Webdunia - Bharat's app for daily news and videos

Install App

ಬಾಬ್ರಿಮಸೀದಿ ಧ್ವಂಸ ಪ್ರಕರಣದ ಹಿಂದೆ ಇತ್ತು ಆರ್‌ಎಸ್ಎಸ್ ವ್ಯವಸ್ಥಿತ ಕೈವಾಡ !

Webdunia
ಶುಕ್ರವಾರ, 4 ಏಪ್ರಿಲ್ 2014 (12:24 IST)
ರಾಮಜನ್ಮಭೂಮಿ ಚಳುವಳಿಯ ಸಂದರ್ಭದಲ್ಲಿ 1992 ಡಿಸೆಂಬರ್ 6 ರಂದು ನಡೆದ ಬಾಬ್ರಿಮಸೀದಿ ಧ್ವಂಸ ಪ್ರಕರಣ ಉದ್ರಿಕ್ತ ಗುಂಪಿನಿಂದ ಆಕಷ್ಮಾತ ಆದ ಘಟನೆಯಲ್ಲ. ಇದರ ಹಿಂದೆ ವ್ಯವಸ್ಥಿತ ಯೋಜನೆ ಇತ್ತು ಎಂದು ಒಂದು ಸ್ಟಿಂಗ್ ಆಪರೇಷನ್ ಒಂದರಲ್ಲಿ ತಿಳಿದು ಬಂದಿದೆ.
PTI

ಕೋಬ್ರಾ ಪೋಸ್ಟ್ ತಾನು ನಡೆಸಿದ ಒಂದು " ಕುಟುಕು ಕಾರ್ಯಾಚರಣೆ"ಯ ಸಿಡಿಯನ್ನು ಬಿಡುಗಡೆ ಮಾಡಿದೆ. ರಾಮ ಜನ್ಮಭೂಮಿ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಾಕ್ಷಿ ಮಹಾರಾಜ್, ಆಚಾರ್ಯ ಧರ್ಮೇಂದ್ರ, ಮಹಾಂತ ವೇದಾಂತಿ, ಉಮಾ ಭಾರತಿ ಮತ್ತು ವಿನಯ್ ಕಟಿಯಾರ್ ಅವರ ಹೇಳಿಕೆಯನ್ನೊಳಗೊಂಡ ವರದಿಯ ಪ್ರಕಾರ ರಾಮ ಜನ್ಮಭೂಮಿ ಚಳುವಳಿಯ ನೇತೃತ್ವ ವಹಿಸಿದ್ದ ಎಲ್.ಕೆ. ಅಡ್ವಾಣಿ, ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಮತ್ತು ಉತ್ತರ ಪ್ರದೇಶದ ಆಗಿನ ಮುಖ್ಯಮಂತ್ರಿ ಕಲ್ಯಾಣ ಸಿಂಗ್‌ಗೆ ಕೂಡ ಈ ಯೋಜನೆಯ ಅರಿವಿತ್ತು.

ಕೋಬ್ರಾ ಪೋಸ್ಟ್ ಆಪರೇಶನ್ ರಾಮಜನ್ಮಭೂಮಿ ಎಂಬ ಹೆಸರಿಟ್ಟು ರಹಸ್ಯ ಕಾರ್ಯಾಚರಣೆಯನ್ನು ಕೈಗೊಂಡಿತ್ತು. ಇದರ ಪ್ರಕಾರ ಕರಸೇವಕರು ಉದ್ರಿಕ್ತಗೊಂಡು ಮಸೀದಿಯನ್ನು ಕೆಡವಿದರು ಎಂಬುದು ಸುಳ್ಳು. ಇದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವ್ಯವಸ್ಥಿತ ಸಂಚಾಗಿದೆ.

ಕೋಬ್ರಾ ಪೋಸ್ಟ್ ನಡೆಸಿದ ಕಾರ್ಯಾಚರಣೆಯ ಮುಖ್ಯಾಂಶಗಳು ಹೀಗಿವೆ:

* 1990 ರಲ್ಲೇ ಮಸೀದಿ ನಾಶ ಮಾಡಲು ಆರ್‌ಎಸ್ಎಸ್ ಯೋಜನೆ ರೂಪಿಸಲಾಗಿತ್ತು. ಆದರೆ ಕಾರ್ಯಗತಗೊಳಿಸುವಲ್ಲಿ ಅದು ವಿಫಲವಾಗಿತ್ತು.

