Webdunia - Bharat's app for daily news and videos

Install App

ಪ್ರಿಯಕರನೊಂದಿಗೆ ಸಲ್ಲಾಪದಲ್ಲಿ ತೊಡಗಿದ್ದ ಪತ್ನಿಯನ್ನು ರೆಡ್‌ ಹ್ಯಾಂಡ್ ಹಿಡಿದ ಪತಿ ಏನು ಮಾಡಿದ ಗೊತ್ತೆ?

Webdunia
ಮಂಗಳವಾರ, 1 ಏಪ್ರಿಲ್ 2014 (12:30 IST)
ಪ್ರಿಯಕರನೊಂದಿಗೆ ಸರಸ ಸಲ್ಲಾಪದಲ್ಲಿ ತೊಡಗಿದ್ದ ಪತ್ನಿಯನ್ನು ಪೊಲೀಸರ ವೆರವಿನಿಂದ ರೆಡ್‌ಹ್ಯಾಂಡ್‌ ಹಿಡಿದ ಪತಿ, ಆಕೆಯನ್ನು ಚೂಪಾದ ಮೊಳೆಗಳ ಮೇಲೆ ಮಂಡಿಯೂರಿ ಕುಳಿತುಕೊಳ್ಳುವಂತಹ ಶಿಕ್ಷೆ ನೀಡಿದ ವಿಚಿತ್ರ ಘಟನೆ ವರದಿಯಾಗಿದೆ.

ಪತಿ ಮಹಾಶಯ ಪೊಲೀಸ್ ಠಾಣೆಗೆ ತೆರಳಿ ನನ್ನ ಪತ್ನಿ ನನ್ನ ಬದಕನ್ನು ನರಕವಾಗಿಸಿದ್ದಾಳೆ. ಆಕೆಯ ಪ್ರಿಯತಮನೊಂದಿಗೆ ನನ್ನ ಮನೆಯಲ್ಲಿಯೇ ಸೆಕ್ಸ್ ಸುಖ ಅನುಭವಿಸುತ್ತಿದ್ದಾಳೆ. ಮಕ್ಕಳ ಎದುರಿಗೆ ಇಬ್ಬರು ಅಸಹ್ಯ ಕೃತ್ಯಗಳಲ್ಲಿ ತೊಡಗುತ್ತಾರೆ ಎಂದು ದೂರು ನೀಡಿದ್ದಾನೆ.

ಪತಿ ಮತ್ತು ಪತ್ನಿಯ ಮಧ್ಯೆ ಭಿನ್ನಾಭಿಪ್ರಾಯಗಳಿರುವಂತಹ ಪ್ರಕರಣಗಳು ಪೊಲೀಸರಿಗೆ ಹೊಸತಲ್ಲ. ಆದರೆ, ಪ್ರಿಯತಮನೊಂದಿಗೆ ಮನೆಯಲ್ಲಿಯೇ ಸರಸ ಸಲ್ಲಾಪದಲ್ಲಿ ತೊಡುಗುತ್ತಾರೆ ಎನ್ನುವ ಪತಿಯ ಹೇಳಿಕೆಯಿಂದ ಪೊಲೀಸರು ಆತನ ಮನೆಯ ಮೇಲೆ ರೈಡ್ ಮಾಡಿದ್ದಾರೆ.

ಪೊಲೀಸರು ಮನೆಯ ಮೇಲೆ ರೈಡ್ ಮಾಡಿದಾಗ ದೂರು ನೀಡಿದಾತನ ಪತ್ನಿ ಮತ್ತು ಆಕೆಯ ಪ್ರಿಯಕರ ಸುರೇಶ್ ಸೀತಾರಾಮ್ ಜಗಪತ್‌ ಅರೆನಗ್ನರಾಗಿ ಸಲ್ಲಾಪದಲ್ಲಿ ತೊಡಗಿರುವುದು ಕಂಡುಬರುತ್ತದೆ. ಹಲವು ವರ್ಷಗಳಿಂದ ಅನೈತಿಕ ಸಂಬಂಧವಿರುವುದರಿಂದ ಪತಿಯನ್ನು ಕಂಡು ಪತ್ನಿ ಹೆದರಲಿಲ್ಲ.ಆದರೆ, ಪತಿಯ ಜೊತೆ ಪೊಲೀಸರಿರುವುದು ಕಂಡು ಆಘಾತಕ್ಕೊಳಗಾಗುತ್ತಾರೆ.

ಪೊಲೀಸರು ಇಬ್ಬರನ್ನು ಠಾಣೆಗೆ ಕರೆದುಕೊಂಡು ಹೋಗಿ ಪತಿಯ ಕ್ಷಮೆಯಾಚಿಸುವಂತೆ ಪತ್ನಿಯನ್ನು ಒತ್ತಾಯಿಸಿದ್ದಲ್ಲದೇ ಆಕೆಯನ್ನು ಚೂಪಾದ ಕಲ್ಲುಗಳ ಮೇಲೆ ಮಂಡಿಯೂರಿ ಕುಳಿತುಕೊಳ್ಳುವಂತೆ ಆದೇಶಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ಮಹಿಳೆಯ ಪ್ರಿಯಕರ ಸುರೇಶ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments