Select Your Language

Notifications

webdunia
webdunia
webdunia
webdunia

ಬಿಜೆಪಿ ನಾಯಕಿ ಮನೆಯಲ್ಲಿದೆ 1.54 ಕೋಟಿಯ ಡಿನ್ನರ್‌ ಸೆಟ್‌.

ಬಿಜೆಪಿ ನಾಯಕಿ ಮನೆಯಲ್ಲಿದೆ 1.54 ಕೋಟಿಯ ಡಿನ್ನರ್‌ ಸೆಟ್‌.
ಮಧ್ಯಪ್ರದೇಶ , ಗುರುವಾರ, 7 ನವೆಂಬರ್ 2013 (15:54 IST)
PTI
PTI
ಮಧ್ಯಪ್ರದೇಶದ ವಿಧಾನಸಭಾ ಚುನಾವಣೆ ಇನ್ನೇನು ಹತ್ತಿರ ಬರುತ್ತಿದ್ದಂತೆ ಒಂದೊಂದೇ ಗೋಲ್ ಮಾಲ್‌ ಹಣದ ವಿವರಗಳು ಹೊರಗೆ ಬರುತ್ತಿವೆ. ಪ್ರಸ್ತುತ ಬಿಜೆಪಿ ಪಕ್ಷದ ಸಂಸದೆಯಾಗಿರುವ ಯಶೋಧರಾ ರಾಜೇ ಸಿಂಧ್ಯಾ ಅವರ ಕೈಯಲ್ಲಿ ನಗದು ರೂಪಾಯಿ ಇರೋದು ಕೇವಲ 15,400 ರೂಪಾಯಿ ಮಾತ್ರ ಅಂತೆ.. ಆದ್ರೆ ಅವರ ಮನೆಯಲ್ಲಿರುವ ಡಿನ್ನರ್‌ ಟೇಬಲ್‌ ಸೆಟ್‌ನ ಬೆಲೆ ಮಾತ್ರ ಬರೋಬ್ಬರಿ 1.54 ಕೋಟಿ ರೂಪಾಯಿ..!

ಇದನ್ನ ಸ್ವತಃ ಯಶೋಧರಾ ರಾಜೇ ಅವರೇ ತಮ್ಮ ಅಫಿಡೆವಿಟ್‌ನಲ್ಲಿ ದೃಢೀಕರಿಸಿದ್ದಾರೆ. ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಗೆ ಶಿವಪುರಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಸಮಯದಲ್ಲಿ ತಮ್ಮ ಅಫಿಡೆವಿಟ್‌ನಲ್ಲಿ ತಮ್ಮ ಆಸ್ತಿ ವಿವರಗಳನ್ನು ನಮೂದಿಸಿದ್ದಾರೆ.

ಇದರ ಪ್ರಕಾರ ಅವರ ಮನೆಯಲ್ಲಿರೋದು ಒಟ್ಟು 1,54,19,938 ರೂಪಾಯಿ ಬೆಲೆ ಬಾಳುವ ಡಿನ್ನರ್‌ ಸೆಟ್‌.ಇನ್ನು ಇವರು ಧರಿಸಿರುವ ರಿಂಗ್‌ಗಳ ಬೆಲೆ ಒಟ್ಟು 6,66,704 ರೂಪಾಯಿಗಳು.... ಇನ್ನು ಏನೇನು ಇದೆ ಅಂತ ನೋಡಿ ಮುಂದಿನ ಪುಟದಲ್ಲಿ...

webdunia
PTI
PTI
೧. ಚುನಾವಣಾ ಅಫಿಡೆವಿಟ್‌ ಪ್ರಕಾರ ಯಶೋಧರಾ ರಾಜೆ ಅವರ ಮನೆಯಲ್ಲಿ ಇರುವುದು ಒಟ್ಟು 1,54,19,938 ರೂಪಾಯಿ ಬೆಲೆ ಬಾಳುವ ಡಿನ್ನರ್‌ ಸೆಟ್‌.

೨. ಇನ್ನು ಇವರು ಧರಿಸಿರುವ ರಿಂಗ್‌ಗಳ ಬೆಲೆ ಒಟ್ಟು 6,66,704 ರೂಪಾಯಿಗಳು..

೩.ಇವರ ಬಳಿ 1999 ಮಾಡೆಲ್‌ನ ಒಟ್ಟು ಎರಡು ಮಹೀಂದ್ರಾ ಜೀಪುಗಳಿದ್ದು, ಅವುಗಳ ಬೆಲೆ ಸುಮಾರು 25 ಸಾವಿರ ಎಂದು ಹೇಳಲಾಗುತ್ತಿದೆ.

೪. ಅಷ್ಟೇ ಅಲ್ಲ, ಸುಮಾರು 1,56,89,449 ರೂಪಾಯಿಗಳಷ್ಟು ಶೆರುಗಳನ್ನು ಈ ಬಿಜೆಪಿ ಸಂಸದೆ ಹೊಂದಿದ್ದಾರೆ. ಇನ್ನು ಲೈಫಿಗೆ 14 ಲಕ್ಷ ರೂಪಾಯಿಗಳ ಇನ್ಶೂರೆನ್ಸ್ ಮಾಡಿಕೊಂಡಿದ್ದಾರೆ.

೫. ಈ ಧನ ಲಕ್ಷ್ಮಿಒಯ ಬಳಿ ಒಂಭತ್ತು ಬ್ಯಾಂಕ್‌ ಅಕೌಂಟ್‌ಗಳಿದ್ದು ಒಟ್ಟು 13.60 ಲಕ್ಷ ರೂಪಾಯಿಗಳು ಬ್ಯಾಂಕಿನ ಖಜಾನೆಯಲ್ಲಿ ಇವೆ.

೬. ಇನ್ನು ರಾಜಸ್ಥಾನ ಮತ್ತು ಉತ್ತರಖಂಡದಲ್ಲಿ ಒಟ್ಟು 46.50 ಲಕ್ಷ ರೂಪಾಯಿಗಳ ಆಸ್ತಿ ಇದೆ. ಆದ್ರೆ ಈ ಆಸ್ತಿ ಸದ್ಯಕ್ಕೆ ವಿವಾದದಲ್ಲಿದೆ ಎಂದು ಹೇಳಲಾಗುತ್ತಿದೆ.

ಇಷ್ಟೆಲ್ಲಾ ಎಲ್ಲಿಂದ ಸಂಪಾದನೆ ಮಾಡಿದ್ರು? ಹೇಗೆ ಸಂಪಾದನೆ ಮಾಡಿದ್ರು ಅನ್ನೋದು ನಮಗಂತೂ ಗೊತ್ತಿಲ್ಲ. ಆದ್ರೆ ಕೋಟಿ ಕೋಟಿ ಹಣ ಮಾಡೋದು ಅಷ್ಟೋಂದು ಸುಲಭದ ಕೆಲಸ ಅಲ್ಲ ಅನ್ನೋದು ಮಾತ್ರ ಗೊತ್ತು..! ಹೌದಲ್ವಾ?

Share this Story:

Follow Webdunia kannada