Webdunia - Bharat's app for daily news and videos

Install App

ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊಮ್ಮುತ್ತೆ, ಮೋದಿ ಪ್ರಧಾನಿಯಾಗೋಲ್ಲ: ಪವಾರ್ ಭವಿಷ್ಯ

Webdunia
ಬುಧವಾರ, 2 ಏಪ್ರಿಲ್ 2014 (19:40 IST)
PR
PR
ಮುಂಬೈ: ಇತ್ತೀಚಿನವರೆಗೆ ಮೋದಿ ಅಲೆ ಇಲ್ಲವೆಂದು ಹೇಳುತ್ತಿದ್ದ ಶರದ್ ಪವಾರ್ ಸಾರ್ವತ್ರಿಕ ಚುನಾವಣೆ ಬಳಿಕ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಲೋಕಸತ್ತಾಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಪವಾರ್ ಅವರ ಎನ್‌ಸಿಪಿ ಕಾಂಗ್ರೆಸ್ ಮಿತ್ರಪಕ್ಷವಾಗಿದೆ. ಕಾಂಗ್ರೆಸ್ ಎರಡನೇ ಪಕ್ಷವಾಗಿ ಹೊಮ್ಮಿದರೆ, ಪ್ರಾದೇಶಿಕ ಅಧಿಕಾರ ಕೇಂದ್ರಗಳಾದ ಜೆ. ಜಯಲಲಿತಾ ಮತ್ತು ಮಮತಾಬ್ಯಾನರ್ಜಿ ಮೂರನೇ ಸ್ಥಾನದಲ್ಲಿರುತ್ತಾರೆ ಎಂದು ಪವಾರ್ ತಿಳಿಸಿದ್ದಾರೆ. ಆದರೆ ಮುಂದಿನ ಪ್ರಧಾನಮಂತ್ರಿ ಯಾರೆಂಬುದನ್ನು ಊಹಿಸಲೂ ಅವರು ನಿರಾಕರಿಸಿದರು.

ಮುಂದಿನ 10-15ವರ್ಷಗಳಲ್ಲಿ ಸಮ್ಮಿಶ್ರ ಸರ್ಕಾರಗಳು ಮುಂದುವರಿಯುತ್ತದೆ. ಪ್ರಾದೇಶಿಕ ಪಕ್ಷಗಳು ಮುಂದಿನ ವರ್ಷಗಳಲ್ಲಿ ಬಲಿಷ್ಠವಾಗುತ್ತವೆ. ಈಗ ಯಾವುದೇ ನಾಯಕನ ಬಗ್ಗೆ ಒಮ್ಮತ ಮೂಡಿಲ್ಲ. ಮೋದಿ ಪ್ರಧಾನಿಯಾಗುವುದಿಲ್ಲ. ಎನ್‌ಸಿಪಿ ಸಣ್ಣ ಪಕ್ಷವಾದ್ದರಿಂದ ತಾವು ರೇಸ್‌ನಲ್ಲಿಲ್ಲ ಎಂದು ಪವಾರ್ ಹೇಳಿದರು. ಪವಾರ್ ಅವರ ಅಂದಾಜು ಸಮೀಕ್ಷೆಗಳನ್ನು ಆಧರಿಸಿ ಮಾಡಿದ್ದರೂ ಕಾಂಗ್ರೆಸ್‌ ಪಕ್ಷಕ್ಕೆ ಮಾತ್ರ ಪಥ್ಯವಾಗಿಲ್ಲ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments