Select Your Language

Notifications

webdunia
webdunia
webdunia
webdunia

ಪಶ್ಚಿಮಬಂಗಾಳ;ವೈದ್ಯನಿಂದ್ಲೇ ಯುವತಿ ಮೇಲೆ ಅತ್ಯಾಚಾರ

ಪಶ್ಚಿಮಬಂಗಾಳ;ವೈದ್ಯನಿಂದ್ಲೇ ಯುವತಿ ಮೇಲೆ ಅತ್ಯಾಚಾರ
ಕೊಲ್ಕತಾ , ಬುಧವಾರ, 29 ಫೆಬ್ರವರಿ 2012 (19:53 IST)
PR
ಹದಿಹರೆಯದ ಯುವತಿಯ ಮೇಲೆ ಕಾಮುಕ ವೈದ್ಯನೋರ್ವ ಅತ್ಯಾಚಾರ ಎಸಗಿರುವ ಘಟನೆ ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ನಡೆದಿದೆ.

ಪ್ರಕರಣದ ಬಗ್ಗೆ ಎಫ್ಐಆರ್ ದಾಖಲಾಗಿದ್ದು, ಯುವತಿಯನ್ನು ವೈದ್ಯಕೀಯ ತಪಾಸಣೆಗಾಗಿ ಕೊಲ್ಕತಾಕ್ಕೆ ಕಳುಹಿಸಲಾಗಿದೆ. ಎದೆನೋವಿನ ಹಿನ್ನೆಲೆಯಲ್ಲಿ 19 ವರ್ಷದ ಯುವತಿಯನ್ನು ಬಂಕುರಾ ಸಮ್ಮಿಲನಿ ಮೆಡಿಕಲ್ ಕಾಲೇಜಿಗೆ ಮಂಗಳವಾರ ರಾತ್ರಿ ದಾಖಲಿಸಲಾಗಿತ್ತು.

ಆದರೆ ಕಾಮುಕ ಕಿರಿಯ ವೈದ್ಯ ಮಂಗೊಲಾ ಗೊರಾಯಿ ಎಂಬಾತ ತನ್ನ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆಕೆಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ಘಟನೆ ಬಗ್ಗೆ ತನಿಖೆ ನಡೆಸಲು ಮೂವರು ಸದಸ್ಯರ ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಆಸ್ಪತ್ರೆಯ ಸೂಪರಿಟೆಂಡೆಂಟ್ ಪಂಚನನ್ ಕುಂದು ತಿಳಿಸಿದ್ದಾರೆ.

Share this Story:

Follow Webdunia kannada