Select Your Language

Notifications

webdunia
webdunia
webdunia
webdunia

ಪರಮಾಣು ಒಪ್ಪಂದ: ಮುಂದಿನ ಸಭೆ ನ.16ಕ್ಕೆ

ಪರಮಾಣು ಒಪ್ಪಂದ: ಮುಂದಿನ ಸಭೆ ನ.16ಕ್ಕೆ
ನವದೆಹಲಿ , ಸೋಮವಾರ, 22 ಅಕ್ಟೋಬರ್ 2007 (19:45 IST)
ಪರಮಾಣು ಒಪ್ಪಂದದ ಬಗ್ಗೆ ಯುಪಿಎ-ಎಡಪಕ್ಷಗಳ ನಡುವೆ ಕದನವು ಅಂತಿಮಘಟ್ಟ ತಲುಪುತ್ತದೆಂದು ಭಾವಿಸಿದ್ದ ಸಭೆಯಲ್ಲಿ ಯಾವ ಪಸೆಯೂ ಇಲ್ಲದೇ ನಿರುತ್ಸಾಹದ ಫಲಿತಾಂಶ ಸಿಕ್ಕಿತು. ಸಭೆಯ ಬಳಿಕ ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ ಸಂಕ್ಷಿಪ್ತ ಸಂದೇಶ ನೀಡಿ, ಮತ್ತಷ್ಟು ಮಾತುಕತೆಗೆ ಎರಡೂ ಪಕ್ಷಗಳು ಒಪ್ಪಿಗೆ ನೀಡಿದ್ದು, ಮುಂದಿನ ಸಭೆಯು ನ.16ರಂದು ನಡೆಯುವುದಾಗಿ ಹೇಳಿದರು.

ಹೈಡ್ ಕಾಯ್ದೆ ಸೇರಿದಂತೆ ಎಡಪಕ್ಷಗಳ ಎಲ್ಲ ಕಳವಳಗಳ ಬಗ್ಗೆ ಸೂಕ್ತ ಪರಿಶೀಲನೆ ನಡೆಸಲು ಯುಪಿಎ ಒಪ್ಪಿರುವುದಾಗಿ ಪ್ರಣವ್ ಮುಖರ್ಜಿ ಮಾಧ್ಯಮಕ್ಕೆ ತಿಳಿಸಿದರು.ಚರ್ಚೆ ಸೌಹಾರ್ದ ಮತ್ತು ಸಹಕಾರದ ವಾತಾವರಣದಲ್ಲಿ ನಡೆಯಿತೆಂದು ಮುಖರ್ಜಿ ಹೇಳಿದರು.

ಭಾರತ-ಅಮೆರಿಕ ಪರಮಾಣು ಒಪ್ಪಂದದ ಲೋಪದೋಷಗಳ ಪರಿಶೀಲನೆಗೆ ರಚಿತವಾದ ಸಮಿತಿಯು ತಾನು ವರದಿ ನೀಡುವ ತನಕ ಪರಮಾಣು ಒಪ್ಪಂದ ಕಾರ್ಯಗತಗೊಳಿಸುವುದಿಲ್ಲವೆಂದು ಆಶಯ ವ್ಯಕ್ತಪಡಿಸಿತೆಂದು ಮುಖರ್ಜಿ ತಿಳಿಸಿದರು.

Share this Story:

Follow Webdunia kannada