Select Your Language

Notifications

webdunia
webdunia
webdunia
webdunia

ಪ್ರತಿನಿತ್ಯ ಕುಡಿದು ಬಂದು ಅಸಭ್ಯವಾಗಿ ವರ್ತಿಸುತ್ತಿದ್ದ ಪುತ್ರಿಯನ್ನೇ ಹತ್ಯೆ ಮಾಡಿದ ತಾಯಿ

ಪ್ರತಿನಿತ್ಯ ಕುಡಿದು ಬಂದು ಅಸಭ್ಯವಾಗಿ ವರ್ತಿಸುತ್ತಿದ್ದ ಪುತ್ರಿಯನ್ನೇ ಹತ್ಯೆ ಮಾಡಿದ ತಾಯಿ
ಫರಿದಾಬಾದ್ , ಮಂಗಳವಾರ, 1 ಏಪ್ರಿಲ್ 2014 (11:22 IST)
ಪ್ರತಿನಿತ್ಯ ಕುಡಿದು ಬಂದು ಅಸಹ್ಯವಾಗಿ ನಡೆದುಕೊಳ್ಳುತ್ತಿದ್ದ ಪುತ್ರಿ ಕಿರಣ್‌ಳ ವರ್ತನೆಯಿಂದ ಬೇಸತ್ತ ತಾಯಿಯೊಬ್ಬಳು ಇಬ್ಬರು ಯುವಕರ ನೆರವಿನಿಂದ ಸ್ವಂತ ಪುತ್ರಿಯನ್ನೇ ಹತ್ಯೆ ಮಾಡಿದ ದಾರುಣ ಘಟನೆ ವರದಿಯಾಗಿದೆ.


ಪುತ್ರಿ ಪ್ರತಿನಿತ್ಯ ನೈಟ್‌‌ಕ್ಲಬ್‌ಗಳಿಗೆ ತೆರಳಿ ತಡರಾತ್ರಿ ಕಂಠಪೂರ್ತಿ ಕುಡಿದು ಬಂದು ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದಳು. ಕೆಟ್ಟ ಹವ್ಯಾಸ ಹೊಂದಿರುವ ಗೆಳತಿಯರೊಂದಿಗೆ ರಾತ್ರಿಪೂರ್ತಿ ಹೊರಗಡೆ ತಿರುಗುತ್ತಿರುವುದರಿಂದ ಕುಟುಂಬದ ಮಾನ ಮರ್ಯಾದೆಗೆ ಕುಂದುಬರುತ್ತಿದೆ ಎಂದು ಭಾವಿಸಿ ಪುತ್ರಿಯನ್ನು ತಾಯಿಯೊಬ್ಬಳು ಹತ್ಯೆ ಮಾಡಿದ್ದಾಳೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದು, ಇತರ ಇಬ್ಬರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Share this Story:

Follow Webdunia kannada