Select Your Language

Notifications

webdunia
webdunia
webdunia
webdunia

ಮುಜಾಫರ್‌ ಗಲಭೆ: ಬಿಜೆಪಿ ಶಾಸಕ ಸುರೇಶ್ ರಾಣಾ ಬಂಧನ

ಮುಜಾಫರ್‌ ಗಲಭೆ: ಬಿಜೆಪಿ ಶಾಸಕ ಸುರೇಶ್ ರಾಣಾ ಬಂಧನ
ಲಖನೌ , ಶುಕ್ರವಾರ, 20 ಸೆಪ್ಟಂಬರ್ 2013 (19:53 IST)
PTI
ಉತ್ತರ ಪ್ರದೇಶದ ಮುಜಾಫರ್‌ನಗರದ ಕೋಮುಗಲಭೆಗೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಸುರೇಶ್ ರಾಣಾ ಅವರನ್ನು ಶುಕ್ರವಾರ ಲಖನೌ ಪೊಲೀಸರು ಬಂಧಿಸಿದ್ದಾರೆ.

ಮುಜಾಫರ್‌ನಗರ ಕೋಮುಗಲಭೆ ಸಂದರ್ಭದಲ್ಲಿ ದ್ವೇಷಪೂರಿತ ಭಾಷಣ ಮಾಡಿರುವ ಆರೋಪದ ಮೇಲೆ ರಾಣಾ ಅವರನ್ನು ಅವರ ನಿವಾಸದಲ್ಲಿ ಪೊಲೀಸರು ಬಂಧಿಸಲಾಯಿತು.

ರಾಣಾ ಅವರು ಗಲಭೆಗೆ ಸಂಬಂಧಿಸಿದಂತೆ ಬಂಧನಕೊಳ್ಳಗಾಗಿರುವ ಮೊದಲ ರಾಜಕಾರಣಿಯಾಗಿದ್ದಾರೆ. ಇನ್ನುಳಿದಂತೆ ರಾಜಕಾರಣಿಗಳಾದ ಖಾಧಿರ್ ರಾಣಾ, ಜಮೀಲ್ ಅಹಮದ್, ನೂರ್ ಸಲೀಂ ರಾಣಾ, ಮಾಜಿ ಸಂಸದ ಶೀಬುಜಾಮನ್, ಹುಕುಂ ಸಿಂಗ್, ಸಂಗತ್ ಸಿಂಗ್ ಸೋಮ್ ವಿರುದ್ಧ ವಾರೆಂಟ್ ಜಾರಿಯಾಗಿದ್ದು, ಅವರು ಸಹ ಬಂಧನದ ಭೀತಿ ಎದುರಿಸುತ್ತಿದ್ದಾರೆ.

ಮುಜಾಫರ್‌ನಗರ ಗಲಭೆ ಸಂದರ್ಭದಲ್ಲಿ ಸಭೆ ಸಮಾರಂಭಗಳನ್ನು ಮಾಡಬಾರದೆಂಬ ನಿಷೇಧಾಜ್ಞೆ ಜಾರಿಯಲ್ಲಿದ್ದರೂ, ಅದನ್ನು ಉಲ್ಲಂಘಿಸಿ ಪ್ರಚೋದನಾಕಾರಿ ಭಾಷಣಗಳನ್ನು ಮಾಡಿದ ಆರೋಪದ ಮೇಲೆ ಕೋರ್ಟ್ ಕಳೆದ ಬುಧವಾರ ಸುರೇಶ್ ರಾಣಾ ಸೇರಿದಂತೆ 6 ರಾಜಕಾರಣಿಗಳ ವಿರುದ್ಧ ವಾರೆಂಟ್ ಜಾರಿಮಾಡಿತ್ತು. ಕೋರ್ಟ್ ಆದೇಶದ ಮೇರೆಗೆ ಪೊಲೀಸರು ರಾಣಾ ಅವರನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.

ಕೋಮುಗಲಭೆಯಿಂದಾಗಿ 50 ಮಂದಿಯ ಸಾವಿಗೆ ಕಾರಣವಾದ ಮುಜಾಫರ್‌ನಗರ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಸಹ ತನ್ನ ಅಸಮಾಧಾನ ವ್ಯಕ್ತಪಡಿಸಿತ್ತು.

Share this Story:

Follow Webdunia kannada