Select Your Language

Notifications

webdunia
webdunia
webdunia
webdunia

ಭುಟ್ಟೊ ಹತ್ಯೆ ಶಾಂತಿ ಪ್ರಕ್ರಿಯೆಗೆ ಅಡ್ಡಿ

ಭುಟ್ಟೊ ಹತ್ಯೆ ಶಾಂತಿ ಪ್ರಕ್ರಿಯೆಗೆ ಅಡ್ಡಿ
ನವದೆಹಲಿ , ಶುಕ್ರವಾರ, 28 ಡಿಸೆಂಬರ್ 2007 (09:31 IST)
ಜಾರಿಯಲ್ಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಶಾಂತಿ ಪ್ರಕ್ರಿಯೆಯ ಮೇಲೆ ಮಾಜಿ ಪ್ರಧಾನಿ ಬೇನಜೀರ್ ಭುಟ್ಟೊ ಅವರ ಹತ್ಯೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು. ಶಾಂತಿ ಪ್ರಕ್ರಿಯೆಯ ಮಾತುಕತೆಗಳು ಕೆಲಕಾಲ ಸ್ಥಗಿತಗೊಳ್ಳಬಹುದು ಎಂದು ಮಾಜಿ ವಿದೇಶಾಂಗ ಖಾತೆ ಸಚಿವ ಕೆ. ನಟ್ವರ್ ಸಿಂಗ್ ಅವರು ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಮೂರನೆ ಬಾರಿಗೆ ಪಾಕ್ ಪ್ರಧಾನಿಯಾಗಲಿದ್ದ ಭುಟ್ಟೊ ಅವರ ಅಕಸ್ಮಿಕ ಸಾವಿನಿಂದ ನನಗೆ ಆಘಾತವಾಗಿದೆ. ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ಪುನರ್ ಜಾರಿ ಪ್ರಕ್ರಿಯೆ ಕೆಲವೇ ದಿನಗಳ ಹಿಂದೆ ಪ್ರಾರಂಭವಾಗಿತ್ತು. ಮಾಜಿ ಪ್ರಧಾನಿಯ ಸಾವಿನಿಂದ ಪುನಃ ಪ್ರಜಾಪ್ರಭುತ್ವದ ಸ್ಥಾಪನೆಗೆ ಹೊಡೆತ ಬಿದ್ದಂತಾಗಿದೆ ಎಂದು ಅವರು ಹೇಳಿದರು.

ರಾಜಕೀಯ ತಲ್ಲಣಕ್ಕೆ ಒಳಗಾಗಿರುವ ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಗಳು ಜನೇವರಿ 7ರಂದು ನಡೆಯಬೇಕಿತ್ತು. ಪರಿಸ್ಥಿತಿ ತ್ವೇಷಮಯವಾಗಿರುವ ಕಾರಣ ಚುನಾವಣೆಯನ್ನು ಮುಂದೂಡುವ ಸಾಧ್ಯತೆ ಇದೆ. ಭಯೋತ್ಪಾದನೆಯನ್ನು ನಿಯಂತ್ರಿಸಬಹುದು. ನಿರ್ನಾಮಗೊಳಿಸಲು ಸಾಧ್ಯವಿಲ್ಲ. ಭಯೋತ್ಪಾದಕರು ಯಾವುದೇ ಸ್ಥಳದಲ್ಲಿ ದಾಳಿ ಮಾಡಬಹುದು.

ಮಾಜಿ ರಾಷ್ಟ್ರೀಯ ಸುರಕ್ಷಾ ಸಲಹೆಗಾರ ಬ್ರಜೇಷ್ ಮಿಶ್ರಾ ಅವರು ಭುಟ್ಟೊ ಅವರ ರಾಜಕೀಯ ಹತ್ಯೆಯನ್ನು ಪ್ರಜಾಪ್ರಭುತ್ವದ ಕೊಲೆ ಎಂದು ಖಂಡಿಸಿದ್ದಾರೆ. ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರು ಉದ್ದೇಶಿಸಿ ರಾಲಿಯಲ್ಲಿ ಸಂಭವಿಸಿದ ಬಾಂಬ್ ಸ್ಪೋಟವನ್ನು ಉಲ್ಲೇಖಿಸಿ. ಅವರು ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವದ ಬೇರು ಗಟ್ಟಿಯಾಗಲು ಅಲ್ಲಿರುವ ವಿದ್ವಂಸಕ, ಮತೀಯ ಭಯೋತ್ಪಾದಕರು ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

Share this Story:

Follow Webdunia kannada