Select Your Language

Notifications

webdunia
webdunia
webdunia
webdunia

ಮಹಾರಾಷ್ಟ್ರದಲ್ಲಿ 90% ಹುದ್ದೆ ಹೊಂದಿರುವ ಸ್ಥಳೀಯರು

ಮಹಾರಾಷ್ಟ್ರದಲ್ಲಿ 90% ಹುದ್ದೆ ಹೊಂದಿರುವ ಸ್ಥಳೀಯರು
ಮುಂಬಯಿ , ಬುಧವಾರ, 19 ನವೆಂಬರ್ 2008 (10:25 IST)
ಹೊರರಾಜ್ಯದವರು ಸ್ಥಳೀಯರ ಉದ್ಯೋಗಾವಕಾಶವನ್ನು ಕಸಿಯುತ್ತಿದ್ದಾರೆ ಎಂಬುದಾಗಿ ಮಹಾರಾಷ್ಟ್ರದ ವಿವಿಧ ರಾಜಕೀಯ ಪಕ್ಷಗಳು ಗಲಭೆ ನಡೆಸುತ್ತಿದ್ದರೆ, ಅಂಕಿಅಂಶಗಳು ಬೇರೆಯದೇ ಕತೆ ಹೇಳುತ್ತವೆ.

ಮಹಾರಾಷ್ಟ್ರ ಸರಕಾರದ ದಾಖಲೆಯಂತೆ ರಾಜ್ಯದಲ್ಲಿ ಸುಮಾರು 1.6 ಲಕ್ಷ ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ 10.86ಲಕ್ಷ ಜನರು ದುಡಿಯುತ್ತಿದ್ದಾರೆ. ಇದರಲ್ಲಿ 91% ಮೇಲ್ವಿಚಾರಣೆಯೇತರ ಮತ್ತು 97% ಮಂದಿ ಮೇಲ್ವಿಚಾರಣಾ ಹುದ್ದೆಗಳನ್ನು ಸ್ಥಳೀಯರು ಹೊಂದಿದ್ದಾರೆ.

ಬೃಹತ್ ಗಾತ್ರದ ಉದ್ಯಮಗಳಲ್ಲಿನ, 3435 ಯುನಿಟ್‌ಗಳಲ್ಲಿ 5.83ಲಕ್ಷ ಜನರಿಗೆ ಉದ್ಯೋಗವಕಾಶವಿದೆ. ಇದರಲ್ಲಿ ಸ್ಥಳೀಯರು 88% ಮೇಲ್ವಿಚಾರಣೆಯೇತರ ಮತ್ತು 78.7% ಮೇಲ್ವಿಚಾರಣಾ ಹುದ್ದೆಗಳನ್ನು ಹೊಂದಿದ್ದಾರೆ.

ಉದ್ಯೋಗ ಮಾರುಕಟ್ಟೆಯಲ್ಲಿ ಸ್ಥಳೀಯ ಪ್ರತಿಭೆಗಳನ್ನು ಕಡೆಗಣಿಸಲಾಗುತ್ತಿದೆ ಎಂಬ ವಾದವನ್ನು ಈ ಅಂಕಿಅಂಶಗಳು ಸುಳ್ಳೆಂದು ಪ್ರತಿಪಾದಿಸುತ್ತವೆ. ರಾಜ್‌ಠಾಕ್ರೆ ಮತ್ತು ಎಂಎನ್ಎಸ್ ರಚಿಸಿದ ಪ್ರಾಂತೀಯ ರಾಜಕಾರಣದ ಫಲವಾಗಿ ಶಿವಸೇನಾದಿಂದ ಕಾಂಗ್ರೆಸ್‌ವರೆಗೆ ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳು ಮಣ್ಣಿನ ಮಕ್ಕಳಿಗಾಗಿ ಹೋರಾಟಕ್ಕೆ ನಿಂತಿದ್ದನ್ನು ಇಲ್ಲಿ ಸ್ಮರಿಸಬಹುದು.

Share this Story:

Follow Webdunia kannada