Select Your Language

Notifications

webdunia
webdunia
webdunia
webdunia

ಭ್ರಷ್ಟ ಕಾಂಗ್ರೆಸ್ ನಾಯಕರನ್ನು ಮಟ್ಟಹಾಕಿ: ನರೇಂದ್ರ ಮೋದಿ ಕರೆ

ಭ್ರಷ್ಟ ಕಾಂಗ್ರೆಸ್ ನಾಯಕರನ್ನು ಮಟ್ಟಹಾಕಿ: ನರೇಂದ್ರ ಮೋದಿ ಕರೆ
ಮಣಿಪುರ , ಶನಿವಾರ, 8 ಫೆಬ್ರವರಿ 2014 (17:04 IST)
PTI
ಮಣಿಪುರದಲ್ಲಿ ಕಾಂಗ್ರೆಸ್ ನಾಯಕರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಇಂತಹವರನ್ನು ಮೊದಲು ಮಟ್ಟಹಾಕಬೇಕು. ಎನ್‌ಕೌಂಟರ್ ಎಂಬ ಹೆಸರಲ್ಲಿ ಗರ್ಭಿಣಿ ಮಹಿಳೆಯನ್ನು ಹತ್ಯೆಗೈದಿದ್ದಾರೆ ಎಂದು ಮೋದಿ ವಿಷಾಧಿಸಿದ್ದಾರೆ.

ಈಶಾನ್ಯ ವಿದ್ಯಾರ್ಥಿ ನಿಡೋ ತಾನಿಯಾ ಹತ್ಯೆ ಪ್ರಕರಣ ದೇಶ ತಲೆತಗ್ಗಿಸುವಂತೆ ಮಾಡಿದೆ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.

ಇಂದು ಮಣಿಪುರದಲ್ಲಿ ಭಾಷಣ ಮಾಡಿದ ಮೋದಿ, ಈ ಹತ್ಯೆ ಪ್ರಕರಣ ದೇಶಕ್ಕೆ ನಾಚಿಕೆಗೇಡಾಗಿದೆ. ಈಶಾನ್ಯ ಜನರಿಗೆ ಯುಪಿಎ ಸರ್ಕಾರ ಸೂಕ್ತ ಭದ್ರತೆ ಒದಗಿಸದೆ ಇರುವುದೇ ಇದಕ್ಕೆ ಕಾರಣ ಎಂದು ಆರೋಪಿಸಿದ್ದಾರೆ.

ವಿದೇಶದಲ್ಲಿರುವ ಕಪ್ಪು ಹಣವನ್ನು ಭಾರತೀಯ ಜನತಾ ಪಕ್ಷ ವಾಪಸ್ ತರಲಿದೆ. ಕಪ್ಪು ಹಣದ ಪ್ರತಿ ನಾಣ್ಯವನ್ನು ಬಿಡದೆ ಭಾರತಕ್ಕೆ ತರುವುದೇ ಬಿಜೆಪಿ ಗುರಿಯಾಗಿದೆ. ಬಿಜೆಪಿ, ಜನರಿಗೆ ನೀಡಿದ ಭರವಸೆ ಪೂರೈಸಲಿದೆ ಎಂದು ಅವರು ಹೇಳಿದ್ದಾರೆ.

ದೇಶದ ಈಶಾನ್ಯ ಭಾಗದಲ್ಲಿ ಡ್ರಗ್ಸ್ ಬಳಕೆ ಹೆಚ್ಚಾಗಿದ್ದು, ಅತಿ ದೊಡ ಸಮಸ್ಯೆಯಾಗಿ ಕಾಡುತ್ತಿದೆ. ಇದನ್ನು ತಡೆಯುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಮೋದಿ ಆಪಾದಿಸಿದ್ದಾರೆ.

ಮಣಿಪುರುದ ಜನತೆಯ ಜೀವನ, ಭೂಮಿ ಯಾವುದೇ ಭದ್ರತೆ ಇಲ್ಲ. ಇಲ್ಲಿನ ಜನರಿಗೆ ಭದ್ರತೆ ನೀಡುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದ್ದು, ಮಣಿಪುರದ ಜನತೆಯನ್ನು ಸಮಸ್ಯೆಗೆ ಸಿಲುಕಿಸಿದೆ ಎಂದು ಮೋದಿ ಆಪಾದಿಸಿದ್ದಾರೆ.

ನಿಡೋ ತಾನಿಯಾ ಹತ್ಯೆ ಪ್ರಕರಣದಲ್ಲಿ ದೆಹಲಿ ಸರ್ಕಾರ ನ್ಯಾಯ ಒದಗಿಸಲಿದೆ ಎಂಬ ವಿಶ್ವಾಸವಿದೆ. ನಿಡೋ ತಾನಿಯಾ ಹತ್ಯೆ ಬಗ್ಗೆ ಸೂಕ್ತ ತನಿಖೆ ನಡೆಸಿ, ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡಬೇಕು ಎಂದು ಮೋದಿ ಒತ್ತಾಯಿಸಿದ್ದಾರೆ.

ಭಾರತೀಯ ಸಂಸ್ಕೃತಿಯಲ್ಲಿ ಮಣಿಪುರದ ನೃತ್ಯ ಬಹಳ ಪ್ರಮುಖವಾದದ್ದು. ಕ್ರೀಡಾ ಕ್ಷೇತ್ರಕ್ಕೆ ಮಣಿಪುರದ ಕೊಡುಗೆ ಹೆಚ್ಚಾಗಿದೆ ಎಂದ ಅವರು, ಇಂತಹ ನಾಡಿಗೆ ನನ್ನ ಸಲ್ಯೂಟ್ ಎಂದಿದ್ದಾರೆ.

Share this Story:

Follow Webdunia kannada