Webdunia - Bharat's app for daily news and videos

Install App

ಬಾಬ್ರಿ ಧ್ವಂಸ ಜೀವನದ ಯಾತನಾಮಯ ದಿನ: ಆಡ್ವಾಣಿ

Webdunia
ಸೋಮವಾರ, 14 ಮಾರ್ಚ್ 2011 (11:48 IST)
1992 ರಲ್ಲಿ ಅಯೋಧ್ಯೆಯ ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಬಿಜೆಪಿಯ ವಿಶ್ವಾಸಾರ್ಹತೆಗೆ ಬಹುದೊಡ್ಡ ಹೊಡೆತ ನೀಡಿದೆ ಎಂದಿರುವ ಕೇಸರಿ ಪಕ್ಷದ ವರಿಷ್ಠ ಎಲ್.ಕೆ. ಆಡ್ವಾಣಿ, ಅದು ನನ್ನ ಜೀವನದ ಅತಿ ಯಾತನಾಮಯ ದಿನ ಎಂದು ಹೇಳಿದ್ದಾರೆ.

ಮಸೀದಿ ಧ್ವಂಸಗೊಂಡ ಆ ದಿನ ನನ್ನ ಜೀವನದಲ್ಲಿನ ಅತಿ ದುಖಃದಾಯಕ ದಿನ ಎಂದು ಅಯೋಧ್ಯೆ ಚಳವಳಿಯ ಆರಂಭಿಕ ಬೆಳವಣಿಗೆಯನ್ನು ವಿವರಿಸುತ್ತಾ ಆಡ್ವಾಣಿಯವರು ಆ ಘಟನೆಯ ಬಳಿಕ ನಿಯತಕಾಲಿಕಕ್ಕೆ ಬರೆದಿದ್ದ ಲೇಖನವೊಂದನ್ನು ನೆನಪಿಸಿಕೊಂಡಿದ್ದಾರೆ.

ಈ ಹೇಳಿಕೆಗೆ ತನ್ನ ಸಹಪಾಠಿಗಳಿಂದ ಬಂದ ಟೀಕೆಗಳನ್ನೂ ಆಡ್ವಾಣಿ ಉಲ್ಲೇಖಿಸಿದ್ದಾರೆ. 'ಆ ಬೆಳವಣಿಗೆ ಬಗ್ಗೆ ನೀವು ಈ ರೀತಿಯ ವಿಷಾದಕರವಾಗಿ ವರ್ತಿಸುತ್ತಿರುವುದು ಯಾಕೆ?' ಎಂದು ಕೆಲವರು ಪ್ರಶ್ನಿಸಿದ್ದಾರೆ ಎಂದು ತನ್ನ ಬ್ಲಾಗಿನಲ್ಲಿ ಬಿಜೆಪಿ ವರಿಷ್ಠ ಹೇಳಿಕೊಂಡಿದ್ದಾರೆ.

ಮಸೀದಿ ಧ್ವಂಸಗೊಂಡ ದಿನ ನಾನು ಅತೀವ ನೋವುಂಡ ದಿನ ಎಂಬ ಹೇಳಿಕೆ ಕುರಿತ ಟೀಕೆಗಳಿಗೆ ನೀಡಿರುವ ಉತ್ತರವನ್ನೂ ಆಡ್ವಾಣಿ ಬ್ಲಾಗಿನಲ್ಲಿ ಬರೆದಿದ್ದಾರೆ. 'ನಾನು ತಪ್ಪಿತಸ್ಥ ಭಾವನೆ ಹೊಂದಿಲ್ಲ. ವಾಸ್ತವದಲ್ಲಿ, ಅಯೋಧ್ಯಾ ಚಳವಳಿಯಲ್ಲಿ ನನ್ನ ಪಾಲುದಾರಿಕೆಯ ಬಗ್ಗೆ ನನಗೆ ಹೆಮ್ಮೆಯಿದೆ. ಆದರೆ ಡಿಸೆಂಬರ್ 6ರಂದು ನಡೆದ ಘಟನೆಯಿಂದ ನಮ್ಮ ಪಕ್ಷದ ವಿಶ್ವಾಸಾರ್ಹತೆಗೆ ಭಾರೀ ಧಕ್ಕೆಯಾಗಿರುವುದು ನನಗೆ ತೀವ್ರ ನೋವು ತಂದಿದೆ, ಬೇಸರವಾಗಿದೆ' ಎಂದು ಹೇಳಿದ್ದೆ ಎಂದು ಉಲ್ಲೇಖಿಸಿದ್ದಾರೆ.

ಅಯೋಧ್ಯಾ ಚಳವಳಿಯಲ್ಲಿ ಒಳಗೊಂಡಿದ್ದ ಸಂಘಟನೆಗಳು, ತಮ್ಮ ಹಿಂಬಾಲಕರ ಅಸಹನೆಯನ್ನು ಅರ್ಥ ಮಾಡಿಕೊಳ್ಳಲು ವಿಫಲವಾಗಿದ್ದವು ಎಂದೂ ಆಡ್ವಾಣಿ ತನ್ನ ದಶಕಗಳ ಹಿಂದಿನ ಲೇಖನದಲ್ಲಿ ಬರೆದಿದ್ದರು.

ಕಾನೂನುಗಳನ್ನು ಉಲ್ಲಂಘಿಸದೆ ಅಥವಾ ನ್ಯಾಯಾಲಯದ ಆದೇಶಗಳನ್ನು ಧಿಕ್ಕರಿಸದೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಬೇಕು ಎಂಬ ಜನತೆಯ ಆಶಯವನ್ನು ಈಡೇರಿಸಲು ಉತ್ತರ ಪ್ರದೇಶ ಸರಕಾರವು ನಿಖರ ಯೋಜನೆಗಳನ್ನು ರೂಪಿಸಿ ಮುನ್ನಡೆಯುತ್ತಿದ್ದ ಹೊತ್ತಿನಲ್ಲಿ ಮಸೀದಿ ಧ್ವಂಸಗೊಂಡದ್ದು ನಮ್ಮೆಲ್ಲ ಪ್ರಯತ್ನಗಳನ್ನು ವಿಫಲಗೊಳಿಸಿತು. ಇದು ನನಗೆ ತೀವ್ರ ನೋವನ್ನು ತಂದಿತು.

ಅಂದು ನಡೆದ ಅನಿರೀಕ್ಷಿತ ಘಟನೆಯನ್ನು ಅವಲೋಕನ ನಡೆಸಿದಾಗ, ಚಳವಳಿಯಲ್ಲಿ ಪಾಲ್ಗೊಂಡ ಜನತೆಯ ಅಸಹನೆಯನ್ನು ಊಹಿಸಲು ಸಂಘಟನೆಗಳು ವಿಫಲವಾಗಿದ್ದವು ಎಂದು ಹೇಳಬಹುದು. ಆದರೆ ಆ ದಿನ ನಡೆದ ಘಟನೆಗಳಿಗೆ ಖಂಡಿತಾ ಅವರು ಕಾರಣರಲ್ಲ ಎಂದು ಹಳೆಯ ಲೇಖನದ ಅಂಶಗಳನ್ನು ಆಡ್ವಾಣಿ ಮೆಲುಕು ಹಾಕಿದ್ದಾರೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪೊಲೀಸರಿಬ್ಬರ ನಕಲಿ ಎನ್‌ಕೌಂಟರ್‌: ಪಂಜಾಬ್‌ನ ನಿವೃತ್ತ ಪೊಲೀಸ್ ಅಧಿಕಾರಿಗೆ 10ವರ್ಷ ಕಠಿಣ ಜೈಲು ವಾಸ

ಕರಾವಳಿ ಭಾಗದಲ್ಲಿ ಭಾರೀ ಮಳೆಯ ಮುನ್ಸೂಚನೆ: ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

130 ಗಂಟೆ ನಿರಂತರ ಭರತನಾಟ್ಯ, 3ಗಂಟೆಗೊಮ್ಮೆ 15 ನಿಮಿಷ ಬ್ರೇಕ್‌, ವಿಶ್ವದಾಖಲೆಯತ್ತ ಮಂಗಳೂರಿನ ಯುವತಿ

ಗೋವಾ ಸಿಎಂ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ಡಿಸಿಎಂ ಡಿಕೆ ಶಿವಕುಮಾರ್‌

ಯಾವಾ ಸಾಧನೆಗೆ ಸಾಧನಾ ಸಮಾವೇಶ ಎಂದು ಕಾಂಗ್ರೆಸ್ಸಿಗರೇ ಉತ್ತರಿಸಬೇಕು: ನಿಖಿಲ್ ಕುಮಾರಸ್ವಾಮಿ

Show comments