Select Your Language

Notifications

webdunia
webdunia
webdunia
webdunia

ಪತ್ನಿಯ ಬೆತ್ತಲೆ ಚಿತ್ರಗಳನ್ನೇ ಗೆಳೆಯರಿಗೆ ಹಂಚಿದ ಪತಿಮಹಾಶಯ

ಪತ್ನಿಯ ಬೆತ್ತಲೆ ಚಿತ್ರಗಳನ್ನೇ ಗೆಳೆಯರಿಗೆ ಹಂಚಿದ ಪತಿಮಹಾಶಯ
ಹೈದರಾಬಾದ್‌ , ಸೋಮವಾರ, 31 ಮಾರ್ಚ್ 2014 (14:06 IST)
ಹೆಂಡತಿಯ ಅಶ್ಲೀಲ ಚಿತ್ರ ತೆಗೆದು ಸ್ನೇಹಿತರಿಗೆ ಇಮೇಲ್‌ ಮಾಡಿದ ಆರೋಪದ ಮೇಲೆ ಬೆಂಗಳೂರಿನ ಸಾಪ್ಟ್ವೇರ್‌ ಇಂಜನೀಯರ್‌ ಒಬ್ಬನನ್ನು ಆಂಧ್ರಪ್ರದೇಶ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಂದಕುಮಾರ್‌ ಜೈ ಎಂಬಾತನನ್ನು ಜೂ.14ರಂದು ಆತನ ಬೆಂಗಳೂರಿನ ನಿವಾಸದಲ್ಲಿ ಆಂಧ್ರ ಪ್ರದೇಶ ಸೈಬರ್‌ ಅಪರಾಧ ಪೊಲೀಸರು ಬಂಧಿಸಲಾಗಿದೆ ಎಂದು ಸಿಐಡಿ ಹೆಚ್ಚುವರಿ ಡಿಜಿಪಿ ಟಿ. ಕೃಷ್ಣಪ್ರಸಾದ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

ನಂದಕುಮಾರ್‌ ಪತ್ನಿ ಆಂಧ್ರದ ಗುಂಟೂರಿನವಳಾಗಿದ್ದು, ಪತಿ ಮೊದಲ ಮದುವೆಯನ್ನು ಮುಚ್ಚಿಟ್ಟಿದ್ದಾನೆ ಎಂದು ಆರೋಪಿಸಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಳೆ. ಈಕೆ ನನ್ನ ಅಶ್ಲೀಲ ಚಿತ್ರಗಳು ಹರಿದಾಡಲು ಗಂಡ ಭಾಗಿಯಾಗಿದ್ದಾನೆ ಎಂದು ಆರೋಪಿಸಿ ಕಳೆದ ವರ್ಷ ಅಗಸ್ಟ್‌ 30ರಂದು ದೂರು ನೀಡಿದ್ದಳು. ಮೊದಲ ಮದುವೆಯಾಗಿರುವುದು ತಿಳಿದು ಬಂದ ಬಳಿಕ ಪತಿಯನ್ನು ತ್ಯಜಿಸಿ ಆಕೆ ಇಂಗ್ಲೆಂಡ್‌ಗೆ ತೆರಳಿದ್ದಳು. ಈ ಸಿಟ್ಟಿಗೆ ನಂದಕುಮಾರ್‌ ಪತ್ನಿಯ ಹೆಸರಿನಲ್ಲಿ ಅಶ್ಲೀಲ ಇ ಮೇಲ್‌ ಕಳುಹಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Share this Story:

Follow Webdunia kannada