Select Your Language

Notifications

webdunia
webdunia
webdunia
webdunia

ಮಂಗಳ ಯಾತ್ರೆಯ ಉಪಗ್ರಹ ಎದುರಿಸಿದ ಮೊದಲ ಸಮಸ್ಯೆ

ಮಂಗಳ ಯಾತ್ರೆಯ ಉಪಗ್ರಹ ಎದುರಿಸಿದ ಮೊದಲ ಸಮಸ್ಯೆ
, ಸೋಮವಾರ, 11 ನವೆಂಬರ್ 2013 (19:43 IST)
PR
PR
ನವದೆಹಲಿ: ಮಂಗಳ ಗ್ರಹಕ್ಕೆ ಭಾರತದ ಯಾತ್ರೆ ತನ್ನ ಮೊದಲ ಸಮಸ್ಯೆಗೆ ಗುರಿಯಾಗಿದೆ. ನಿನ್ನೆ ರಾತ್ರಿ ಉಪಗ್ರಹವು ಅವಶ್ಯಕ 100,000 ಕಿಮೀಗೆ ತನ್ನ ಕಕ್ಷೆಯನ್ನು ಏರಿಸಿಕೊಳ್ಳುವಲ್ಲಿ ಅಸಮರ್ಥವಾಗಿದೆ. ಉಪಗ್ರಹ ಸುಸ್ಥಿತಿಯಲ್ಲಿದ್ದು, ಅದನ್ನು ಎತ್ತರಕ್ಕೇರಿಸುವ ಇನ್ನೊಂದು ಪ್ರಯತ್ನವನ್ನು ನಾಳೆ ಬೆಳಿಗ್ಗೆ ಮಾಡಲಾಗುವುದು.ಮಂಗಳ ಗ್ರಹಕ್ಕೆ ನೇರವಾಗಿ ಹಾರುವ ಬದಲು 1350 ಕೆಜಿ ಉಪಗ್ರವು ಸುಮಾರು ಒಂದು ತಿಂಗಳ ಕಾಲ ಭೂಕಕ್ಷೆಯಲ್ಲಿ ಪರಿಭ್ರಮಿಸಿ,ಭೂಮಿಯ ಗುರುತ್ವಶಕ್ತಿಯಿಂದ ಚಿಮ್ಮುವುದಕ್ಕೆ ವೇಗವನ್ನು ಹೆಚ್ಚಿಸಿಕೊಂಡು 780 ದಶಲಕ್ಷ ಕಿ.ಮೀ.ಪ್ರಯಾಣವನ್ನು ಮುಂದುವರಿಸಲಿದೆ.

ವೈಫಲ್ಯ ವಿಶ್ಲೇಷಕ ಸಮಿತಿಯು ಮೇಲಿನ ಸಮಸ್ಯೆ ಹೇಗೆ ಉದ್ಭವಿಸಿತೆಂದು ಪರಿಶೀಲಿಸುವುದಾಗಿ ಇಸ್ರೋ ಅಧ್ಯಕ್ಷ ಕೆ.ರಾಧಾಕೃಷ್ಣನ್ ಹೇಳಿದರು. ಮಂಗಳಯಾನವು 300 ದಿನಗಳಲ್ಲಿ 200 ದಶಲಕ್ಷ ಕಿಮೀಗಿಂತ ಹೆಚ್ಚು ಪ್ರಯಾಣ ಮಾಡಿ ಕೆಂಪು ಗ್ರಹವನ್ನು ಮುಂದಿನ ಸೆಪ್ಟೆಂಬರ್‌ನಲ್ಲಿ ಮುಟ್ಟಲಿದೆ.

Share this Story:

Follow Webdunia kannada