Webdunia - Bharat's app for daily news and videos

Install App

ಮಗನ ಹೆಂಡತಿಯನ್ನೇ ಮದುವೆಯಾದ ಭೂಪ ಮಹಾಶಯ

Webdunia
ಮಂಗಳವಾರ, 30 ಏಪ್ರಿಲ್ 2013 (16:10 IST)
WD
72 ವರ್ಷ ವಯಸ್ಸಿನ ಭೂಪನೊಬ್ಬ ಮಗನ ಹೆಂಡತಿಯನ್ನೇ ಮದುವೆಯಾದ ಘಟನೆ ಬಾಲಿಕುಡಾ ಪೊಲೀಸ್ ಠಾಣೆ ವ್ಯಾಪ್ತಿ ಪ್ರದೇಶದ ಜಗತ್‌ಸಿಂಗ್‌ಪುರ್ ಜಿಲ್ಲೆಯ ಸಪೂರ್ ಗ್ರಾಮದಲ್ಲಿ ನಡೆದಿದೆ.

ಮಾವ ಹರಿಹರ್ ಮಲಿಕ್ ಮತ್ತು ಸೊಸೆ ರೇಣುಕಾ ಮಲಿಕ್ ಅವರ ಅಪವಿತ್ರ ವಿವಾಹದಿಂದ ಆಘಾತಗೊಂಡ ಗ್ರಾಮಸ್ಥರು, ಸಂಪ್ರದಾಯವನ್ನು ಉಲ್ಲಂಘಿಸಿದ್ದಕ್ಕಾಗಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ನವದಂಪತಿಗಳಿಗೆ ಗ್ರಾಮವನ್ನು ತೊರೆಯುವಂತೆ ಒತ್ತಡ ಹೇರಿದ್ದರು ಎಂದು ಮೂಲಗಳು ತಿಳಿಸಿವೆ.

ಆರೋಪಿ ಹರಿಹರನ್ ನೆರೆಹೊರೆಯವರ ಒತ್ತಡಗಳಿಗೆ ಮಣಿಯದಿದ್ದಾಗ ಗ್ರಾಮಸ್ಥರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಪೊಲೀಸರು ನವದಂಪತಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದ್ದು ಕಾನೂನುಬಾಹಿರ ಕೃತ್ಯವೆಂದು ಕಂಡುಬಂದಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಕೇಂದ್ರಪಾಡಾ ಪೊಲೀಸ್ ಠಾಣೆಯ ಅಧಿಕಾರಿ ಟಿ.ಪ್ರಧಾನ್ ತಿಳಿಸಿದ್ದಾರೆ.

ಏತನ್ಮಧ್ಯೆ, 72 ವರ್ಷ ವಯಸ್ಸಿನ ಹರಿಹರನ್ ಪತ್ನಿ ಕಳೆದ ಐದು ವರ್ಷಗಳ ಹಿಂದೆ ಮೃತಳಾಗಿದ್ದಳು. ಮಗ ಬಿಚಿತ್ರ ಮಲಿಕ್ ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿಗೆ ಕೆಲಸಕ್ಕೆಂದು ಹೋದವನು ನಾಪತ್ತೆಯಾಗಿದ್ದ ಎನ್ನಲಾಗಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments