Select Your Language

Notifications

webdunia
webdunia
webdunia
webdunia

ಮದುವೆಯ ಆಮಿಷ ಒಡ್ಡಿ ಆದಿವಾಸಿ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ

ಮದುವೆಯ ಆಮಿಷ ಒಡ್ಡಿ ಆದಿವಾಸಿ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ
ಸಿವನಿ , ಮಂಗಳವಾರ, 1 ಏಪ್ರಿಲ್ 2014 (14:42 IST)
ಮದುವೆಯ ಆಮಿಷ ಒಡ್ಡಿ ಎರಡು ವರ್ಷಗಳ ಕಾಲ ಆದಿವಾಸಿ ಯುವತಿಯ ಮೇಲೆ ಅದೇ ಗ್ರಾಮದ ಯುವಕನೊಬ್ಬ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ.

ಸಿವನಿ ಜಿಲ್ಲೆಯ ಲಖನವಾಡಾ ಠಾಣಾ ಕ್ಷೇತ್ರದ ಗ್ರಾಮವೊಂದರಲ್ಲಿ ಆದಿವಾಸಿ ಯುವತಿಯೊಬ್ಬಳು ತನ್ನದೇ ಗ್ರಾಮದ ಯುವಕ ಚೇತರಾಮ ಸನೋಡಿಯಾ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂದು ದೂರು ದಾಖಲಿಸಿದ್ದಾಳೆ ಎಂದು ನಗರ ಪೋಲಿಸ್ ನಿರೀಕ್ಷಕರಾದ ಸಿಂಹ ಕುಮಾರ ತಿಳಿಸಿದ್ದಾರೆ.

22 ವರ್ಷದ ಯುವತಿಯ ದೂರಿನ ಆಧಾರದ ಮೇಲೆ ಅರೋಪಿ ಚೇತರಾಮ ಸನೋಡಿಯಾ ವಿರುದ್ಧ ಆಯ್ ಪಿಸಿ 376, 506 ಮತ್ತು ಎಸ್ ಸಿ ಎಸ್ ಟಿ ಕಾಯಿದೆ 3(1) ಮತ್ತು 3(2)ಪ್ರಕಾರ ಪ್ರಕರಣವನ್ನು ದಾಖಲಿಸಲಾಗಿದೆ.

"ವಿವಾಹದ ಆಸೆ ತೋರಿಸಿ ನನ್ನನ್ನು ಬಳಸಿಕೊಂಡಿದ್ದ ಆತ ಈಗ ಮದುವೆಯಾಗಲು ಒಪ್ಪುತ್ತಿಲ್ಲ ಎಂದು ಯುವತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ". ಪೋಲಿಸರು ನಾಪತ್ತೆಯಾದ ಆರೋಪಿಯನ್ನು ಬಂಧಿಸಲು ಜಾಲ ಬೀಸಿದ್ದಾರೆ.

Share this Story:

Follow Webdunia kannada