಸರು ಭಾವಿಸಿದ್ದಾರೆ. ಸಿಂಗ್ ತನ್ನ ನಾಲ್ಕನೇ ಬಲಿಗಾಗಿ ಹೊಂಚುಹಾಕುತ್ತಿದ್ದಾಗ ಪೊಲೀಸರ ಬಲೆಗೆ ಬಿದ್ದ. ರಾಜಸ್ಥಾನದ ಬಾರಾ ಜಿಲ್ಲೆಯಲ್ಲಿ ಅವನನ್ನು ಪೊಲೀಸರು ಹಿಡಿದರು. ನರಹಂತಕನ ಅಡಗುತಾಣವು ದಟ್ಟ ಅರಣ್ಯದ ಮರವೊಂದರ ಕೊಂಬೆಗಳ ಮೇಲಿತ್ತು.
ಇನ್ನಷ್ಟು ಮಾಹಿತಿಗೆ ಮುಂದಿನ ಪುಟದಲ್ಲಿ

webdunia
PR
PR
ಸೆಮ್ರಾ ಗ್ರಾಮದ ದಟ್ಟ ಅರಣ್ಯದ ಮರವೊಂದರ ಮೇಲೆ ಆಸರೆ ನಿರ್ಮಿಸಿಕೊಂಡು ಕಳೆದ ಕೆಲವು ವರ್ಷಗಳಿಂದ ಅಲ್ಲಿ ವಾಸಿಸುತ್ತಿದ್ದ. ಅವನ ಅಡಗುತಾಣವನ್ನು ಪೊಲೀಸರು ಜಾಲಾಡಿದಾಗ, ಆರು ಕೊಡಲಿಯ ಹಿಡಿಗಳನ್ನು ಮತ್ತು ಬಲಿಪಶುವಿನ ರಕ್ತದ ಕಲೆಯಿರುವ ಹೊದಿಕೆ ಪೊಲೀಸರಿಗೆ ಪತ್ತೆಯಾಗಿದೆ.
ಇದೊಂದು ಭಯಾನಕ ಸ್ಥಳ ಎಂದು ಉದ್ಗರಿಸಿದ್ದಾರೆ.

8 ವರ್ಷಗಳ ಹಿಂದೆ ಸ್ವಂತ ತಾಯಿಯನ್ನೇ ಕೊಂದಿರುವ ನರಭಕ್ಷಕ ಅವಳ ರಕ್ತವನ್ನು ಕುಡಿದಿದ್ದ. ಅವನು ಪ್ರಾಣಿಗಳನ್ನು ಬೇಟೆಯಾಡಿ ಅವುಗಳ ಹಸಿ ಮಾಂಸವನ್ನು ತಿನ್ನುವ ಅಭ್ಯಾಸ ಬೆಳೆಸಿಕೊಂಡಿದ್ದ. ಅವನು ತನ್ನ ನಿಜನಾಮವನ್ನು ಬಹಿರಂಗ ಮಾಡಿರಲಿಲ್ಲ.. ನರಹಂತಕ ಹತ್ಯೆ ಮಾಡಿದ ಬಳಿಕ ಹೊದಿಕೆ ಯನ್ನು ಕೊಂಡೊಯ್ದಿದ್ದ.

webdunia
PR
PR
ಆ ಹೊದಿಕೆಯನ್ನು ಮೃತನ ಪತ್ನಿ ಗುರುತಿಸಿದ ಬಳಿಕ ಹಂತಕನ ನಿಜನಾಮಧೇಯ ಬಯಲಾಗಿತ್ತು. ಸಿಂಗ್ ಗುಣಾದ ರಾಮ್‌ಪುರಿಯಾ ಗ್ರಾಮದಲ್ಲಿ ತನ್ನ ಪ್ರಥಮ ಹತ್ಯೆಯನ್ನು ಮಾಡಿದ್ದ. ಡಿ.6ರಂದು ಹರಿರಾಮ್ ಬಾಬಾ ಎಂಬ ವ್ಯಕ್ತಿ ಮಲಗಿದ್ದಾಗ ಕೊಡಲಿಯಿಂದ ಕೊಚ್ಚಿ ಕೊಂದುಹಾಕಿದ್ದ. ಡಿ.13ರಂದು ರಾಮಪುರಿಯಾದ 8 ಕಿಮೀ ದೂರದ ಸೆಮ್ರಾ ಗ್ರಾಮದಲ್ಲಿ 32 ವರ್ಷ ವಯಸ್ಸಿನ ವ್ಯಕ್ತಿಯನ್ನು ಕೊಂದಾಗ ಪೊಲೀಸರಿಗೆ ಸುಳಿವು ಸಿಕ್ಕಿತು. ಹತ್ಯೆಯ ಕಾರ್ಯವಿಧಾನ ಒಂದೇ ರೀತಿ ಇದ್ದಿದ್ದರಿಂದ ಒಬ್ಬನೇ ವ್ಯಕ್ತಿ ಕೊಲೆ ಮಾಡಿದ್ದು ಖಚಿತವಾಗಿತ್ತು.

ಡಿ. 16ರಂದು ಬಾರಾ ಗ್ರಾಮದಲ್ಲಿ ಇದೇ ರೀತಿ ಇನ್ನೊಬ್ಬ ವ್ಯಕ್ತಿಯನ್ನು ಕೊಚ್ಚಿ ಕೊಂದುಹಾಕಿದ್ದ. ಮೃತದೇಹದ ಕಾಲುಗಳನ್ನು ಕತ್ತರಿಸಿ ಸಿಂಗ್ ಒಯ್ದಿದ್ದ. ಬಹುಶಃ ಕಾಲುಗಳನ್ನು ತಿಂದುಹಾಕಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Share this Story:

Follow Webdunia kannada