Select Your Language

Notifications

webdunia
webdunia
webdunia
webdunia

ಪುತ್ರಿಯ ಮೇಲೆ 3 ವರ್ಷಗಳವರೆಗೆ ಅತ್ಯಾಚಾರ ಎಸಗಿದ ಕಾಮುಕ ತಂದೆ, ತಾತ

ಪುತ್ರಿಯ ಮೇಲೆ 3 ವರ್ಷಗಳವರೆಗೆ ಅತ್ಯಾಚಾರ ಎಸಗಿದ ಕಾಮುಕ ತಂದೆ, ತಾತ
ಪುಣೆ , ಬುಧವಾರ, 2 ಏಪ್ರಿಲ್ 2014 (15:01 IST)
ಪುಣೆ ಮೂಲದ ಉದ್ಯಮಿಯೊಬ್ಬ ತನ್ನ ಪುತ್ರಿಯ ಮೇಲೆ ಸತತ ಮೂರು ವರ್ಷಗಳ ಕಾಲ ಅತ್ಯಾಚಾರವೆಸಗಿದ ಆರೋಪದ ಮೇಲೆ ಬಂಧಿಸಲಾಗಿದೆ.

ತಂದೆ ಅತ್ಯಾಚಾರವೆಸಗಿದ ಘಟನೆಯನ್ನು ಅಜ್ಜನಿಗೆ ಹೇಳಿದಾಗ ಅಜ್ಜ ಕೂಡಾ ಮೊಮ್ಮಗಳ ಮೇಲೆ ಅತ್ಯಾಚಾರವೆಸಗಿದ ಹೀನಾಯ ಘಟನೆ ವರದಿಯಾಗಿದೆ.

ಪುಣೆ ಅಪರಾಧ ವಿಭಾಗದ ತನಿಖಾಧಿಕಾರಿ ರಾಜೇಂದ್ರ ಮಲಿಕ್ ಪ್ರಕಾರ,ಆರೋಪಿ ಪುಣೆ ಮೂಲದ ಕಂಪೆನಿಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾನೆ. ಬಿಜಿನೆಸ್ ಟ್ರಿಪ್‌ ನೆಪದಲ್ಲಿ ಇತರ ನಗರಗಳಿಗೆ ಕರೆದುಕೊಂಡು ಹೋಗಿ ಪುತ್ರಿಯ ಮೇಲೆ ನಿರಂತರವಾಗಿ ಮೂರು ವರ್ಷಗಳವರೆಗೂ ಅತ್ಯಾಚಾರ ಮಾಡಿದ್ದಲ್ಲದೇ ತನ್ನ ಸಹದ್ಯೋಗಿಗಳೊಂದಿಗೆ ಮತ್ತು ಅಪರಿಚಿತರಿಗೂ ಲೈಂಗಿಕ ಸುಖ ನೀಡುವಂತೆ ಒತ್ತಡ ಹೇರಿದ್ದ. ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾದ ಪುತ್ರಿ, ಕಳೆದ ಮೂರು ತಿಂಗಳ ಹಿಂದೆ ತಂದೆಯ ಲೈಂಗಿಕ ಕಿರುಕುಳ ಸಹಿಸದೇ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಳು. ತಂದೆಯ ಹೀನಾಯ ಕೃತ್ಯವನ್ನು ತಾತನಿಗೆ ಹೇಳಿದಾಗ ತಾತನೂ ಕೂಡಾ ದೈಹಿಕ ಹಲ್ಲೆ ಮಾಡಿದ್ದಲ್ಲದೇ ಅತ್ಯಾಚಾರ ಎಸಗಿದ್ದನು ಎಂದು ಬಾಲಕಿ ವಿವರಣೆ ನೀಡಿದ್ದಾಳೆ.

ಆರೋಪಿ ಉದ್ಯಮಿ ತನ್ನ ಪತ್ನಿಯಿಂದ ಮೂರು ವರ್ಷಗಳ ಹಿಂದೆ ವಿಚ್ಚೇದನ ಪಡೆದಿದ್ದನು. ಬಾಲಕಿ ತನ್ನ ತಾಯಿಗೆ ನಡೆದ ಘಟನೆಗಳನ್ನು ವಿವರಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿ ತಂದೆ ಮತ್ತು ತಾತಾ ಇಬ್ಬರು ಪರಾರಿಯಾಗಿದ್ದಾರೆ. ಆರೋಪಿಗಳ ಬಲೆಗೆ ಪೊಲೀಸರು ಜಾಲ ಬೀಸಿದ್ದಾರೆ.

Share this Story:

Follow Webdunia kannada