Select Your Language

Notifications

webdunia
webdunia
webdunia
webdunia

ಮುಸ್ಲಿಮರೇ ಒಗ್ಗಟ್ಟಿನಿಂದ ಮೋದಿ ಪ್ರಧಾನಿಯಾಗುವುದನ್ನು ತಡೆಯಿರಿ: ಆಜಂ ಖಾನ್ ಕರೆ

ಮುಸ್ಲಿಮರೇ ಒಗ್ಗಟ್ಟಿನಿಂದ ಮೋದಿ ಪ್ರಧಾನಿಯಾಗುವುದನ್ನು ತಡೆಯಿರಿ: ಆಜಂ ಖಾನ್ ಕರೆ
ಲಖ್ನೋ , ಬುಧವಾರ, 29 ಜನವರಿ 2014 (16:01 IST)
PTI
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಪ್ರಧಾನಿಯಾಗುವುದನ್ನು ತಡೆಯಲು ದೇಶದ ಮುಸ್ಲಿಮರು ಒಂದಾಗಬೇಕು. ಮುಸ್ಲಿಮರನ್ನು ವಿಭಜಿಸುವ ದೊಡ್ಡ ಷಡ್ಯಂತ್ರ ನಡೆದಿದೆ ಎಂದು ಉತ್ತರಪ್ರದೇಶದ ಸಚಿವ ಮೊಹಮ್ಮದ್ ಆಜಂ ಖಾನ್ ಹೇಳಿದ್ದಾರೆ.

ದೇಶದ ಮುಸ್ಲಿಮರನ್ನು ವಿಭಜಿಸುವ ಬಗ್ಗೆ ದೊಡ್ಡ ಷಡ್ಯಂತ್ರ ನಡೆದಿದೆ. ಒಂದು ವೇಳೆ ನಾವು ವಿಭಜನೆಯಾದಲ್ಲಿ ನರೇಂದ್ರ ಮೋದಿ ಕೇಂದ್ರದಲ್ಲಿ ಮುಂದಿನ ಸರಕಾರ ರಚಿಸ್ತಾರೆ. ಆದ್ದರಿಂದ ನಾವೆಲ್ಲಾ ಒಗ್ಗಟ್ಟಿನಿಂದ ಇರಬೇಕಾಗಿದೆ ಎಂದು ಕರೆ ನೀಡಿದ್ದಾರೆ.

ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲಾ ಕೆಲ ವಿಚ್ಚಿದ್ರಕಾರಿ ಶಕ್ತಿಗಳು ಕೋಮುಗಲಭೆ ಸೃಷ್ಟಿಸಿ ಪಕ್ಷಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ ನಡೆಸುತ್ತಿವೆ ಎಂದು ಆರೋಪಿಸಿದ್ದಾರೆ.

ಮಾಧ್ಯಮಗಳು ಕೂಡಾ ಮುಜಾಫರ್ ನಗರ ಗಲಭೆಯನ್ನು ಜೀವಂತವಾಗಿಡಲು ಪ್ರಯತ್ನಿಸುತ್ತಿವೆ. ಗಲಭೆ ಪೀಡಿತ ನಿರಾಶ್ರಿತರಿಗೆ ಸರಕಾರ ಸೂಕ್ತ ವ್ಯವಸ್ಥೆ ಮಾಡಿದ್ದರೂ ಇಲ್ಲ ಸಲ್ಲದ ಆರೋಪಗಳನ್ನು ಹುಟ್ಟುಹಾಕುತ್ತಿವೆ ಎಂದು ಕಿಡಿಕಾರಿದರು.

ಮೋದಿ ಒಬ್ಬ ಹಂತಕ. ಇಂತಹ ವ್ಯಕ್ತಿ ಯಾವತ್ತೂ ದೇಶದ ಪ್ರಧಾನಿಯಾಗಬಾರದು ಎಂದು ಗುಡುಗಿದರು.

ಭಯೋತ್ಪಾದನೆ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಕೆಲ ಮುಸ್ಲಿಮರ ವಿರುದ್ಧದ ಪ್ರಕರಣಗಳನ್ನು ಕೈ ಬಿಡುವ ಬಗ್ಗೆ ಸಮಾಜವಾದಿ ಪಕ್ಷ ಪ್ರಯತ್ನಿಸುತ್ತಿದೆ ಎನ್ನುವ ಆರೋಪಗಳಿಗೆ ಉತ್ತರಿಸಿದ ಅವರು, ಭಯೋತ್ಪಾದನೆ ಪ್ರಕರಣಗಳಲ್ಲಿ ಮುಗ್ದರಾಗಿರುವ ಮುಸ್ಲಿಮರ ವಿರುದ್ಧದ ಪ್ರಕರಣಗಳನ್ನು ಕೈಬಿಡಲು ತೀರ್ಮಾನಿಸಲಾಗಿತ್ತು. ಆದರೆ, ಮಾಧ್ಯಮಗಳ ಬೊಬ್ಬೆಯಿಂದಾಗಿ ಸರಕಾರ ಹಿಂದೆ ಸರಿದಿದೆ ಎಂದು ಸಚಿವ ಆಜಂ ಖಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada