Select Your Language

Notifications

webdunia
webdunia
webdunia
webdunia

ಮಮತಾ ಸ್ನೇಹಹಸ್ತ, ಎಡಪಕ್ಷಗಳಿಗೆ ಜಯಲಲಿತಾ ಗುಡ್‌ಬೈ

ಮಮತಾ ಸ್ನೇಹಹಸ್ತ, ಎಡಪಕ್ಷಗಳಿಗೆ ಜಯಲಲಿತಾ ಗುಡ್‌ಬೈ
, ಶುಕ್ರವಾರ, 7 ಮಾರ್ಚ್ 2014 (16:51 IST)
PR
PR
ನವದೆಹಲಿ: ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಹೊಸ ರಾಜಕೀಯ ಸ್ನೇಹ ಬೆಸೆಯುವ ಸೀಸನ್ ಆರಂಭವಾಗಿದೆ. ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶುಕ್ರವಾರ ಬೆಳಿಗ್ಗೆ ಫೋನ್ ಕರೆಯೊಂದನ್ನು ಮಾಡಿ ಮುಂದಿನ ಚುನಾವಣೆಯಲ್ಲಿ ಅವರಿಗೆ ಶುಭಾಶಯ ಕೋರಿದರು. ಗುರುವಾರದ ಎರಡು ಘಟನೆಗಳು ಆ ಫೋನ್ ಕರೆಗೆ ಪ್ರೇರಣೆಯಾಗಿದ್ದವು. ಮಮತಾ ಟೆಲಿವಿಷನ್ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಜಯಲಲಿತಾ ಅವರು ಪ್ರಧಾನಿಯಾಗುವುದಾದರೆ ಬೆಂಬಲಿಸಲು ತಮಗೆ ಸಂತೋಷವಾಗುತ್ತದೆ ಎಂದು ಹೇಳಿದ್ದರು. ಮಮತಾ ಹಾಗೆ ಹೇಳಿದ ತಕ್ಷಣವೇ, ಮಮತಾ ಕಡುವೈರಿಗಳಾದ ಎಡಪಕ್ಷಗಳ ಜತೆ ಜಯಾ ತಮಿಳುನಾಡಿನಲ್ಲಿ ಸ್ಥಾನ ಹೊಂದಾಣಿಕೆಯನ್ನು ಕಡಿದುಕೊಂಡರು.

webdunia
PR
PR
ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಜಯಲಲಿತಾ ಮತ್ತು ಮಾಯಾವತಿ ಜತೆ ಮೈತ್ರಿ ಮಾಡಿಕೊಳ್ಳಲು ಸಿದ್ಧವಿರುವುದಾಗಿ ಮಮತಾ ತಿಳಿಸಿದ್ದರು. ವಾಜಪೇಯಿ ಸರ್ಕಾರದಲ್ಲಿ ತಾವು ಪಾಲುದಾರ ಪಕ್ಷಗಳಾಗಿದ್ದ ಬಗ್ಗೆ ಮಮತಾ ಗಮನಸೆಳೆದಿದ್ದರು.

ಸಮೀಕ್ಷೆಗಳು ಮತ್ತು ಜನಾಭಿಪ್ರಾಯ ಸಂಗ್ರಹಗಳಲ್ಲಿ ಮೋದಿಯವರ ಬಿಜೆಪಿ ಚುನಾವಣೆಯಲ್ಲಿ ಅತೀ ದೊಡ್ಡ ಪಕ್ಷವಾಗಿ ಹೊಮ್ಮಲಿದೆ ಎಂದು ಭವಿಷ್ಯ ನುಡಿದಿವೆ. ಆದರೆ 272 ಬಹುಮತದ ಸಂಖ್ಯೆಯನ್ನು ಮುಟ್ಟಲು ವಿಫಲವಾಗುತ್ತದೆಂದೂ ಸಮೀಕ್ಷೆಗಳು ತಿಳಿಸಿವೆ. ಅಂತಹ ಸಂದರ್ಭದಲ್ಲಿ ಎಐಎಡಿಎಂಕೆ ಮತ್ತು ತೃಣಮೂಲ ಕಾಂಗ್ರೆಸ್ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಬಹುದೆಂದು ಭಾವಿಸಲಾಗಿದೆ.

Share this Story:

Follow Webdunia kannada