Select Your Language

Notifications

webdunia
webdunia
webdunia
webdunia

ಬ್ರಹ್ಮಕುಮಾರಿ ಆಶ್ರಮದಲ್ಲಿ ಕಾಮಕೇಳಿ : ಸೇವಕಿಯರಿಂದ ಸೆಕ್ಸ್‌ ಸೇವೆ.

ಬ್ರಹ್ಮಕುಮಾರಿ ಆಶ್ರಮದಲ್ಲಿ ಕಾಮಕೇಳಿ : ಸೇವಕಿಯರಿಂದ ಸೆಕ್ಸ್‌ ಸೇವೆ.
ಇಂದೋರ್‌ , ಸೋಮವಾರ, 31 ಮಾರ್ಚ್ 2014 (16:28 IST)
ಶಿವ ಶಿವ.. ಎಂಥಾ ಕಾಲ ಬಂತಪ್ಪ.. ಪರಮಾತ್ಮನನ್ನು ಕಾಣುವ ತಾಣದಲ್ಲಿ ಕಾಮ ಕೇಳಿ ಅಬ್ಬರದ ತಾಂಡವಾವಡುತ್ತಿದೆ.. ಬ್ರಹ್ಮಕುಮಾರಿ ಆಶ್ರಮದಲ್ಲಿ ಕಾಮಕೇಳಿ ಎಗ್ಗಿಲ್ಲದೆ ನಡೆಯುತ್ತಿದೆ. ಆಶ್ರಮಕ್ಕೆ ಬಂದ ಅತಿಥಿಗಳಿಗೆ ಸೇವಕಿಯರಿಂದ ಸೆಕ್ಸ್‌ ಸೇವೆ ನೀಡಲಾಗುತ್ತಿದೆ ಎಂದು ನೊಂದಿರುವ ಅದೇ ಆಶ್ರಮದ ಸೇವಕಿಯೊಬ್ಬರು ಮಾಧ್ಯಮದ ಎದುರು ಬಂದು ತನ್ನ ಮೇಲಿನ ದೌರ್ಜನ್ಯವನ್ನು ಹೇಳಿಕೊಂಡಿದ್ದಾಳೆ.

ಅಷ್ಟೆ ಅಲ್ಲ, ಈ ಆಶ್ರಮದಲ್ಲಿರುವ ಎಲ್ಲಾ ಸೇವಕಿಯರು ಸಲಿಂಗ ಕಾಮಿಗಳಾಗಿದ್ದಾರೆ. ಎಲ್ಲಾ ಹಿರಿಯ ಸೇವಕಿಯರಿಗೆ ಕಿರಿಯ ಸೇವಕಿಯರು ನಿಷ್ಟೆಯನ್ನು ತೋರಿಸಬೇಕು ಮತ್ತು ಅವರು ಹೇಳಿದಂತೆ ಕೇಳಿ ಗೌರವ ಸೂಚಿಸಬೇಕು ಎಂದು ಇಲ್ಲಿ ನಿಯಮ ಇದೆ. ಆದರೆ ಅದನ್ನೇ ಬಳಸಿಕೊಳ್ಳುವ ಇಲ್ಲಿನ ಸೇವಕಿಯರು ಕಿರಿಯ ಸೇವಕಿಯರನ್ನು ತಮ್ಮ ಕಾಮ ತೃಷೆಗೆ ಬಳಸಿಕೊಳ್ಳುತ್ತಾರೆ. ನನಗೆ ಈ ಬ್ರಹ್ಮಕುಮಾರಿ ಆಶ್ರಮದ ವಸತಿ ಶಾಲೆಯಲ್ಲಿ ಇಂತಹುದ್ದೇ ದೈಹಿಕ ಮತ್ತು ಮಾನಸಿಕ ಚಿತ್ರಹಿಂಸೆಯನ್ನು ನೀಡಲಾಗಿದೆ ಎಂದು ಯುವತಿ ಅವಲತ್ತುಕೊಂಡಿದ್ದಾಳೆ.

ಬ್ರಹ್ಮ ಕುಮಾರಿ ಆಶ್ರಮದಲ್ಲಿರುವ ಪುರುಷ ವ್ಯವಸ್ಥಾಪಕರೊಂದಿಗೂ ನಾವು ಮಲಗಬೇಕು ಎಂದು ಇಲ್ಲಿನವರು ಒತ್ತಡ ಹೇರುತ್ತಾರೆ. ನನ್ನ ಮೇಲೆಯೂ ಕೂಡ ಪುರುಷ ವ್ಯವಸ್ಥಾಪಕರು ಸತತ ನಾಲ್ಕು ವರ್ಷಗಳ ಕಾಲ ಅತ್ಯಾಚಾರ ಮಾಡಿದ್ದಾರೆ.

ಇನ್ನು ಏನೇನು ನಡೀತಿದೆ ಬ್ರಹ್ಮಕುಮಾರಿ ಆಸ್ರಮದಲ್ಲಿ..?? ಇನ್ನಷ್ಟು ಇಂಟ್ರೆಸ್ಟಿಂಗ್ ಸುದ್ದಿ ಮುಂದಿನ ಪುಟದಲ್ಲಿ...

ಆಶ್ರಮಕ್ಕೆ ಆಗಾಗ ಅತಿಥಿಗಳು ಬರುತ್ತಿರುತ್ತಾರೆ. ಆ ಅತಿಥಿಗಳೊಂದಿಗೆ ಮಲಗಲು ಅಲ್ಲಿನ ಸೇವಕಿಯರನ್ನು ಕಳಿಸಲಾಗುತ್ತದೆ. ಒಂದು ರೀತಿಯಲ್ಲಿ ಬ್ರಹ್ಮಕುಮಾರಿ ಆಶ್ರಮವು "ತಲೆ ಹಿಡುಕರ ಕಾಮಾಟಿಪುರ’ವಾಗಿ ಮಾರ್ಪಟ್ಟಿದೆ ಎಂದು ಯುವತಿ ಆಶ್ರಮದ ರಹಸ್ಯ ಬಿಚ್ಚಿಟ್ಟಿದ್ದಾಳೆ.

ಇತ್ತೀಚೆಗೆ ಬ್ರಹ್ಮ ಕುಮಾರಿ ಆಶ್ರಮಕ್ಕೆ ಹೆಚ್ಚಿನ ಪ್ರಮಾಣದ ಅತಿಥಿಗಳು ಆಗಮಿಸುತ್ತಾರೆ. ಮತ್ತು ನಿತ್ಯವೂ ಆ ಅತಿಥಿಗಳೊಂದಿಗೆ ಮಲಗಿ ಕಾಮ ಸುಖ ನೀಡಲು ಅಲ್ಲಿನ ಸೇವಕಿಯರನ್ನು ಸಜ್ಜು ಗೊಳಿಸುತ್ತಾರೆ ಎಂದು ತಿಳಿದುಬಂದಿದೆ.

Share this Story:

Follow Webdunia kannada