Select Your Language

Notifications

webdunia
webdunia
webdunia
webdunia

ಫೇಸ್‌ಬುಕ್‌ನಲ್ಲಿ ಅಶ್ಲೀಲ ಪೋಸ್ಟಿಂಗ್: ಮಹಿಳೆ ಆತ್ಮಹತ್ಯೆಗೆ ಶರಣು

ಫೇಸ್‌ಬುಕ್‌ನಲ್ಲಿ ಅಶ್ಲೀಲ ಪೋಸ್ಟಿಂಗ್: ಮಹಿಳೆ ಆತ್ಮಹತ್ಯೆಗೆ ಶರಣು
, ಮಂಗಳವಾರ, 28 ಜನವರಿ 2014 (17:42 IST)
PR
PR
ಕೊಚ್ಚಿ: ಕೇರಳದ 27 ವರ್ಷ ವಯಸ್ಸಿನ ವಿವಾಹಿತ ಮಹಿಳೆಯ ನೆರೆಮನೆಯವ ಅವಳ ಬಗ್ಗೆ ಫೇಸ್‌ಬುಕ್‌ನಲ್ಲಿ ಅಶ್ಲೀಲ ವಿಷಯಗಳನ್ನು ಪೋಸ್ಟ್ ಮಾಡಿದ್ದಕ್ಕಾಗಿ ಮನನೊಂದ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸೋಮವಾರ ಸಂಜೆ ತನ್ನ ನಿವಾಸದಲ್ಲಿ ಅವಳು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದು ಕಂಡುಬಂತು. ನೆರೆಮನೆಯಾತ ಮಹಿಳೆಗೆ ಅಶ್ಲೀಲ ಟೆಕ್ಸ್ಟ್ ಸಂದೇಶಗಳನ್ನು ಕಳಿಸಿ ಫೇಸ್ ಬುಕ್ ಪೋಸ್ಟಿಂಗ್ ಮೂಲಕ ಅವಳ ಮಾನಹಾನಿ ಮಾಡಿದ್ದಾನೆಂದು ಮಹಿಳೆಯ ಕುಟುಂಬ ಡಿ.23ರಂದು ಪೊಲೀಸರಿಗೆ ದೂರು ನೀಡಿ ಕೇಸು ದಾಖಲಿಸುವಂತೆ ತಿಳಿಸಿತ್ತು.

ಕೆಲವು ದಿನಗಳ ನಂತರ ಪೊಲೀಸರು ಯಾವುದೇ ಕೇಸು ದಾಖಲಿಸದೇ ನೆರವು ನೀಡದಿದ್ದರಿಂದ ಕೇರಳ ಹೈಕೋರ್ಟ್‌ಗೆ ಮಧ್ಯಪ್ರವೇಶಿಸುವಂತೆ ಮಹಿಳೆ ಮನವಿ ಮಾಡಿದ್ದರು. ಕೋರ್ಟ್ ತನಿಖೆ ಮಾಡಿ ವರದಿ ಸಲ್ಲಿಸುವಂತೆ ಪೊಲೀಸರಿಗೆ ತಿಳಿಸಿತ್ತು.

Share this Story:

Follow Webdunia kannada