Select Your Language

Notifications

webdunia
webdunia
webdunia
webdunia

ಬಿಎಸ್‌‌ಪಿ ನಾಯಕನ ಪುತ್ರಿಗೆ ಸಹೋದರನಿಂದಲೇ ಲೈಂಗಿಕ ಕಿರುಕುಳ:

ಬಿಎಸ್‌‌ಪಿ ನಾಯಕನ ಪುತ್ರಿಗೆ ಸಹೋದರನಿಂದಲೇ ಲೈಂಗಿಕ ಕಿರುಕುಳ:
ಲಕ್ನೋ , ಸೋಮವಾರ, 28 ಅಕ್ಟೋಬರ್ 2013 (15:25 IST)
PTI
ಹಿರಿಯ ಸಹೋದರ ನನ್ನ ಮೇಲೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದರೂ ತಂದೆ ತಾಯಿ ಘಟನೆಯನ್ನು ಬಹಿರಂಗಪಡಿಸದಂತೆ ಒತ್ತಾಯಿಸುತ್ತಿದ್ದಾರೆ ಎಂದು ಲಕ್ನೋ ಮೂಲದ ಬಿಎಸ್‌ಪಿ ಪಕ್ಷದ ಮುಖಂಡನ ಪುತ್ರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

ಮಹಿಳಾ ಪೊಲೀಸ್ ಠಾಣೆಯಲ್ಲಿ ಯುವತಿಯ ತಂದೆ ತಾಯಿ ಮತ್ತು ಸಹೋದರನ ವಿರುದ್ಧ ಲೈಂಗಿಕ ಕಿರುಕುಳದ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಎಂಬಿಬಿಎಸ್ ಪ್ರಥಮ ವರ್ಷದ ವಿದ್ಯಾರ್ಥಿಯಾದ ಯುವತಿ ಇಂದಿರಾನಗರದಲ್ಲಿರುವ ತಂದೆ ತಾಯಿ ಮನೆಯನ್ನು ತೊರೆದು ತನ್ನ ಸಹೋದರನ ವಿರುದ್ಧ ಪ್ರಕರಣ ಲೈಂಗಿಕ ಕಿರುಕುಳದ ಪ್ರಕರಣ ದಾಖಲಿಸಿದ್ದಾಳೆ.

ಮಹಾನಗರ ಪ್ರದೇಶದಲ್ಲಿರುವ ಎನ್‌ಜಿಒ ಕೇಂದ್ರದಲ್ಲಿ ಯುವತಿ ವಾಸಿಸುತ್ತಿದ್ದಾಳೆ. ಆಕೆಯ ಕುಟುಂಬದ ಸದಸ್ಯರು ಮನೆಗೆ ಕರೆದುಕೊಂಡು ಹೋಗಲು ಬಂದಾಗ ಕೂಡಲೇ ಎಚ್ಚೆತ್ತುಕೊಂಡ ಎನ್‌ಜಿಒ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸಕಾಲಕ್ಕೆ ಆಗಮಿಸಿ ಯುವತಿಯನ್ನು ರಕ್ಷಿಸಿದ್ದಾರೆ.

ಸಹೋದರ ನಾನು ಆರನೇ ಕ್ಲಾಸ್‌ನಲ್ಲಿದ್ದಾಗಿನಿಂದ ನನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ. ಸಹೋದರನ ಅಸಭ್ಯ ವರ್ತನೆಯ ಬಗ್ಗೆ ತಂದೆ ತಾಯಿಗೆ ಮಾಹಿತಿ ನೀಡಿದ್ದೆ. ಆದರೆ, ಹೊರಗೆ ಯಾರ ಮುಂದೆಯೂ ಬಾಯಿಬಿಡದಂತೆ ಬೆದರಿಕೆಯೊಡ್ಡಿದ್ದರು ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

Share this Story:

Follow Webdunia kannada