Select Your Language

Notifications

webdunia
webdunia
webdunia
webdunia

ಮತದಾರರಲ್ಲಿ ಮತದಾನದ ಅರಿವು ಮೂಡಿಸಲು ಸೈಫ್, ಸೋನಾಕ್ಷಿ ಕಣಕ್ಕೆ

ಮತದಾರರಲ್ಲಿ ಮತದಾನದ ಅರಿವು ಮೂಡಿಸಲು ಸೈಫ್, ಸೋನಾಕ್ಷಿ ಕಣಕ್ಕೆ
ನವದೆಹಲಿ , ಗುರುವಾರ, 28 ನವೆಂಬರ್ 2013 (13:21 IST)
PTI
ಚುನಾವಣೆ ಆಯೋಗ ಮತದಾನದ ಹಕ್ಕು ಅರಿವು ಮೂಡಿಸಲು ಆಯೋಜಿಸಿದ ಬೈಕ್ ಮೆರವಣಿಗೆಯಲ್ಲಿ ಬಾಲಿವುಡ್‌ನ ಬುಲೆಟ್ ರಾಜಾ ಚಿತ್ರದ ನಿರ್ದೇಶಕ ತಿಗಮಾನ್ಶು ಧುಲಿಯಾ ನಟ ಸೈಫ್‌ ಅಲಿಖಾನ್ ಮತ್ತು ಸೋನಾಕ್ಷಿ ಸಿನ್ಹಾ ಪಾಲ್ಗೊಳ್ಳಲಿದ್ದಾರೆ ಚುನಾವಣೆ ಸಮಿತಿ ತಿಳಿಸಿದೆ.

ಉತ್ತರ ದೆಹಲಿಯ ಸಿವಿಲ್ ಲೈನ್ ಪ್ರದೇಶದಲ್ಲಿ ಬುಲೆಟ್ ರಾಜಾ ತಂಡದ ಸದಸ್ಯರು ಡಿಸೆಂಬರ್ 4 ರಂದು ನಡೆಯಲಿರುವ ಚುನಾವಣೆಯಲ್ಲಿ ಮತದಾನ ಮಾಡುವಂತೆ ಜನತೆಗೆ ಕೋರಲಿದ್ದಾರೆ ಎಂದು ಚುನಾವಣೆ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

ಸಿಸ್ಟೆಮೆಟಿಕ್ ವೋಟರ್ಸ್ ಎಜ್ಯುಕೇಶನ್ ಆಂಡ್ ಎಲೆಕ್ಟ್ರೋಲ್ ಪಾರ್ಟಿಸಿಪಿಶೇನ್ ಆಕ್ಟಿವಿಟಿ ಕಾರ್ಯಕ್ರಮದ ಅಂಗವಾಗಿ ನವದೆಹಲಿಯಲ್ಲಿ ಆಯೋಜಿಸಲಾಗಿದೆ.

ಮತದಾರರಿಗೆ ಮತದಾನದ ಹಕ್ಕಿನ ಬಗ್ಗೆ ಅರಿವು ಮೂಡಿಸಲು ಈಗಾಗಲೇ ಅನೇಕ ತಾರೆಯರು, ನಟರು ಪ್ರಚಾರ ಮಾಡಿದ್ದಾರೆ. ಆದರೆ, ಚಿತ್ರದ ಸಂಪೂರ್ಣ ತಂಡವೊಂದು ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಮೊದಲ ಬಾರಿಯಾಗಿದೆ ಎಂದು ಚುನಾವಣೆ ಆಯೋಗ ಸಂತಸ ವ್ಯಕ್ತಪಡಿಸಿದೆ.

Share this Story:

Follow Webdunia kannada