Select Your Language

Notifications

webdunia
webdunia
webdunia
webdunia

ಪ್ರಧಾನಿಯನ್ನೂ ಸಿಬಿಐ ತನಿಖೆಗೊಳಪಡಿಸಿ: ಅರುಣ್ ಜೇಟ್ಲಿ

ಪ್ರಧಾನಿಯನ್ನೂ ಸಿಬಿಐ ತನಿಖೆಗೊಳಪಡಿಸಿ: ಅರುಣ್ ಜೇಟ್ಲಿ
ನವದೆಹಲಿ , ಶುಕ್ರವಾರ, 18 ಅಕ್ಟೋಬರ್ 2013 (15:04 IST)
PTI
2ಜಿ ಹಗರಣ ಮತ್ತು ಕಲ್ಲಿದ್ದಲು ಹಂಚಿಕೆ ಹಗರಣದಲ್ಲಿ ಪ್ರಧಾನಿಯವರ ನಿರ್ಧಾರ ಅಂತಿಮವಾಗಿದ್ದರಿಂದ ಅವರನ್ನೂ ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ರಾಜ್ಯಸಭೆಯ ವಿರೋಧಪಕ್ಷದ ಅರುಣ್ ಜೇಟ್ಲಿ ಹೇಳಿದ್ದಾರೆ.

ಉದ್ಯಮಿ ಕುಮಾರ ಮಂಗಲಂ ಬಿರ್ಲಾ, ಮಾಜಿ ಕಲ್ಲಿದ್ದಲು ಇಲಾಖೆ ಕಾರ್ಯದರ್ಶಿ ಪಿ.ಸಿ.ಪಾರೇಖ್ ಸೇರಿದಂತೆ ಹಿರಿಯ ಅಧಿಕಾರಿಗಳ ವಿರುದ್ಧ ಸಿಬಿಐ ಪ್ರಕರಣ ದಾಖಲಿಸುತ್ತಿದೆ. ಆದರೆ, ಕಲ್ಲಿದ್ದಲು ಖಾತೆಯನ್ನು ಹೊಂದಿದ್ದ ಪ್ರಧಾನಿಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

2ಜಿ ಹಗರಣ, ಕಲ್ಲಿದ್ದಲು ಹಗರಣದಂತಹ ಅನೇಕ ಹಗರಣಗಳು ಯುಪಿಎ ಸರಕಾರದ ಮಾನ ಮರ್ಯಾದೆಯನ್ನು ಹರಾಜು ಹಾಕಿವೆ. ಕೇಂದ್ರ ಸರಕಾರದ ಬಗ್ಗೆ ದೇಶದ ಜನತೆಗೆ ಅಸಹ್ಯ ಮೂಡಿಸಿದೆ ಎಂದು ಗುಡುಗಿದರು.

ಕಲ್ಲಿದ್ದಲು ಹಂಚಿಕೆ ಹಗರಣದಿಂದಾಗಿ ದೇಶಿಯ ಮತ್ತು ಅಂತಾರಾಷ್ಟ್ರೀಯ ಹೂಡಿಕೆದಾರರಿಗೆ ಆತಂಕದ ಸನ್ನಿವೇಶ ಸೃಷ್ಟಿಸಿದೆ. ಆರ್ಥಿಕತೆ ಕುಸಿತದತ್ತ ಸಾಗಿರುವ ದೇಶಕ್ಕೆ ಮತ್ತಷ್ಟು ಆತಂಕ ಮೂಡಿಸಿದೆ ಎಂದು ನ್ಯೂಯಾರ್ಕ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

Share this Story:

Follow Webdunia kannada