*ಮಸೀದಿಯನ್ನು ನಾಶಗೊಳಿಸುವುದು ಹೇಗೆ ಎಂದು ಸ್ವಯಂಸೇವಕರಿಗೆ ಗುಜರಾತನಲ್ಲಿ ತರಬೇತಿ ಕೊಡಲಾಗಿತ್ತು. ಆದರೆ ಘಟನೆ ನಡೆಸಿದ ಒಂದು ತಿಂಗಳ ಮೊದಲಷ್ಟೇ ಅವರಿಗೆ ಯಾಕೆ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಲಾಗಿತ್ತು.

*ತರಬೇತಿ ನೀಡಲು ನಿವೃತ್ತಿ ಮಿಲಿಟರಿ ಅಧಿಕಾರಿಗಳನ್ನು ಬಳಸಲಾಗಿತ್ತು.

* ಮಸೀದಿ ನಾಶಕ್ಕೆ ನಿಯೋಜನೆಗೊಂಡ ಸ್ವಯಂಸೇವಕರನ್ನು 2,3 ತಂಡಗಳಾಗಿ ವಿಭಾಗಿಸಲಾಗಿತ್ತು.

* ಜೂನ್ 1992 ರಲ್ಲಿ, ಭಜರಂಗದಳದ 38 ಸದಸ್ಯರ ತುಕಡಿಗೆ ಒಂದು ತಿಂಗಳ ವಿಶೇಷ ತರಬೇತಿ ನೀಡಲಾಗಿತ್ತು. ಮಾಜಿ ಸೈನಿಕರು ತರಬೇತಿಯ ನೇತೃತ್ವ ವಹಿಸಿಕೊಂಡಿದ್ದರು.

*ಡೈನಮೇಟ್ ಅಥವಾ ಪೆಟ್ರೊಲ್ ಬಾಂಬ್ ಬಳಸಿ ಮಸೀದಿಯನ್ನು ಉಡಾಯಿಸಬೇಕು ಎಂದು ಯೋಜಿಸಲಾಗಿತ್ತು.

* ಮಸೀದಿ ಧ್ವಂಸದ ಹಿಂದಿನ ದಿನ ರಾತ್ರಿ ಅಯೋಧ್ಯೆಯಲ್ಲಿ ಯೋಜನೆಯನ್ನು ಕಾರ್ಯಗತಗೊಳಿಸುವುದರ ಕುರಿತು ರಹಸ್ಯ ಸಭೆಯನ್ನು ನಡೆಸಲಾಗಿತ್ತು. ಉಮಾಭಾರತಿ, ವಿನಯ್ ಕಟಿಯಾರ ಅದರಲ್ಲಿ ಪೊಲ್ಗೊಂಡಿದ್ದರು.

ಈ ಕುಟುಕು ಕಾರ್ಯಾಚರಣೆಯನ್ನು ಕಾರ್ಯರೂಪಕ್ಕೆ ತರಲು ತೀರ್ಮಾನಕ್ಕೆ ಸ್ಟಿಂಗ್ 'ಕೋಬ್ರಾ ಪೋಸ್ಟ್‌ನ ಸಹಾಯಕ ಸಂಪಾದಕ ಆಶಿಶ್ ಅಯೋಧ್ಯಾ, ಫೈಜಾಬಾದ್, ಟಾಂಡಾ, ಲಕ್ನೋ, ಗೋರಕ್ಪುರ, ಮಥುರಾ, ಮುರಾದಾಬಾದ್, ಮುಂಬೈ ಮತ್ತು ಗ್ವಾಲಿಯರ್‌ಗಳಲ್ಲಿ ಆಂದೋಲನದಲ್ಲಿ ಗುರುತಿಸಿಕೊಂಡಿದ್ದ 23 ಜನರನ್ನು ಸಂದರ್ಶನ ಮಾಡಿದ್ದಾರೆ.
PTI

ಕಾರ್ಯಾಚರಣೆಯ ವರದಿ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಇದನ್ನು ಕಾಂಗ್ರೆಸ್ಸಿನ ಕುತಂತ್ರ ಎಂದು ಹೇಳಿದ್ದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗವನ್ನು ಕೇಳಿಕೊಂಡಿದೆ.

ಈ ಪ್ರಚಾರವನ್ನು ತತ್‍ಕ್ಷಣ ನಿಲ್ಲಿಸದಿದ್ದರೆ ಕೋಮು ಗಲಭೆಯಾಗುವ ಸಂಭವವಿದೆ ಎಂದು ಬಿಜೆಪಿ ಆಯೋಗಕ್ಕೆ ಮನವಿ ಮಾಡಿಕೊಂಡಿದೆ.

ವೆಬ್ದುನಿಯಾವನ್ನು ಓದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments