Select Your Language

Notifications

webdunia
webdunia
webdunia
webdunia

ಬೇಹುಗಾರಿಕಾ ಉಪಗ್ರಹ ರಿಸಾಟ್-2 ಯಶಸ್ವೀ ಉಡಾವಣೆ

ಬೇಹುಗಾರಿಕಾ ಉಪಗ್ರಹ ರಿಸಾಟ್-2 ಯಶಸ್ವೀ ಉಡಾವಣೆ
ಶ್ರೀಹರಿಕೋಟಾ , ಸೋಮವಾರ, 20 ಏಪ್ರಿಲ್ 2009 (10:26 IST)
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಸೋಮವಾರ ಮುಂಜಾನೆ ಸರ್ವಋತು ಬೇಹುಗಾರಿಕಾ ಉಪಗ್ರಹ ರಿಸಾಟ್-2ವನ್ನು ಯಶಸ್ವಿಯಾಗಿ ಕಕ್ಷೆಗೆ ಉಡಾಯಿಸಿದೆ. ಈ ಉಪಗ್ರವು ರಾಷ್ಟ್ರದ ಗಡಿ ಪ್ರದೇಶಗಳ ಮೇಲೆ ಕಣ್ಣಿಡಲಿದೆ.

299 ಟನ್ ತೂಕದ ಧ್ರುವಗಾಮಿ ಉಪಗ್ರಹ ಉಡಾವಣಾ ವಾಹನ (ಪಿಎಸ್ಎಲ್‌ವಿ-ಸಿ12) ಈ ಉಪಗ್ರಹವನ್ನು ಕಕ್ಷೆಗೆ ಹೊತ್ತೊಯ್ದಿದೆ. ಇದರೊಂದಿಗೆ ಇನ್ನೊಂದು ಶೈಕ್ಷಣಿಕ ಉಪಗ್ರಹವನ್ನು ಹಾರಿಬಿಡಲಾಗಿದೆ.

"2009ರ ವರ್ಷವು ಉತ್ತಮವಾಗಿ ಆರಂಭಗೊಂಡಿದೆ. ಉಪಗ್ರಹ ಉಡಾವಣೆಯ ಕೊನೆಯ ಕ್ಷಣಗಳು ಕ್ರಿಕೆಟ್ ಪಂದ್ಯಕ್ಕಿಂತಲೂ ಹೆಚ್ಚು ರೋಮಾಂಚನ ಉಂಟುಮಾಡುತ್ತದೆ. ಇದು ನಾವು ಕೆಲವು ಬೌಂಡರಿಗಳನ್ನು ಬಾರಿಸಿದಂತೆ ಮತ್ತು ಕೆಲವು ಗೂಗ್ಲಿಗಳನ್ನು ಎಸೆದಂತೆ" ಎಂಬುದಾಗಿ ಇಸ್ರೋ ಮುಖ್ಯಸ್ಥ ಜಿ. ಮಾಧವನ್ ನಾಯರ್ ಹರ್ಷ ವ್ಯಕ್ತಪಡಿಸಿದ್ದಾರೆ.

"ನಾವು ಈ ಹಿಂದೆ ಘೋಷಿಸಿದಂತೆ ಅದೆ ದಿನಾಂಕ ಮತ್ತು ಸಮಯಕ್ಕೆ ಸರಿಯಾಗಿ ಉಪಗ್ರವನ್ನು ಉಡಾಯಿಸಿದ್ದು ನಾವು ಮತ್ತೊಂದು ದಾಖಲೆ ನಿರ್ಮಿಸಿದ್ದೇವೆ" ಎಂದು ಅವರು ಹೇಳಿದ್ದಾರೆ.

ಈ ಬೇಹುಗಾರಿಕಾ ಉಪಗ್ರಹ ರಿಸಾಟ್-2 ಇಪ್ಪತ್ತನಾಲ್ಕು ಗಂಟೆಯೂ ತನ್ನ ಗಡಿಪ್ರದೇಶಗಳ ಮೇಲೆ ಕಣ್ಣಿರಿಸಿ, ಅಕ್ರಮ ನುಸುಳುವಿಕೆ ವಿರೋಧಿ ಹಾಗೂ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಸರ್ಕಾರಕ್ಕೆ ಸಹಾಯ ಮಾಡಲಿದೆ.

300 ಕೆಜೆ ತೂಕದ ರಾಡಾರ್ ಛಾಯಾಚಿತ್ರ ತೆಗೆಯಬಲ್ಲಂತಹ ಈ ಉಪಗ್ರವನ್ನು ಇಸ್ರೇಲ್‌ನಲ್ಲಿ ನಿರ್ಮಿಸಲಾಗಿದೆ. ದೂರಸಂವೇದಿ ಛಾಯಾಚಿತ್ರ ಗ್ರಾಹಕ ಸಾಮರ್ಥ್ಯದ ಅತ್ಯಾಧುನಿಕ ಉಪಗ್ರಹವು, ಭೂಮಿಯಿಂದ 550 ಕಿಮೀ ಎತ್ತರದಲ್ಲಿ ಕಾರ್ಯಾಚರಿಸಲಿದ್ದು, ಎಲ್ಲಾ ಹವಾಮಾನಗಳನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ.

ಉಪಗ್ರಹವು ಹಗಲು ರಾತ್ರಿ ಹಾಗೂ ಎಲ್ಲಾ ಋತುಗಳಲ್ಲಿಯೂ ಮೋಡ, ಮಂಜು ಮುಸುಕಿದ್ದರೂ ಚಿತ್ರಗಳನ್ನು ತೆಗೆಯ ಬಲ್ಲಂತಹ ಸಿಂಥೆಟಿಕ್ ಅಪರ್ಚರ್ ರಾಡಾರ್(ಎಸ್ಎಆರ್) ಪೇಲೋಡ್ ಅನ್ನು ಉಪಗ್ರಹ ಹೊತ್ತೊಯ್ಜಿದೆ. ಇದನ್ನು ರಕ್ಷಣಾ ಕಾರ್ಯ ಮತ್ತು ವಿಚಕ್ಷಣ ಕಾರ್ಯಕ್ಕಾಗಿ ಬಳಸಲಾಗುತ್ತದೆ. ಇದು ನೈಸರ್ಗಿಕ ವಿಕೋಪಗಳು ಹಾಗೂ ಕೃಷಿ ಸಂಬಂಧಿ ಕಾರ್ಯಗಳಿಗೂ ಉಪಯುಕ್ತವಾಗಲಿದೆ.

ಇದರ ಜತೆಗೆ ಉಡಾಯಿಸಲಾಗಿರುವ ಇನ್ನೊಂದು ಶೈಕ್ಷಣಿಕ ಉಪಗ್ರಹನ್ನು ತಮಿಳುನಾಡಿನ ಅಣ್ಣಾ ವಿಶ್ವವಿದ್ಯಾಲಯ ಅಭಿವೃದ್ಧಿ ಪಡಿಸಿದೆ. ಇದರ ಜೀವಿತಾವಧಿ ಒಂದು ವರ್ಷ. 40 ಕೆ.ಜಿ ತೂಕದ ಈ ಉಪಗ್ರಹವು ಬರಪೀಡಿತ ಬಂಜರು ಭೂಮಿಯ ಕುರಿತು ಮಾಹಿತಿ ರವಾನಿಸಲಿದೆ.

Share this Story:

Follow Webdunia kannada